ಆ್ಯಪ್ನಗರ

ಬಡ್ಡಿ ದರ ಕಡಿತದ ಲಾಭ ವರ್ಗಾಯಿಸಲು ಆರ್‌ಬಿಐ ಯತ್ನ

ಬ್ಯಾಂಕ್‌ಗಳ ಮುಖ್ಯಸ್ಥರ ಜೊತೆ ಆರ್‌ಬಿಐ ಫೆ.21ರಂದು ಮಾತುಕತೆ ನಡೆಸಲಿದೆ ಎಂದು ಕೇಂದ್ರೀಯ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ತಿಳಿಸಿದ್ದಾರೆ.

Vijaya Karnataka Web 19 Feb 2019, 7:27 am
ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಇತ್ತೀಚೆಗಷ್ಟೇ ರೆಪೋ ದರವನ್ನು ಕಡಿತ ಮಾಡಿದ್ದು, ಇದರ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಮುಖ್ಯಸ್ಥರ ಜೊತೆ ಆರ್‌ಬಿಐ ಫೆ.21ರಂದು ಮಾತುಕತೆ ನಡೆಸಲಿದೆ ಎಂದು ಕೇಂದ್ರೀಯ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ತಿಳಿಸಿದ್ದಾರೆ.
Vijaya Karnataka Web RBI


ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್‌ಬಿಐ ನೀತಿಯ ಪರಿಣಾಮಗಳು ಗ್ರಾಹಕರಿಗೆ ಸಿಗಬೇಕು. ಬಡ್ಡಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ಬ್ಯಾಂಕ್‌ಗಳು ವರ್ಗಾಯಿಸಬೇಕು. ಈ ಬಗ್ಗೆ ಫೆ.21ರಂದು ಸರಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ತಿಂಗಳ ಆರಂಭದಲ್ಲಷ್ಟೇ ಆರ್‌ಬಿಐ ರೆಪೊ ದರವನ್ನು(ಬಡ್ಡಿ ದರ) ಶೇ.0.25ರಷ್ಟು ತಗ್ಗಿಸಿದ್ದು, ಶೇ.6.25ಕ್ಕೆ ಇಳಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ