ಆ್ಯಪ್ನಗರ

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಯಾಕೆ?

ಅಮೆರಿಕ, ಯುರೋಪ್‌ ಸೇರಿದಂತೆ ನಾನಾ ಕಡೆಗಳಲ್ಲಿ ಬಾಂಡ್‌ಗಳ ಹೂಡಿಕೆಯಲ್ಲಿ ಲಭಿಸುವ ಆದಾಯ ಕುಸಿಯುತ್ತಿದೆ. ಮತ್ತೊಂದು ಕಡೆ ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಬಡ್ಡಿ ದರಗಳನ್ನು ಏರಿಸುವುದಿಲ್ಲ ಎಂದು ಕಳೆದ ವಾರ ತಿಳಿಸಿದೆ.

Vijaya Karnataka Web 26 Mar 2019, 5:00 am
ಹೊಸದಿಲ್ಲಿ : ಅಮೆರಿಕ, ಯುರೋಪ್‌ ಸೇರಿದಂತೆ ನಾನಾ ಕಡೆಗಳಲ್ಲಿ ಬಾಂಡ್‌ಗಳ ಹೂಡಿಕೆಯಲ್ಲಿ ಲಭಿಸುವ ಆದಾಯ ಕುಸಿಯುತ್ತಿದೆ. ಮತ್ತೊಂದು ಕಡೆ ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಬಡ್ಡಿ ದರಗಳನ್ನು ಏರಿಸುವುದಿಲ್ಲ ಎಂದು ಕಳೆದ ವಾರ ತಿಳಿಸಿದೆ. ಫೆಡರಲ್‌ ರಿಸರ್ವ್‌ನ ಬಿಗಿ ಆರ್ಥಿಕ ನೀತಿಯು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಉಂಟು ಮಾಡಿತು. ಅಮೆರಿಕದಲ್ಲಿ ಬಾಂಡ್‌ಗಳ ಆದಾಯದ ಪ್ರಮಾಣ 10 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ವಿಶ್ವ ಆರ್ಥಿಕತೆಯ ಬಗ್ಗೆ ನಿರಾಶಾದಾಯಕ ಮುನ್ನೋಟವನ್ನು ಫೆಡರಲ್‌ ರಿಸರ್ವ್‌ ಬಿಂಬಿಸಿದೆ. ಹೀಗಾಗಿ ಅಮೆರಿಕ ಮತ್ತು ಇತರ ರಾಷ್ಟ್ರಗಳ ಆರ್ಥಿಕ ಹಿಂಜರಿತ ಇಡೀ ಜಗತ್ತನ್ನು ಆವರಿಸಲಿದೆಯೇ ಎಂಬ ಆತಂಕ ಷೇರು ಹೂಡಿಕೆದಾರರಲ್ಲಿದೆ.
Vijaya Karnataka Web recession fears hit global markets
ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಯಾಕೆ?


ಭಾರತಕ್ಕೆ ಆತಂಕ ಬೇಡ ?


ಅಮೆರಿಕ ಹಾಗೂ ಜಾಗತಿಕ ಆರ್ಥಿಕತೆಗೆ ಹಿಂಜರಿತ ಸಂಭವಿಸಿದರೂ, ಭಾರತದ ಷೇರು ಹೂಡಿಕೆದಾರರು ಆತಂಕಪಡಬೇಕಾಗಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಭಾರತದ ಜಿಡಿಪಿ ವೇಗವಾಗಿ ಬೆಳೆಯುತ್ತಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಹೀಗಾಗಿ ಆರ್‌ಬಿಐಗೆ ಬಡ್ಡಿ ದರಗಳನ್ನು ಇಳಿಸಲು ಅವಕಾಶ ಇದೆ. ಬಡ್ಡಿ ದರ ಇಳಿಸಿದರೆ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ