ಆ್ಯಪ್ನಗರ

ಕೇಂದ್ರದ ಒತ್ತಡ ಮಧ್ಯೆಯೂ ಸ್ವಾಯತ್ತತೆ ಕಾಯ್ದುಕೊಂಡ ಆರ್‌ಬಿಐ

ಆರ್‌ಬಿಐ ಮತ್ತು ಕೇಂದ್ರದ ಮಧ್ಯೆ ಈ ರೀತಿಯ ಸಮಸ್ಯೆ ಇರುವುದು ಇದು ಮೊದಲೇನಲ್ಲ. 1957ರಲ್ಲಿ ಆರ್‌ಬಿಐ ಗವರ್ನರ್ ಆಗಿದ್ದ ಸರ್ ಬೆನೆಗಲ್ ರಾಮ ರಾವ್ ಅವರ ಕಾಲದಿಂದಲೂ ಇದೇ ಸಮಸ್ಯೆ ಇದೆ.

Vijaya Karnataka Web 30 Oct 2018, 4:42 pm
ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದು ಹಲವು ಸಂದರ್ಭದಲ್ಲಿ ಚರ್ಚೆಗೊಳಗಾಗುತ್ತದೆ. ಪ್ರಸ್ತುತ ಕೇಂದ್ರದ ಸರಕಾರ ಮತ್ತು ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಮಧ್ಯೆ ಉತ್ತಮ ಸಹಕಾರ ಮತ್ತು ಹೊಂದಾಣಿಕೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಆರ್‌ಬಿಐ ಮತ್ತು ಸರಕಾರದ ಮಧ್ಯೆ ಇರುವ ಸಂಬಂಧ ಅಷ್ಟಕಷ್ಟೇ ಎನ್ನಲಾಗುತ್ತಿದೆ.
Vijaya Karnataka Web RBI VS GOVT


ಆರ್‌ಬಿಐ ಮತ್ತು ಕೇಂದ್ರದ ಮಧ್ಯೆ ಈ ರೀತಿಯ ಸಮಸ್ಯೆ ಇರುವುದು ಇದು ಮೊದಲೇನಲ್ಲ. 1957ರಲ್ಲಿ ಆರ್‌ಬಿಐ ಗವರ್ನರ್ ಆಗಿದ್ದ ಸರ್ ಬೆನೆಗಲ್ ರಾಮ ರಾವ್ ಅವರ ಕಾಲದಿಂದಲೂ ಇದೇ ಸಮಸ್ಯೆ ಇದೆ.

ಸಾಮಾನ್ಯವಾಗಿ ವಿವಿಧ ಆರ್ಥಿಕ ನೀತಿ ಮತ್ತು ಯೋಜನೆ ರೂಪಿಸುವ ಸಂದರ್ಭದಲ್ಲಿ ಆರ್‌ಬಿಐ ತಮಗೆ ನಿಷ್ಟವಾಗಿರಲಿ ಎಂದು ಕೇಂದ್ರ ಬಯಸುತ್ತದೆ. ಆದರೆ ಆರ್‌ಬಿಐ ಮಾತ್ರ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳತೆ, ಸ್ವಾಯತ್ತತೆಯನ್ನು ಎತ್ತಿ ಹಿಡಿಯುತ್ತದೆ.

ಆರ್‌ಬಿಐ ಪ್ರಸಕ್ತ ಗವರ್ನರ್ ಉರ್ಜಿತ್ ಪಟೇಲ್ ಕೂಡ ಇದಕ್ಕೆ ಭಿನ್ನವಾಗಿಲ್ಲ. ಕೇಂದ್ರದ ಪರವಾಗಿರುವಂತೆ ಹಲವು ಬಾರಿ ಸರಕಾರ ಅಪೇಕ್ಷೆ ಪಟ್ಟಿದ್ದರೂ, ಅದಕ್ಕೆ ಅವರು ಸೊಪ್ಪು ಹಾಕಿಲ್ಲ. ಹಿಂದಿನ ಸರಕಾರವೂ ಅಷ್ಟೇ, ಆರ್‌ಬಿಐ ಅನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಳಲು ಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಆರ್‌ಬಿಐ ಆರ್ಥಿಕ ನೀತಿ ಸಮಿತಿ, ಬಡ್ಡಿದರ ನಿಗದಿಪಡಿಸುವುದು, ಬಡ್ಡಿದರ ಏರಿಕೆ, ಇಳಿಕೆ ಕುರಿತು ಸ್ವತಂತ್ರ ನಿರ್ಧಾರ ಕೈಗೊಂಡಿದೆ.
ಸರಕಾರ 66,000 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದ್ದರೂ, 30,000 ಕೋಟಿ ರೂ. ಮಾತ್ರ ಮಂಜೂರು ಮಾಡಿದೆ.
ಸಾಲದ ಕುರಿತಾದ ನೀತಿಗಳ ಬದಲಾವಣೆಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಲವು ನಿರ್ಬಂಧ ವಿಧಿಸಿದ್ದು, ಸ್ವತಂತ್ರ್ಯ ನಿರ್ಧಾರ ಕೈಗೊಳ್ಳದಂತೆ ಮಾಡಿದೆ.
ಸಾಲ ನೀಡಿಕೆ ಮತ್ತು ಬ್ಯಾಂಕ್‌ಗಳ ನೀತಿ ರೂಪಣೆಯಲ್ಲಿ ಕಠಿಣ ನಿಯಮ ಜಾರಿಗೆ ತಂದಿದೆ.

ಪಾವತಿ ಮತ್ತು ಸೆಟ್ಲ್‌ಮೆಂಟ್ ಕುರಿತು ನಿಯಂತ್ರಣ ಜಾರಿ ಮಾಡಿದ್ದು, ಸ್ಪಷ್ಟ ನೀತಿ ತಂದಿದೆ.
ಆರ್‌ಬಿಐ ಸಂಬಂಧಿತ ಮಂಡಳಿಗಳಿಗೆ ನೇಮಕಾತಿ ವಿಚಾರದಲ್ಲಿ ಸರಕಾರದ ಶಿಫಾರಸಿಗೆ ಮಣೆ ಹಾಕಿಲ್ಲ.

ತೈಲ ಸಂಸ್ಥೆಗಳ ಪಾವತಿಗೆ ವಿಶೇಷ ಡಾಲರ್ ವಿಂಡೋ ವ್ಯವಸ್ಥೆ ಕಲ್ಪಿಸಿ, ಅನುಕೂಲ ಮಾಡಿಕೊಟ್ಟಿದೆ.
ಎನ್‌ಬಿಎಫ್‌ಸಿ ಕುರಿತಂತೆ ಮತ್ತು ಸಾಲ ಮರುಪಾವತಿ, ವಸೂಲಾತಿ ಕುರಿತ ನಿರ್ದೇಶನ ನೀಡಿದೆ.

ಹಣಕಾಸು ಮತ್ತು ಆರ್ಥಿಕ ನೀತಿ ಕುರಿತು ಆರ್‌ಬಿಐ ಸದಾ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ಜತೆಗೆ, ಅಧೀನ ಬ್ಯಾಂಕ್‌ಗಳ ನೀತಿ, ನಿಯಮಗಳ ಬಗೆಗೂ ಕಣ್ಣಿಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ