ಆ್ಯಪ್ನಗರ

ರಿಲಯನ್ಸ್‌ - ಫ್ಯೂಚರ್‌ ಡೀಲ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಲು ಅಮೆಜಾನ್‌ ಚಿಂತನೆ

ಕೆಲವು ದಿನಗಳ ಹಿಂದೆ 24,713 ಕೋಟಿ ರೂಪಾಯಿಗೆ ಫ್ಯೂಚರ್‌ ಗ್ರೂಪ್‌ ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್‌ ಲಿ.‌ ನಿರ್ಧರಿಸಿತ್ತು. ಆದರೆ ಪರೋಕ್ಷವಾಗಿ ಫ್ಯೂಚರ್‌ ಗ್ರೂಪ್‌ನಲ್ಲಿ ಶೇ. 5ರಷ್ಟು ಷೇರುಗಳನ್ನು ಹೊಂದಿರುವ ಅಮೆಜಾನ್‌ ಈ ಒಪ್ಪಂದಕ್ಕೆ ತಗಾದೆ ತೆಗೆದಿದೆ.

Agencies 29 Oct 2020, 4:38 pm
ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಮತ್ತು ಫ್ಯೂಚರ್‌ ಗ್ರೂಪ್‌ ನಡುವಿನ ಡೀಲ್‌ ವಿರುದ್ಧ ಸಿಂಗಾಪುರ ನ್ಯಾಯಾಲಯದಲ್ಲಿ ಮಧ್ಯಂತರ ಗೆಲುವು ಪಡೆದ ಅಮೆಜಾನ್‌, ಇದೀಗ ಈ ಆದೇಶ ಜಾರಿ ಸಂಬಂಧ ಮುಂದಿನವಾರ ಭಾರತದ ಹೈಕೋರ್ಟ್‌ ಒಂದರ ಮೆಟ್ಟಿಲೇರಲು ಚಿಂತನೆ ನಡೆಸಿದೆ.
Vijaya Karnataka Web Amazon


ಸಿಂಗಾಪುರ ಅಂತಾರಾಷ್ಟ್ರೀಯ ವ್ಯಾಜ್ಯ ಕೇಂದ್ರದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಮುಂದುವರಿಸಬೇಕೇ ಅಥವಾ ಕೈ ಬಿಡಬೇಕೇ ಎಂಬುದನ್ನು ತೀರ್ಮಾನಿಸಲು ಫ್ಯೂಚರ್‌ ಗ್ರೂಪ್‌ ಮತ್ತು ಅಮೆಜಾನ್‌ಗೆ ವಾರಗಳ ಅವಕಾಶ ನೀಡಲಾಗಿದೆ. ಒಂದೊಮ್ಮೆ ಎರಡೂ ಕಂಪನಿಗಳ ನಡುವೆ ಸಂಧಾನ ನಡೆಯದೇ ಇದ್ದಲ್ಲಿ ಸುದೀರ್ಘ ಅವಧಿಯ ಕಾನೂನು ಸಮರ ಆರಂಭವಾಗಲಿದೆ.

ತನ್ನ ಆಸ್ತಿಗಳನ್ನು ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ಗೆ ಮಾರಾಟ ಮಾಡದಂತೆ ಭಾನುವಾರ ಸಿಂಗಾಪುರ ನ್ಯಾಯಾಲಯ ಫ್ಯೂಚರ್‌ ಗ್ರೂಪ್‌ಗೆ ನಿರ್ಬಂಧ ವಿಧಿಸಿತ್ತು.

ಇದಕ್ಕೂ ಮುನ್ನ 24,713 ಕೋಟಿ ರೂಪಾಯಿಗೆ ಫ್ಯೂಚರ್‌ ಗ್ರೂಪ್‌ ಖರೀದಿಗೆ ರಿಲಯನ್ಸ್‌ ಒಪ್ಪಂದ ಮಾಡಿಕೊಂಡಿತ್ತು. ಆದರೆ ಪರೋಕ್ಷವಾಗಿ ಫ್ಯೂಚರ್‌ ಗ್ರೂಪ್‌ನಲ್ಲಿ ಶೇ. 5ರಷ್ಟು ಷೇರುಗಳನ್ನು ಹೊಂದಿರುವ ಅಮೆಜಾನ್‌ ಈ ಒಪ್ಪಂದದ ವಿರುದ್ಧ ಸಿಂಗಾಪುರ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲಿ ಕಂಪನಿಗೆ ಮಧ್ಯಂತರ ಜಯ ಸಿಕ್ಕಿತ್ತು.

ಕೋರ್ಟ್‌ನಲ್ಲಿ ಅಮೆಜಾನ್‌ಗೆ ಗೆಲುವು, ತೂಗುಯ್ಯಾಲೆಯಲ್ಲಿ ರಿಲಯನ್ಸ್‌-ಫ್ಯೂಚರ್‌ ಗ್ರೂಪ್‌ ಡೀಲ್‌
ಇದೀಗ ಸಿಂಗಾಪುರ ಕೋರ್ಟ್‌ನ ಆದೇಶವನ್ನು ಒಪ್ಪಿಕೊಂಡು, ಅಂತಿಮ ಆದೇಶಕ್ಕೆ ಕಾಯುವ ಅವಕಾಶ ಫ್ಯೂಚರ್‌ ಗ್ರೂಪ್‌ ಹಾಗೂ ಅಮೆಜಾನ್‌ಗೆ ಇದೆ. ಒಂದೊಮ್ಮೆ ಈ ಆದೇಶಕ್ಕೆ ಒಪ್ಪಿಕೊಂಡಲ್ಲಿ ವಿಚಾರಣೆ ಮುಂದುವರಿಯಲಿದೆ. ಅಷ್ಟೇ ಅಲ್ಲ, ಆದೇಶ ಪಾಲನೆ ಸಂಬಂಧ ಅಮೆಜಾನ್‌ ಭಾರತದ ನ್ಯಾಯಾಲಯದ ಮೆಟ್ಟಿಲೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ