ಆ್ಯಪ್ನಗರ

ಶೀಘ್ರದಲ್ಲೇ ರಿಲಯನ್ಸ್ ಜಿಯೋ ರೀತಿಯಲ್ಲೇ ಜಿಯೋ ಪೇಮೆಂಟ್ಸ್ ಬ್ಯಾಂಕ್

ಇದೇ ರೀತಿ ರಿಲಯನ್ಸ್ ಜಿಯೋ ಆಗಸ್ಟ್ 2015ರಲ್ಲೇ ತನ್ನ 100,000 ನೌಕರರಿಗೆ ಬೀಟಾ ಸೇವೆ ಆರಂಭಿಸಿದೆ. ಇದೇ ನೆಟ್‌ವರ್ಕ್‌ಗೆ ಸೇರಲು ಬೇರೆಯವರಿಗೆ ಇನ್‍ವೈಟ್ ಕಳುಹಿಸಿ ಸೇರ್ಪಡೆ ಮಾಡಿಕೊಳ್ಳಬಹುದು.

Vijaya Karnataka Web 24 Oct 2018, 3:31 pm
ಮುಂಬೈ: ಶೀಘ್ರದಲ್ಲೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ಆರಂಭಿಸಲು ಸಿದ್ಧವಾಗಿದೆ ಎಂದು ಕಂಪೆನಿಯ ಇಬ್ಬರು ಕಾರ್ಯನಿರ್ವಾಹಕರು ಮಾಹಿತಿ ನೀಡಿದ್ದಾರೆ. ಆರ್‌‍ಐಎಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಜಂಟಿಯಾಗಿ ಜಿಯೋ ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ಪರಿಚಯಿಸಲಿವೆ. ಮೂರು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ ಆರಂಭಿಸಿದ ರೀತಿಯಲ್ಲೇ ಜಿಯೋ ಪೇಮೆಂಟ್ಸ್ ಬ್ಯಾಂಕ್ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ಸೂಚನೆಯನ್ನು ಕಂಪೆನಿ ನೀಡಿದೆ.
Vijaya Karnataka Web jio


ಅಧಿಕೃತವಾಗಿ ಈ ಸೇವೆಯನ್ನು ಗ್ರಾಹಕರಿಗೆ ಒದಗಿಸುವುದಕ್ಕೂ ಮುನ್ನ ಈ ಸೇವೆಯಲ್ಲಿನ ಲೋಪದೋಷಗಳನ್ನು ತಿಳಿದುಕೊಳ್ಳಲು ಆರ್‌‍ಐಎಲ್ ತನ್ನ ನೌಕರರ ಜತೆಗೆ ಪರಿಶೀಲಿಸಿದೆ. "ಈಗಾಗಲೆ ಜಿಯೋ ಪೇಮೆಂಟ್ ಬ್ಯಾಂಕ್‌ನ ಲೈವ್ ಬೀಟಾ ಪರೀಕ್ಷೆ ಆರಂಭಿಸಿದ್ದೇವೆ. ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ವಾಣಿಜ್ಯ ಪರಿಹಾರಗಳ ಸೇವೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ" ಎಂದಿದ್ದಾರೆ ರಿಲಯನ್ಸ್ ಜಿಯೋದ ಯೋಜನಾ ಮುಖ್ಯಸ್ಥರಾದ ಅನ್ಷುಮಾನ್ ಠಾಕೂರ್.

ಈಗಾಗಲೆ ನಮ್ಮ ದೇಶದಲ್ಲಿ ಟೆಲಿಕಾಂ ದಿಗ್ಗಜ ಭಾರತಿ ಏರ್‌ಟೆಲ್ ಲಿಮಿಟೆಡ್ 2016ರಲ್ಲಿ ಪೇಮೆಂಟ್ಸ್ ಬ್ಯಾಂಕ್ ಸೇವೆ ಆರಂಭಿಸಿದೆ. ಮೇ 2017ರಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆ ಆರಂಭವಾಯಿತು. ಕಳೆದ ವರ್ಷ ಜೂನ್‌ನಲ್ಲಿ ಫಿನೋ ಪೇಮೆಂಟ್ಸ್ ಬ್ಯಾಂಕ್ ಆರಂಭವಾಗಿದೆ.

ಇದೇ ರೀತಿ ರಿಲಯನ್ಸ್ ಜಿಯೋ ಆಗಸ್ಟ್ 2015ರಲ್ಲೇ ತನ್ನ 100,000 ನೌಕರರಿಗೆ ಬೀಟಾ ಸೇವೆ ಆರಂಭಿಸಿದೆ. ಇದೇ ನೆಟ್‌ವರ್ಕ್‌ಗೆ ಸೇರಲು ಬೇರೆಯವರಿಗೆ ಇನ್‍ವೈಟ್ ಕಳುಹಿಸಿ ಸೇರ್ಪಡೆ ಮಾಡಿಕೊಳ್ಳಬಹುದು.

ಪೇಮೆಂಟ್ಸ್ ಬ್ಯಾಂಕ್ ಎಂಬುದು ಮುಖ್ಯವಾಗಿ ಮೊಬೈಲ್ ಆಧಾರಿತ ಸೇವೆಯಾಗಿದ್ದು, ಕಾಗದ ರಹಿತ ಮತ್ತು ತಂತ್ರಜ್ಞಾನ ಆಧಾರಿತವಾಗಿದೆ. ಉಳಿತಾಯ/ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ₹ 1 ಲಕ್ಷದ ತನಕ ಠೇವಣಿಯನ್ನು ಸ್ವೀಕರಿಸಬಹುದಾಗಿದೆ. ಆದರೆ ಇಲ್ಲಿ ಸಾಮಾನ್ಯ ಬ್ಯಾಂಕ್‌ಗಳಂತೆ ಸಾಲ ಸೌಲಭ್ಯ ನೀಡಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ