ಆ್ಯಪ್ನಗರ

ರಿಲಯನ್ಸ್‌ ನಿವ್ವಳ ಲಾಭ 15% ಇಳಿಕೆ, 9,567 ಕೋಟಿ ರೂ.ಗೆ ಕುಸಿತ

ತೈಲ ಸಂಸ್ಕರಣೆಯಿಂದ ರಿಲಯನ್ಸ್‌ ಪಡೆಯುವ ಆದಾಯ ಶೇ.36ರಷ್ಟು ಇಳಿಕೆಯಾಗಿದೆ. ವಿಶ್ವದ ಅತೀ ದೊಡ್ಡ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್‌ ಘಟಕವನ್ನು ಕಂಪನಿ ನಿರ್ವಹಿಸುತ್ತಿದ್ದು, ಇದರ ಆದಾಯ ಶೇ. 23ರಷ್ಟು ಕುಸಿದಿದೆ

Agencies 31 Oct 2020, 1:10 pm
ಹೊಸದಿಲ್ಲಿ: ಮೇಲಿಂದ ಮೇಲೆ ಕಂಪನಿಗಳನ್ನು ಖರೀದಿಸುತ್ತಾ, ಹೂಡಿಕೆಗಳನ್ನು ಪಡೆದುಕೊಳ್ಳುತ್ತಿರುವ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ 9,567 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯು 11,262 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ. 15ರಷ್ಟು ಇಳಿಕೆಯಾಗಿದೆ.
Vijaya Karnataka Web Mukesh Ambani


ರಿಫೈನರಿಯಿಂದ ರಿಟೇಲ್‌ವರಿಗಿನ ವ್ಯವಹಾರಗಳನ್ನು ನಡೆಸುವ ಕಂಪನಿಯ ಆದಾಯ 1.16 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಕಳೆದ ವರ್ಷದ 1.53 ಲಕ್ಷ ಕೋಟಿ ಆದಾಯಕ್ಕೆ ಹೋಲಿಸಿದರೆ ಈ ಬಾರಿ ಶೇ. 24ರಷ್ಟು ಆದಾಯ ಕುಸಿದಿದೆ.

ತೈಲ ಸಂಸ್ಕರಣೆಯಿಂದ ಪಡೆಯುವ ಆದಾಯ ಶೇ.36ರಷ್ಟು ಇಳಿಕೆಯಾಗಿದೆ. ವಿಶ್ವದ ಅತೀ ದೊಡ್ಡ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್‌ ಘಟಕವನ್ನು ಕಂಪನಿ ನಿರ್ವಹಿಸುತ್ತಿದ್ದು, ಇದರ ಆದಾಯವೇ ಶೇ. 23ರಷ್ಟು ಕಡಿಮೆಯಾಗಿದೆ.

ಪ್ರತಿ ಬ್ಯಾರಲ್‌ ಕಚ್ಚಾ ತೈಲ ಸಂಸ್ಕರಣೆಯಿಂದ ಗಳಿಸುವ ಆದಾಯ 5.7 ಡಾಲರ್‌ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9.4 ಡಾಲರ್‌ ಇದ್ದ ಆದಾಯ, ಕಳೆದ ತ್ರೈಮಾಸಿಕದಲ್ಲಿ 6.3 ಡಾಲರ್‌ಗೆ ಇಳಿಕೆಯಾಗಿತ್ತು. ಇದೀಗ ಮತ್ತೂ ಇಳಿಕೆಯಾಗಿದೆ.

ರಿಲಯನ್ಸ್‌ ಜಿಯೋ ನಿವ್ವಳ ಲಾಭ ಭಾರಿ ಏರಿಕೆ, 2,844 ಕೋಟಿ ರೂ.ಗೆ ಹೆಚ್ಚಳ

ಕೊರೊನಾದಿಂದ ಕಂಪನಿಯ ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದೆ. ಆದರೆ ರಿಲಯನ್ಸ್‌ ಜಿಯೋದ ಆದಾಯ ಮಾತ್ರ ಶೇ. 33ರಷ್ಟು ಹೆಚ್ಚಳಗೊಂಡಿದೆ. ಇನ್ನು ಇತ್ತೀಚೆಗೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ರಿಲಯನ್ಸ್‌ ರಿಟೇಲ್‌ನ ಆದಾಯವೂ ಶೇ.4.9ರಷ್ಟು ಇಳಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಆದಾಯ ಶೇ. 17ರಷ್ಟು ಕುಸಿದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ