ಆ್ಯಪ್ನಗರ

ಜನವರಿಯಲ್ಲಿ ಜಿಯೊ ತೆಕ್ಕೆಗೆ 80 ಲಕ್ಷ ಗ್ರಾಹಕರು

ರಿಲಯನ್ಸ್‌ ಜಿಯೊ 4ಜಿ ಮೊಬೈಲ್‌ ಜಾಲಕ್ಕೆ ಜನವರಿಯಲ್ಲಿ 83 ಲಕ್ಷ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಇದರೊಂದಿಗೆ ಜನವರಿಯಲ್ಲಿ ಕಂಪನಿಯ ಮಾರುಕಟ್ಟೆ ಷೇರು 14 ಪರ್ಸೆಂಟ್‌ ವೃದ್ಧಿಸಿದೆ...

TNN 24 Mar 2018, 5:00 am
ಕೋಲ್ಕೊತಾ: ರಿಲಯನ್ಸ್‌ ಜಿಯೊ 4ಜಿ ಮೊಬೈಲ್‌ ಜಾಲಕ್ಕೆ ಜನವರಿಯಲ್ಲಿ 83 ಲಕ್ಷ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಜನವರಿಯಲ್ಲಿ ಕಂಪನಿಯ ಮಾರುಕಟ್ಟೆ ಷೇರು 14 ಪರ್ಸೆಂಟ್‌ ವೃದ್ಧಿಸಿದೆ.
Vijaya Karnataka Web reliance jio added 8 3 mn users in jan trai
ಜನವರಿಯಲ್ಲಿ ಜಿಯೊ ತೆಕ್ಕೆಗೆ 80 ಲಕ್ಷ ಗ್ರಾಹಕರು


ಇದೇ ಅವಧಿಯಲ್ಲಿ ಜಿಯೊ ಪ್ರತಿಸ್ಪರ್ಧಿ ಕಂಪನಿಗಳಾದ ಏರ್‌ಟೆಲ್‌ 15 ಲಕ್ಷ, ವೊಡಾಫೋನ್‌ 12 ಲಕ್ಷ ಮತ್ತು ಐಡಿಯಾ ಸೆಲ್ಯುಲರ್‌ 14 ಲಕ್ಷ ಗ್ರಾಹಕರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿವೆ. ಟೆಲಿಕಾಂ ವಲಯದಲ್ಲಿನ ತೀವ್ರ ಸ್ಪರ್ಧೆ ಮತ್ತು ಮೊಬೈಲ್‌ ಜಾಲಗಳ ಹೊಸ ಬಳಕೆದಾರರಿಗೆ ಸಂಬಂಧಿಸಿದ ಅಂಕಿಅಂಶಗಳ ವರದಿಯನ್ನು ಟ್ರಾಯ್‌ ಶುಕ್ರವಾರ ಬಿಡುಗಡೆ ಮಾಡಿದೆ.

ದರ ಸಮರಗಳು ಮುಂದುವರೆದಿದ್ದು, ಜಿಯೊ ಸ್ಪರ್ಧೆ ತೀವ್ರವಾಗಿದೆ. ಆದಾಗ್ಯೂ, 29 ಕೋಟಿ ಗ್ರಾಹಕರನ್ನು ಹೊಂದಿರುವ ಏರ್‌ಟೆಲ್‌ ದೇಶದ ಬೃಹತ್‌ ಟೆಲಿಫೋನ್‌ ಕಂಪನಿ ಎನ್ನುವ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದೆ. ಮುಕೇಶ್‌ ಅಂಬಾನಿ ನೇತೃತ್ವದ ಜಿಯೊ 16 ಕೋಟಿ ಗ್ರಾಹಕರನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ವೋಡಾಫೋನ್‌ 21 ಕೋಟಿ, ನಂತರದ ಸ್ಥಾನದಲ್ಲಿರುವ ಐಡಿಯಾ 19 ಕೋಟಿ ಗ್ರಾಹಕರನ್ನು ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ