ಆ್ಯಪ್ನಗರ

ರೆಪೊ ಇಳಿಕೆಯಾದಂತೆ ಎಫ್‌ಡಿ ನಂಬಿಕೊಂಡಿದ್ದವರ ಆದಾಯವೂ ಇಳಿಕೆಯಾಗುತ್ತದೆ!

ಬ್ಯಾಂಕ್‌ಗಳ ಎಫ್‌ಡಿಗಳ ಬಡ್ಡಿ ದರವನ್ನು ಅವಲಂಬಿಸಿರುವ ಅಸಂಖ್ಯಾತ ಜನತೆಗೆ, ಮುಖ್ಯವಾಗಿ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರಿಗೆ ರೆಪೊ ಇಳಿಕೆಯಿಂದ ಆದಾಯ ಇಳಿಕೆಯಾಗಲಿದೆ. ಈ ನಡುವೆ ಭವಿಷ್ಯದಲ್ಲಿ ಮತ್ತಷ್ಟು ರೆಪೊ ಇಳಿಕೆ ಸಂಭವದ ಸೂಚನೆಯನ್ನು ಆರ್‌ಬಿಐ ನೀಡಿದೆ.

Vijaya Karnataka Web 23 May 2020, 8:12 am
ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ರೆಪೊ ದರವನ್ನು ಶೇ.4ಕ್ಕೆ ಕಡಿತಗೊಳಿಸಿದ ಪರಿಣಾಮ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಗಳ (ಫಿಕ್ಸೆಡ್‌ ಡಿಪಾಸಿಟ್‌) ಮೇಲಿನ ಬಡ್ಡಿ ದರದಲ್ಲೂ ಗಣನೀಯ ಕಡಿತ ಖಚಿತವಾಗಿದೆ. ಇದರ ಪರಿಣಾಮ ಬ್ಯಾಂಕ್‌ಗಳ ಎಫ್‌.ಡಿಗಳ ಬಡ್ಡಿ ದರವನ್ನು ಅವಲಂಬಿಸಿರುವ ಅಸಂಖ್ಯಾತ ಜನತೆಗೆ, ಮುಖ್ಯವಾಗಿ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರಿಗೆ ಆದಾಯ ಇಳಿಕೆಯಾಗಲಿದೆ.
Vijaya Karnataka Web fixed deposit


ಈಗಾಗಲೇ ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಹಿರಿಯ ನಾಗರಿಕರು, ಸಣ್ಣ ಉಳಿತಾಯಗಾರರು ಸಂಕಷ್ಟದಲ್ಲಿದ್ದು, ಮುಂಬರುವ ದಿನಗಳಲ್ಲಿ ಬಡ್ಡಿ ದರದ ಆದಾಯ ಇಳಿಕೆಯನ್ನೂ ಎದುರಿಸಬೇಕಾಗಿದೆ.

ಯಾರಿಗೆ ಅನ್ವಯ?
ರೆಪೊ ದರ ಕಡಿತವಾದಾಗ ಬ್ಯಾಂಕ್‌ಗಳು ಹೊಸತಾಗಿ ಸಂಗ್ರಹಿಸುವ ಫಿಕ್ಸೆಡ್‌ ಡಿಪಾಸಿಟ್‌ಗಳ ಮೇಲೆ ಬಡ್ಡಿ ದರ ಕಡಿತ ಮಾಡುತ್ತವೆ. ಹಳೆಯ ಠೇವಣಿಗಳಿಗೆ ಅವಧಿ ಮುಕ್ತಾಯವಾಗುವ ತನಕ ಹಳೆಯ ದರವೇ ಚಾಲ್ತಿಯಲ್ಲಿರುತ್ತದೆ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರಾದ ವೈ ಸುಧೀರ್‌. ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಕಡಿತಗೊಳಿಸಲು ಫಿಕ್ಸೆಡ್‌ ಡಿಪಾಸಿಟ್‌ಗಳ ಮೂಲಕ ಸಿಗುವ ನಿಧಿಯನ್ನು ಸಾಮಾನ್ಯವಾಗಿ ಸುಲಭವಾಗಿ ಬಳಸುತ್ತವೆ. ಇದರ ಜತೆಗೆ ಆರ್‌ಬಿಐನಿಂದ ರೆಪೊ ದರದಲ್ಲಿ ಸಿಗುವ ನಿಧಿಯನ್ನೂ ಬಳಸುತ್ತವೆ.

ರೆಪೊ ಇಳಿಕೆ: ಠೇವಣಿ ಮೇಲಿನ ಬಡ್ಡಿ ಕಡಿಮೆಯಾಗದಿರಲು ಹಿರಿಯರೇನು ಮಾಡಬೇಕು?

ಬ್ಯಾಂಕ್‌ಗಳು ಮಾಡಬೇಕಾದ್ದೇನು?
ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳು ಕೂಡಲೇ ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ಗೃಹ ಸಾಲ, ವಾಹನ ಸಾಲ ಇತ್ಯಾದಿ ರಿಟೇಲ್‌ ಸಾಲಗಳ ಬಡ್ಡಿ ದರವನ್ನು ಇಳಿಸಬೇಕಾಗುತ್ತದೆ. ಕಡಿಮೆ ಬಡ್ಡಿ ದರದಲ್ಲಿಸಾಲ ಕೊಟ್ಟಾಗ ಬ್ಯಾಂಕ್‌ಗಳ ಆದಾಯವೂ ಕಡಿಮೆಯಾಗುತ್ತದೆ. ಆಗ ಠೇವಣಿಯ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಇಳಿಸುತ್ತವೆ. ಇದರ ಪರಿಣಾಮ ಹೊಸ ಡಿಪಾಸಿಟ್‌ಗಳ ಬಡ್ಡಿ ಇಳಿಯುತ್ತದೆ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರು.

ಎಸ್‌ಬಿಐ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಇತ್ತೀಚೆಗೆ ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳಲ್ಲಿ ಹೆಚ್ಚಿನ ಬಡ್ಡಿ ದರ ನೀಡುವ ಪ್ರತ್ಯೇಕ ಯೋಜನೆಗಳನ್ನು ಘೋಷಿಸಿವೆ. ಹೀಗಿದ್ದರೂ ಎಲ್ಲಬ್ಯಾಂಕ್‌ಗಳೂ ಇಂಥ ಯೋಜನೆಗಳನ್ನು ಹೊಂದಿಲ್ಲ.

ಎಲ್ಲ ವಲಯ ಖಾಸಗಿಗೆ ಮುಕ್ತ: ನಿರ್ಮಲಾ ಸೀತಾರಾಮನ್ ವಿಶೇಷ ಸಂದರ್ಶನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ