ಆ್ಯಪ್ನಗರ

ರೆಪೊ ಕಡಿತದಿಂದ ಗೃಹ ಸಾಲದ ಇಎಂಐನಲ್ಲಿ ಎಷ್ಟು ಕಡಿತವಾದೀತು? ಇಲ್ಲಿದೆ ಲೆಕ್ಕಾಚಾರ!

ಆರ್‌ಬಿಐ ರೆಪೊ ದರ ಕಡಿತದ ಪರಿಣಾಮ ಗೃಹ ಸಾಲದ ಇಎಂಐನಲ್ಲಿ ಎಷ್ಟು ಕಡಿತವಾದೀತು ಎಂಬ ಲೆಕ್ಕಾಚಾರದಲ್ಲಿ ನೀವಿರಬಹುದು. ಉದಾಹರಣೆಗೆ 20 ವರ್ಷಗಳ ಅವಧಿಗೆ ತೆಗೆದುಕೊಂಡ 30 ಲಕ್ಷ ರೂ. ಗೃಹ ಸಾಲದಲ್ಲಿ ಇಎಂಐ ಕಡಿತವಾಗುವುದೆಷ್ಟು? ಇಲ್ಲಿದೆ ಲೆಕ್ಕಾಚಾರ.

Vijaya Karnataka Web 23 May 2020, 8:33 am
ಹೊಸದಿಲ್ಲಿ: ವ್ಯಕ್ತಿಯೊಬ್ಬ 30 ಲಕ್ಷ ರೂ. ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡಿದ್ದರೆ ಹೊಸ ಲೆಕ್ಕಾಚಾರ ಹೀಗಿದೆ.
Vijaya Karnataka Web Home Loan


ಸಾಲದ ಮೊತ್ತ: 30 ಲಕ್ಷ ರೂ.
ಅವಧಿ: 20 ವರ್ಷ.
ಹಳೆಯ ಬಡ್ಡಿ ದರ: ಶೇ.7.40,
ಹೊಸ ಬಡ್ಡಿ ದರ: ಶೇ.7.
ಈಗಿನ ಇಎಂಐ: 23,985 ರೂ.
ಹೊಸ ಇಎಂಐ: 23,259 ರೂ.
ಇಎಂಐನಲ್ಲಿ ಕಡಿತವಾದ ಮೊತ್ತ: 726 ರೂ.

ಎಂಸಿಎಲ್‌ಆರ್‌ ಮತ್ತು ಇಬಿಎಲ್‌ಆರ್‌ ವ್ಯಾತ್ಯಾಸವೇನು?
ಬ್ಯಾಂಕ್‌ಗಳು ಎರಡು ಪದ್ಧತಿಯಲ್ಲಿ ಗೃಹ ಸಾಲ ಮತ್ತು ಇತರ ಕೆಲ ಸಾಲಗಳ ಬಡ್ಡಿ ದರಗಳನ್ನು ನಿರ್ಣಯಿಸುತ್ತವೆ. ಹಳೆಯ ಪದ್ಧತಿಯಾದ ಎಂಸಿಎಲ್‌ಆರ್‌ ಎಂದರೆ ಮಾರ್ಜಿನಲ್‌ ಕಾಸ್ಟ್‌ ಆಫ್‌ ಲೆಂಡಿಂಗ್‌ ರೇಟ್‌. ಹೊಸ ಪದ್ಧತಿ ಇಬಿಎಲ್‌ಆರ್‌ ಎಂದರೆ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್ ಲೆಂಡಿಂಗ್‌ ರೇಟ್‌. ಎರಡೂ ಭಿನ್ನ ಮಾನದಂಡವನ್ನು ಹೊಂದಿದೆ. ಎಂಸಿಎಲ್‌ಆರ್‌ನಿಂದ ಇಬಿಎಲ್‌ಆರ್‌ಗೆ ಬದಲಿಸಬೇಕಿದ್ದರೆ ಗ್ರಾಹಕರು ಬ್ಯಾಂಕಿಗೆ ಮನವಿ ಸಲ್ಲಿಸಬೇಕು.

ರೆಪೊ ಇಳಿಕೆಯಾದಂತೆ ಎಫ್‌ಡಿ ನಂಬಿಕೊಂಡಿದ್ದವರ ಆದಾಯವೂ ಇಳಿಕೆಯಾಗುತ್ತದೆ!

ಈಗ ಯಾವುದು ಸೂಕ್ತ?
ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಆರ್‌ಬಿಐ ಅನಿರೀಕ್ಷಿತವಾಗಿ ಯಾವಾಗ ಬೇಕಾದರೂ ಬಡ್ಡಿ ದರಗಳನ್ನು ಇಳಿಸಬಹುದು ಎಂಬ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಹಕರು ಇಬಿಎಲ್‌ಆರ್‌ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರು. ಯಾಕೆಂದರೆ ಇಬಿಎಲ್‌ಆರ್‌ನಲ್ಲಿ ರೆಪೊ ದರವೇ ಮುಖ್ಯವಾದ ಅಂಶ. ರೆಪೊ ದರ ಕಡಿಮೆಯಾದಾಗ ಅದರ ನೇರ ಲಿಂಕ್‌ ಇರುವುದರಿಂದ ಇಬಿಎಲ್‌ಆರ್‌ ಪದ್ಧತಿಯಲ್ಲಿ ಬಡ್ಡಿ ದರ ತಕ್ಷಣ ಕಡಿಮೆಯಾಗುತ್ತದೆ. ಆದರೆ ಎಂಸಿಎಲ್‌ಆರ್‌ನಲ್ಲಿ ಬ್ಯಾಂಕಿಗೆ ಸಾಲಕ್ಕೆ ತಗಲುವ ವೆಚ್ಚಗಳು ನಿರ್ಣಾಯಕ ಹಾಗೂ ಅದು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ಆದ್ದರಿಂದ ಸದ್ಯದ ಸನ್ನಿವೇಶದಲ್ಲಿ ಇಬಿಎಲ್‌ಆರ್‌ ಸೂಕ್ತ ಎನ್ನುತ್ತಾರೆ ಹಣಕಾಸು ತಜ್ಞರು.

ರೆಪೊ ಇಳಿಕೆ: ಠೇವಣಿ ಮೇಲಿನ ಬಡ್ಡಿ ಕಡಿಮೆಯಾಗದಿರಲು ಹಿರಿಯರೇನು ಮಾಡಬೇಕು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ