ಆ್ಯಪ್ನಗರ

ಬಿಎಸ್ಸೆನ್ನೆಲ್‌,ಎಂಟಿಎನ್ನೆಲ್‌ ಸಿಬ್ಬಂದಿಗೆ 30,000 ಕೋಟಿ ರೂ. ವಿಆರ್‌ಎಸ್‌ ಪ್ಯಾಕೇಜ್‌

ಎಸ್ಸೆನ್ನೆಲ್‌ ಮತ್ತು ಎಂಟಿಎನ್ನೆಲ್‌ನಲ್ಲಿ ಹಿರಿಯ ಉದ್ಯೋಗಿಗಳಿಗೆ ಒಟ್ಟು 30,000 ಕೋಟಿ ರೂ. ವಿಆರ್‌ಎಸ್‌ (ಸ್ವಯಂ ನಿವೃತ್ತಿ) ಪ್ಯಾಕೇಜ್‌ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. 50 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ವಿಆರ್‌ಎಸ್‌ ದೊರೆಯಲಿದೆ.

Vijaya Karnataka 24 Oct 2019, 7:28 pm
ಹೊಸದಿಲ್ಲಿ: ಎಸ್ಸೆನ್ನೆಲ್‌ ಮತ್ತು ಎಂಟಿಎನ್ನೆಲ್‌ನಲ್ಲಿಹಿರಿಯ ಉದ್ಯೋಗಿಗಳಿಗೆ ಒಟ್ಟು 30,000 ಕೋಟಿ ರೂ.ಗಳ ವಿಆರ್‌ಎಸ್‌ ಪ್ಯಾಕೇಜ್‌ ಕಾಯುತ್ತಿದೆ. ಸಾರ್ವಜನಿಕ ವಲಯದ ಈ ಎರಡೂ ಟೆಲಿಕಾಂ ಕಂಪನಿಗಳ ಕಾಯಕಲ್ಪಕ್ಕೆ ಸರಕಾರ ಮುಂದಾಗಿದ್ದು, ಸಿಬ್ಬಂದಿ ಸಂಖ್ಯೆಯನ್ನು ಗಣನೀಯ ಕಡಿತಗೊಳಿಸಲಿದೆ. ಕಂಪನಿಯಲ್ಲಿ50 ವರ್ಷ ಮೇಲ್ಪಟ್ಟವರಿಗೆ ವಿಆರ್‌ಎಸ್‌ ಪ್ರಸ್ತಾಪಿಸಲಾಗಿದ್ದು, ಅನೇಕ ಸಿಬ್ಬಂದಿಗೆ ಅನುಕೂಲವಾಗಲಿದೆ.
Vijaya Karnataka Web bsnl -mtnl


2019ರ ಜೂನ್‌ ಪ್ರಕಾರ ಬಿಎಸ್ಸೆನ್ನೆಲ್‌ನಲ್ಲಿ1.65 ಲಕ್ಷ ಉದ್ಯೋಗಿಗಳು ಇದ್ದಾರೆ. ಇವರಲ್ಲಿ50 ವರ್ಷ ಮೇಲ್ಪಟ್ಟ ವಯಸ್ಸಿನವರು 1.16 ಲಕ್ಷ ಮಂದಿ. ಎಂಟಿಎನ್ನೆಲ್‌ನಲ್ಲಿ21,679 ಸಿಬ್ಬಂದಿ ಇದ್ದು, 19,000 ಮಂದಿ 50 ವರ್ಷ ವಯಸ್ಸು ಮೀರಿದವರು.

ಬಿಎಸ್‌ಎನ್‌ಎಲ್‌ ಮುಳುಗಿಸುವ ಹುನ್ನಾರದ ಮೊದಲ ಹೆಜ್ಜೆ 'ವಿಲೀನ' : ರಾಹುಲ್‌ ಗಾಂಧಿ

ದೀಪಾವಳಿಗೆ ಬೋನಸ್‌:
  • ಬಿಎಸ್ಸೆನ್ನೆಲ್‌,ಎಂಟಿಎನ್ನೆಲ್‌ ವಿಆರ್‌ಎಸ್‌
  • 50 ವರ್ಷ ಮೇಲ್ಪಟ್ಟ ಉದ್ಯೋಗಿಗಳಗೆ ವಿಆರ್‌ಎಸ್‌ ಪ್ಯಾಕೇಜ್‌ ಲಭ್ಯ
  • 53 ವರ್ಷ 6 ತಿಂಗಳು ಮೇಲ್ಪಟ್ಟವರಿಗೆ ಈಗಿನ ವೇತನದ ಶೇ.125ರಷ್ಟು ವೇತನ ಮತ್ತು ಪಿಂಚಣಿ
  • ಜೂನ್‌ ತಿಂಗಳಿನ ಅಂದಾಜು ವಿವರ: ಬಿಎಸ್ಸೆನ್ನೆಲ್‌/ಎಂಟಿಎನ್ನೆಲ್‌ ವಿಆರ್‌ಸ್‌ಗೆ ಸಿದ್ಧವಿರುವ ಅಂದಾಜು ಸಿಬ್ಬಂದಿ 58,000/ 9,500
  • ಸಿಬ್ಬಂದಿ ವೆಚ್ಚ ಇಳಿಕೆ 5,200 ಕೋಟಿ ರೂ. (35%) 1,080 ಕೋಟಿ ರೂ. (43%)

ಬಿಎಸ್‌ಎನ್‌ಎಲ್‌-ಎಂಟಿಎನ್‌ಎಲ್‌ ವಿಲೀನಕ್ಕೆ ಕಡೆಗೂ ಅನುಮೋದನೆ ನೀಡಿದ ಕೇಂದ್ರ ಸಂಪುಟ

''ಬಿಎಸ್ಸೆನ್ನೆಲ್‌ ಮತ್ತು ಎಂಟಿಎನ್ನೆಲ್‌ನಲ್ಲಿಅನೇಕ ಮಂಇದ ವಿಆರ್‌ಎಸ್‌ ತೆಗೆದುಕೊಳ್ಳಲು ಬಯಸುತ್ತಿದ್ದಾರೆ. ಅವರಿಗೆ ಇದು ಅನುಕೂಲಕರ. ಹೀಗಿದ್ದರೂ ಯಾರಿಗೂ ಬಲವಂತ ಮಾಡುವುದಿಲ್ಲ''
-ರವಿ ಶಂಕರ ಪ್ರಸಾದ್‌, ಟೆಲಿಕಾಂ ಸಚಿವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ