ಆ್ಯಪ್ನಗರ

ವಾಲ್‌ಮಾರ್ಟ್ ಡೀಲ್‌: ಸಚಿನ್‌, ಬಿನ್ನಿ ಬನ್ಸಾಲ್‌ಗೆ ಐಟಿ ನೋಟಿಸ್

ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಬಿನ್ನಿ ಬನ್ಸಾಲ್‌ ಹಾಗೂ ಸಚಿನ್‌ ಬನ್ಸಾಲ್‌ ವಿರುದ್ಧ ಐಟಿ ಇಲಾಖೆ ನೋಟಿಸ್‌ ನೀಡಿದೆ. ವಾಲ್‌ಮಾರ್ಟ್ ಜತೆ ಒಪ್ಪಂದದಿಂದ ಅವರಿಗೆ ಬರಲಿರುವ ಒಟ್ಟು ಆದಾಯ ಹಾಗೂ ಬಂಡವಾಳ ಲಾಭದ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

TIMESOFINDIA.COM 22 Nov 2018, 11:20 am
[This story originally published in Times Of India on Nov 22, 2018]
Vijaya Karnataka Web sachin and binny bansal

ಹೊಸದಿಲ್ಲಿ:
ಭಾರತದ ಪ್ರಮುಖ ಇ ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್‌ನ ಪ್ರವರ್ತಕರಿಗೆ ಐಟಿ ಇಲಾಖೆ ನೋಟಿಸ್‌ ನೀಡಿದೆ. ಇನ್ನು, ಸಚಿನ್‌ ಹಾಗೂ ಬಿನ್ನಿ ಬನ್ಸಾಲ್‌ ಜತೆಗೆ ಕಂಪನಿಯ ಷೇರುಗಳನ್ನು ಹೊಂದಿರುವ 35 ಇತರೆ ವ್ಯಕ್ತಿಗಳಿಗೂ ಕೂಡ ನೋಟಿಸ್‌ ನೀಡಲಾಗಿದೆ. ಈ ಪೈಕಿ, ಇಬ್ಬರೂ ಬನ್ಸಾಲ್‌ಗಳು ಕಂಪನಿಯಲ್ಲಿ ತಲಾ ಶೇ. 5ಕ್ಕಿಂತ ಅಧಿಕ ಷೇರುಗಳನ್ನು ಹೊಂದಿದ್ದಾರೆ. ವಾಲ್‌ಮಾರ್ಟ್‌ ಅಂತಾರಾಷ್ಟ್ರೀಯ ಹೋಲ್ಟಿಂಗ್ಸ್‌ ಹಾಗೂ ಫ್ಲಿಪ್‌ಕಾರ್ಟ್ ನಡುವೆ ಮೇ 9 ರಲ್ಲಿ ಆಗಿದ್ದ ಒಪ್ಪಂದದಂತೆ, ಫ್ಲಿಪ್‌ಕಾರ್ಟ್‌ನ ಶೇ. 77 ರಷ್ಟು ಷೇರುಗಳನ್ನು ವಾಲ್‌ಮಾರ್ಟ್‌ ಸುಮಾರು 16 ಬಿಲಿಯನ್‌ ಡಾಲರ್‌ಗೆ ಖರೀದಿಸಿದೆ.

ಅಲ್ಲದೆ, ಈ ಹಿಂದೆಯೇ ವಾಲ್‌ಮಾರ್ಟ್‌ಗೆ ನೋಟಿಸ್‌ ನೀಡಿದ್ದ ಆದಾಯ ತೆರಿಗೆ ಇಲಾಖೆ ಫ್ಲಿಪ್‌ಕಾರ್ಟ್‌ ಕಂಪನಿಯ ಷೇರುಗಳನ್ನು ಹೊಂದಿರುವ 46 ಜನರ ಹೆಸರು ತಿಳಿಸುವಂತೆ ಕೇಳಿಕೊಂಡಿತ್ತು. ಅಲ್ಲದೆ, ಈ ಒಪ್ಪಂದದಿಂದ ಅವರಿಗೆ ಎಷ್ಟು ಲಾಭವಾಗುತ್ತಿದೆ ಎಂದು ಸಹ ಮಾಹಿತಿ ಕೇಳಿತ್ತು.

ಇದೇ ರೀತಿ, ಬನ್ಸಾಲ್‌ಗಳಿಗೂ ಕಂಪನಿಯ ಷೇರುಗಳನ್ನು ವಾಲ್‌ಮಾರ್ಟ್‌ಗೆ ಮಾರಾಟ ಮಾಡಿದ ಬಳಿಕ ಎಷ್ಟು ಹಣ ಅವರಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ತೆರಿಗೆ ಪಾವತಿಗಳನ್ನು ಯಾವ ರೀತಿ ನಿಗದಿಪಡಿಸಿದ್ದೀರಿ ಎಂದು ಐಟಿ ಇಲಾಖೆ ಮಾಹಿತಿ ಕೇಳಿದೆ. ಇನ್ನು, ಐಟಿ ನೋಟಿಸ್‌ ಬಗ್ಗೆ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾಗೆ ಬಿನ್ನಿ ಬನ್ಸಾಲ್ ಮಾಹಿತಿ ನೀಡಿದ್ದು, ಹಲವು ತಿಂಗಳ ಹಿಂದೆಯೇ ನಮಗೆ ನೋಟಿಸ್‌ ಬಂದಿತ್ತು. ಅದಕ್ಕೆ ಉತ್ತರಿಸಿದ್ದೇವೆ'' ಎಂದು ತಿಳಿಸಿದ್ದಾರೆ. ಆದರೆ, ಸಚಿನ್‌ ಬನ್ಸಾಲ್‌ ಮಾತ್ರ ಟೈಮ್ಸ್ ಆಫ್‌ ಇಂಡಿಯಾದ ಫೋನ್ ಕರೆಗಾಗಲೀ ಮೆಸೇಜ್‌ಗಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಅಕ್ಟೋಬರ್ 18ರಂದು ನೀಡಿರುವ ನೋಟಿಸ್‌ಗೆ ಬನ್ಸಾಲ್‌ಗಳು ಇದುವರೆಗೆ ಯಾವುದೇ ಉತ್ತರ ನೀಡಿಲ್ಲ. ಆದರೆ, ಭಾರತದ ಇತರೆ ಷೇರುದಾರರು ನೋಡಿಸ್‌ಗೆ ಉತ್ತರ ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನು, ವಾಲ್‌ಮಾರ್ಟ್‌ಗೆ ಐಟಿ ನೋಟಿಸ್‌ ನೀಡಿದ ಬಳಿಕ ವಾಲ್‌ಮಾರ್ಟ್ ಕಂಪನಿ ಕೇಂದ್ರ ಸರಕಾರಕ್ಕೆ 7,439 ಕೋಟಿ ತೆರಿಗೆ ಕಟ್ಟಿತ್ತು. ಆದರೆ, ಇದರಿಂದ ಸಮಾಧಾನಗೊಳ್ಳದ ಐಟಿ ಇಲಾಖೆ ಮತ್ತಷ್ಟು ಹೆಚ್ಚುವರಿ ಮಾಹಿತಿಗಳನ್ನು ಕೇಳಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ