ಆ್ಯಪ್ನಗರ

ಒಲಾದಲ್ಲಿ ಸಚಿನ್‌ ಬನ್ಸಾಲ್‌ 150 ಕೋಟಿ ರೂ. ಹೂಡಿಕೆ

ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕ ಸಚಿನ್‌ ಬನ್ಸಾಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಒಲಾದಲ್ಲಿ 150 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.

Vijaya Karnataka Web 15 Jan 2019, 5:00 am
ಹೊಸದಿಲ್ಲಿ : ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕ ಸಚಿನ್‌ ಬನ್ಸಾಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಒಲಾದಲ್ಲಿ 150 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.
Vijaya Karnataka Web sachin bansal buys stake in bhavish aggarwals ola
ಒಲಾದಲ್ಲಿ ಸಚಿನ್‌ ಬನ್ಸಾಲ್‌ 150 ಕೋಟಿ ರೂ. ಹೂಡಿಕೆ


ಅಮೆರಿಕದ ರಿಟೇಲ್‌ ದಿಗ್ಗಜ ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ ಅನ್ನು ಸ್ವಾಧೀನಪಡಿಸಿದ ನಂತರ ಸಚಿನ್‌ ಬನ್ಸಾಲ್‌ ಕಂಪನಿಯಿಂದ ನಿರ್ಗಮಿಸಿದ್ದರು. ಮೂಲಗಳ ಪ್ರಕಾರ ಸಚಿನ್‌ ಬನ್ಸಾಲ್‌ ಅವರು ಒಲಾದಲ್ಲಿ 650 ಕೋಟಿ ರೂ. ಹೂಡಿಕೆ ಮಾಡುವ ನಿರೀಕ್ಷೆ ಇದ್ದು, ಮೊದಲ ಹಂತದಲ್ಲಿ 150 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ.

ಬೆಂಗಳೂರು ಮೂಲದ ಒಲಾವನ್ನು ಭವೀಶ್‌ ಅಗರವಾಲ್‌ ಮತ್ತು ಅಂಕಿತ್‌ ಭಾಟಿ ಅವರು 8 ವರ್ಷಗಳ ಹಿಂದೆ ಸ್ಥಾಪಿಸಿದ್ದರು. ಒಲಾ ಹೊಸ ಹೂಡಿಕೆದಾರರ ಅನ್ವೇಷಣೆಯಲ್ಲಿರುವ ಸಂದರ್ಭದಲ್ಲಿಯೇ ಬನ್ಸಾಲ್‌ ಹೂಡಿಕೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ