ಆ್ಯಪ್ನಗರ

ಓಲಾದಲ್ಲಿ ಸಚಿನ್‌ ಬನ್ಸಲ್‌ರಿಂದ 650 ಕೋಟಿ ರೂ. ಹೂಡಿಕೆ

ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕ ಸಚಿನ್‌ ಬನ್ಸಲ್‌ ಅವರು ಓಲಾದಲ್ಲಿ 650 ಕೋಟಿ ರೂ ಹೂಡಿಕೆ ಮಾಡಿದ್ದಾರೆ...

PTI 20 Feb 2019, 5:00 am
ಹೊಸದಿಲ್ಲಿ: ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕ ಸಚಿನ್‌ ಬನ್ಸಲ್‌ ಅವರು ಓಲಾದಲ್ಲಿ 650 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
Vijaya Karnataka Web sachin bansal invests rs 650 crores in ola
ಓಲಾದಲ್ಲಿ ಸಚಿನ್‌ ಬನ್ಸಲ್‌ರಿಂದ 650 ಕೋಟಿ ರೂ. ಹೂಡಿಕೆ


ಅಮೆರಿಕ ಮೂಲದ ಉಬರ್‌ಗೆ ತೀವ್ರ ಸ್ಪರ್ಧೆ ನೀಡಲು ಓಲಾಗೆ ಬನ್ಸಲ್‌ರ ಭಾರೀ ಹೂಡಿಕೆಯಿಂದ ಸಹಕಾರಿಯಾಗಲಿದೆ. ಅಲ್ಲದೇ, ಓಲಾದಲ್ಲಿ ಅತಿ ದೊಡ್ಡ ವ್ಯಕ್ತಿಗತ ಹೂಡಿಕೆ ಇದಾಗಿದೆ.

ಫ್ಲಿಪ್‌ಕಾರ್ಟ್‌ನಿಂದ ಹೊರಬಂದಿದ್ದ ಸಚಿನ್‌, ಓಲಾಗೆ ಹಣ ಹೂಡಿಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಡೆದ ಒಪ್ಪಂದದ ಭಾಗವಾಗಿ ಜನವರಿಯಲ್ಲಿ ಬೆಂಗಳೂರು ಮೂಲದ ಓಲಾ ಕಂಪನಿಯು ಸಚಿನ್‌ ಅವರಿಗೆ 150 ಕೋಟಿ ರೂ.ಮೌಲ್ಯದ ಷೇರುಗಳನ್ನು ವರ್ಗಾಯಿಸಿತ್ತು.

''ಓಲಾ ಅನ್ನುವುದು ಭಾರತದ ಅತ್ಯಂತ ಭರವಸೆಯ ಗ್ರಾಹಕಸ್ನೇಹಿ ಕ್ಯಾಬ್‌ ಸೇವೆಯ ವ್ಯವಹಾರವಾಗಿದೆ,'' ಎಂದು ಸಚಿನ್‌ ಹೇಳಿದ್ದಾರೆ. ''ಓಲಾದ ಹೂಡಿಕೆದಾರರಾಗಿ ಸಚಿನ್‌ ನಮ್ಮೊಂದಿಗಿರುವುದು ಪುಳಕ ನೀಡುವಂಥ ವಿಚಾರ. ಯಶಸ್ವಿ ಉದ್ಯಮಿಯಾದ ಸಚಿನ್‌ರ ಅನುಭವದಿಂದ ಓಲಾಗೆ ಲಾಭವಾಗಲಿದೆ,'' ಎಂದು ಓಲಾದ ಸಿಇಒ ಮತ್ತು ಸಹ-ಸಂಸ್ಥಾಪಕ ಭವಿಷ್‌ ಅಗರವಾಲ್‌ ತಿಳಿಸಿದ್ದಾರೆ.

ಕ್ಯಾಬ್‌ ಸೇವೆಯ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕಾಗಿ ಭಾರತ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಬ್ರಿಟನ್‌ನಲ್ಲಿ ಅಮೆರಿಕದ ಉಬರ್‌ ಜೊತೆ ಓಲಾ ತೀವ್ರ ಸೆಣಸುತ್ತಿದೆ.

ಬಿನ್ನಿ ಬನ್ಸಲ್‌ ಸಹಯೋಗದೊಂದಿಗೆ ಸಚಿನ್‌ ಅವರು ಫ್ಲಿಪ್‌ಕಾರ್ಟ್‌ ಅನ್ನು ದಶಕದ ಹಿಂದಷ್ಟೇ ಆರಂಭಿಸಿದ್ದರು. ಅಮೆರಿಕದ ವಾಲ್‌ ಮಾರ್ಟ್‌ ಕಂಪನಿಯು ಫ್ಲಿಪ್‌ಕಾರ್ಟ್‌ನ ಶೇ.77ರಷ್ಟು ಷೇರುಗಳನ್ನು ಖರೀದಿಸಿದ ಬಳಿಕ, ಸಚಿನ್‌ ಹೊರಬಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ