ಆ್ಯಪ್ನಗರ

ಖಾದಿ ಉತ್ಪನ್ನ ಮಾರಾಟ ಶೇ. 28 ಹೆಚ್ಚಳ

ಕಳೆದ 5 ವರ್ಷಗಳಿಂದ ಖಾದಿಯ ಬಟ್ಟೆ, ರೆಡಿಮೇಡ್‌ ಗಾರ್ಮೆಂಟ್ಸ್‌ ಎರಡೂ ವಿಭಾಗಗಳಲ್ಲಿ ವ್ಯಾಪಾರ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಿದೆ ಎಂದು ಕೆವಿಐಸಿ ಅಧ್ಯಕ್ಷ ವಿನಯ್‌ ಕುಮಾರ್‌ ಸಕ್ಸೇನಾ ತಿಳಿಸಿದ್ದಾರೆ.

THE ECONOMIC TIMES 15 Apr 2019, 8:03 pm
ಹೊಸದಿಲ್ಲಿ: ಇತ್ತೀಚಿನ ವರ್ಷಗಳಲ್ಲಿ ಖಾದಿಗೆ ಬೇಡಿಕೆ ಗರಿಗೆದರಿದೆ! ಖಾದಿ ಉತ್ಪನ್ನಗಳ ಮಾರಾಟ 2018-19ರಲ್ಲಿ ಶೇ.28ರಷ್ಟು ಹೆಚ್ಚಳವಾಗಿದ್ದು, 3,215 ಕೋಟಿ ರೂ.ಗೆ ವೃದ್ಧಿಸಿದೆ. ಕೈಮಗ್ಗದಿಂದ ತಯಾರಿಸುವ ಜವಳಿ ಉತ್ಪನ್ನ ಮಾರಾಟ ಶೇ.16 ಏರಿದ್ದು, 1,902 ಕೋಟಿ ರೂ.ಗೆ ತಲುಪಿದೆ ಎಂದು ಕೆವಿಐಸಿ ಸೋಮವಾರ ತಿಳಿಸಿದೆ.
Vijaya Karnataka Web khadi


ಖಾದಿ ಉತ್ಪನ್ನಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯಿಂದ ಖಾದಿ ಉತ್ಪನ್ನಗಳಿಗೆ ಬೇಡಿಕೆ ಉಂಟಾಗಿದೆ ಎಂದು ಕೆವಿಐಸಿ ತಿಳಿಸಿದೆ.

''ಕಳೆದ 5 ವರ್ಷಗಳಿಂದ ಖಾದಿಯ ಬಟ್ಟೆ, ರೆಡಿಮೇಡ್‌ ಗಾರ್ಮೆಂಟ್ಸ್‌ ಎರಡೂ ವಿಭಾಗಗಳಲ್ಲಿ ವ್ಯಾಪಾರ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಿದೆ'' ಎಂದು ಕೆವಿಐಸಿ ಅಧ್ಯಕ್ಷ ವಿನಯ್‌ ಕುಮಾರ್‌ ಸಕ್ಸೇನಾ ತಿಳಿಸಿದ್ದಾರೆ.

ಖಾದಿ ಉತ್ಪನ್ನಗಳ ಜತೆಗೆ ಗ್ರಾಮೀಣ ಕೈಗಾರಿಕೆಯ ಉತ್ಪನ್ನಗಳನ್ನೂ ಕೆವಿಐಸಿ ಮಾರುತ್ತಿದೆ. ಆಹಾರೋತ್ಪನ್ನ, ಸೌಂದರ್ಯ ವರ್ದಕಗಳನ್ನೂ ಮಾರಾಟ ಮಾಡಲಾಗುತ್ತಿದೆ. ಇವುಗಳು ಖಾದಿ ಸೇಲ್ಸ್‌ಗಿಂತಲೂ ಗಣನೀಯ ಮಟ್ಟದಲ್ಲಿವೆ.

ಮೋದಿ ಜಾಕೆಟ್‌ಗೆ ಭಾರಿ ಬೇಡಿಕೆ
ರೆಡಿಮೇಡ್‌ ಖಾದಿ ಉತ್ಪನ್ನಗಳಲ್ಲಿ ನಮೊ ಜಾಕೆಟ್‌ಗಳು ಜನಪ್ರಿಯತೆ ಗಳಿಸಿದ್ದು, ನಮೊ ಆ್ಯಪ್‌ ಮೂಲಕವೇ ಕಳೆದ ಎರಡು ತಿಂಗಳಿನಲ್ಲಿ 7,000 ಮೋದಿ ಜಾಕೆಟ್‌ಗಳು ಮಾರಾಟವಾಗಿದೆ ಎಂದು ಕೆವಿಐಸಿ ತಿಳಿಸಿದೆ.

ಇದಲ್ಲದೆ ಕೆವಿಐಸಿಯ ಮಳಿಗೆಗಳು ದಿನಕ್ಕೆ ಕನಿಷ್ಠ 200 ಮೋದಿ ಜಾಕೆಟ್‌ಗಳನ್ನು ಮಾರಾಟ ಮಾಡುತ್ತಿವೆ. 2019-20ರಲ್ಲಿ 5,000 ಕೋಟಿ ರೂ. ಮೌಲ್ಯದ ಖಾದಿ ಮಾರಾಟದ ಗುರಿ ಇದೆ. ಸಾಗರೋತ್ತರ ಮಾರುಕಟ್ಟೆಯಲ್ಲ;ಇ ಖಾದಿ ಉತ್ಪನ್ನ ಮಾರಾಟ ಹೆಚ್ಚಿಸಲು ಕೆವಿಐಸಿ ರಫ್ತು ಘಟಕಗಳನ್ನು ತೆರೆಯಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ