ಆ್ಯಪ್ನಗರ

'ವಲಸಿಗರಿಗೆ ಬೆಂಬಲಿಸಿ, ಇಲ್ಲವೇ ಟೆಕ್ನಾಲಜಿ ಲಾಭ ಕಳೆದುಕೊಳ್ಳಿ': ಸತ್ಯ ನಾದೆಲ್ಲಾ ಸಲಹೆ

ವಲಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗುವ ರಾಷ್ಟ್ರಗಳು ಜಾಗತಿಕ ತಂತ್ರಜ್ಞಾನದ ಅಭಿವೃದ್ಧಿಯ ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ತಿಳಿಸಿದ್ದಾರೆ.

Vijaya Karnataka Web 22 Jan 2020, 6:27 pm
ಹೊಸದಿಲ್ಲಿ: ವಲಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗುವ ರಾಷ್ಟ್ರಗಳು ಜಾಗತಿಕ ತಂತ್ರಜ್ಞಾನದ ಅಭಿವೃದ್ಧಿಯ ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ತಿಳಿಸಿದ್ದಾರೆ.
Vijaya Karnataka Web Satya Nadella


'' ಪ್ರತಿಯೊಂದು ರಾಷ್ಟ್ರವೂ ತನ್ನ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಮರುಪರಿಶೀಲಿಸಬೇಕು'' ಎಂದು ದಾವೋಸ್‌ನಲ್ಲಿ ಸತ್ಯ ನಾದೆಲ್ಲಾ ಸಂದರ್ಶನವೊಂದರಲ್ಲಿ ಹೇಳಿದರು.

ವಲಸಿಗರ ಬಗ್ಗೆ ಸಂಕುಚಿತ ಅಥವಾ ಪೂರ್ವಾಗ್ರಹಪೀಡಿತ ಧೋರಣೆಯನ್ನು ಸರಕಾರಗಳು ಕೈಬಿಡಬೇಕು ಎಂದು ಸತ್ಯ ನಾಡೆಳ್ಳ ಹೇಳಿದರು. ಇತ್ತೀಚೆಗೆ ಭಾರತದ ಪೌರತ್ವ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿ 'ಇದು ನೋವಿನ ಸಂಗತಿ' ಎಂದು ವಿವಾದಾತ್ಮಕ ಹೇಳಿಕೆಯನ್ನು ನಾಡೆಳ್ಳ ನೀಡಿದ್ದರು. ಹೀಗಿದ್ದರೂ ನಂತರ ಕೊಟ್ಟ ಸ್ಪಷ್ಟನೆಯಲ್ಲಿ, ಭಾರತದ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ಭಾರತದಲ್ಲಿರಾಷ್ಟ್ರ ನಿರ್ಮಾಣದ 70 ವರ್ಷಗಳ ಇತಿಹಾಸ ಇದೆ. ಇದು ಸುಭದ್ರವಾಗಿದೆ. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದರು.

ಸಿಎಎ ಬಗ್ಗೆ ಮೈಕ್ರೋಸಾಫ್ಟ್ ಸಿಇಒ ಅಪಸ್ವರ: ಸಾಕ್ಷರರಿಗೂ ಶಿಕ್ಷಣ ನೀಡಬೇಕು ಎಂದ ಬಿಜೆಪಿ ಸಂಸದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ