ಆ್ಯಪ್ನಗರ

ಎಸ್‌ಬಿಐ ಗೃಹ ಸಾಲದ ಬಡ್ಡಿ 0.25% ಇಳಿಕೆ

ಇತ್ತೀಚೆಗಷ್ಟೇ 30 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗಿನ ಸಾಲಗಳಿಗೆ ಕ್ರೆಡಿಟ್‌ ಸ್ಕೋರ್‌ ಆಧರಿಸಿ, ಶೇ.0.20ರ ತನಕ ಬಡ್ಡಿ ವಿನಾಯಿತಿ ನೀಡುವ ತೀರ್ಮಾನವನ್ನು ಪ್ರಕಟಿಸಿತ್ತು.

Vijaya Karnataka Web 22 Oct 2020, 10:00 am
ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ(ಎಸ್‌ಬಿಐ) ಗೃಹ ಸಾಲದ ಬಡ್ಡಿ ದರವು ಶೇ.0.25ರಷ್ಟು ಇಳಿಕೆಯಾಗಿದೆ. ಆದರೆ ಇದು 75 ಲಕ್ಷ ರೂ.ಗಿಂತ ಮೇಲಿನ ಗೃಹ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
Vijaya Karnataka Web ಎಸ್‌ಬಿಐ
ಎಸ್‌ಬಿಐ


ಬಡ್ಡಿ ದರದಲ್ಲಿ ಶೇ.0.25ರ ರಿಯಾಯಿತಿ ಪಡೆಯುವ ಗ್ರಾಹಕರ ಸಿಬಿಲ್‌ ಸ್ಕೋರ್‌ ಚೆನ್ನಾಗಿರಬೇಕು. ಯೋನೊ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಿರಬೇಕು. ಹಬ್ಬದ ಹಿನ್ನೆಲೆಯಲ್ಲಿ ಈ ಕೊಡುಗೆಯನ್ನು ಎಸ್‌ಬಿಐ ಪ್ರಕಟಿಸಿದೆ.

ಇತ್ತೀಚೆಗಷ್ಟೇ 30 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗಿನ ಸಾಲಗಳಿಗೆ ಕ್ರೆಡಿಟ್‌ ಸ್ಕೋರ್‌ ಆಧರಿಸಿ, ಶೇ.0.20ರ ತನಕ ಬಡ್ಡಿ ವಿನಾಯಿತಿ ನೀಡುವ ತೀರ್ಮಾನವನ್ನು ಪ್ರಕಟಿಸಿತ್ತು.

30 ಲಕ್ಷ ರೂ.ವರೆಗಿನ ಗೃಹ ಸಾಲಗಳಿಗೆ ಶೇ.6.90, ಮತ್ತು 30 ಲಕ್ಷ ರೂ. ಮೀರಿದ ಸಾಲಗಳಿಗೆ ಶೇ.7ರ ಬಡ್ಡಿ ದರವನ್ನು ಎಸ್‌ಬಿಐ ವಿಧಿಸುತ್ತದೆ. ಇಲ್ಲೂ ಕೆಲವು ಷರತ್ತುಗಳು ಅನ್ವಯವಾಗುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ