ಆ್ಯಪ್ನಗರ

ನೀವು ಎಸ್‌ಬಿಐ ಗ್ರಾಹಕರೇ? ಕೆವೈಸಿ ಮಾಡಿಸಿದ್ದೀರಾ? ಇಲ್ಲವಾದಲ್ಲಿ ಅಕೌಂಟ್‌ ಬ್ಲಾಕ್‌!!!

ನೀವು ದೇಶದ ಅತಿದೊಡ್ಡ ಬ್ಯಾಂಕ್ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' (ಎಸ್‌ಬಿಐ) ನಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಿದ್ದರೆ, ಈ ಸುದ್ದಿ ನಿಮಗೆ ಅತ್ಯಂತ ಪ್ರಮುಖವಾದುದಾಗಿದೆ.

Vijaya Karnataka Web 28 Feb 2020, 1:03 pm
ನವದೆಹಲಿ : ನೀವು ದೇಶದ ಅತಿದೊಡ್ಡ ಬ್ಯಾಂಕ್ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' (ಎಸ್‌ಬಿಐ) ನಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಿದ್ದರೆ, ಈ ಸುದ್ದಿ ನಿಮಗೆ ಅತ್ಯಂತ ಪ್ರಮುಖವಾದುದಾಗಿದೆ. ಎಸ್‌ಬಿಐ ಈಗಾಗಲೇ ತನ್ನ ಗ್ರಾಹಕರಿಗೆ ಹಲವು ಬಾರಿ ಸೂಚನೆ ನೀಡಿತ್ತು. ಏನೆಂದರೆ, ಫೆಬ್ರವರಿ 28 (ಇಂದು) ರೊಳಗೆ ಖಾತೆದಾರರು ಬ್ಯಾಂಕಿಗೆ ಕೆವೈಸಿ ವಿವರ ನೀಡದಿದ್ದರೆ ಖಾತೆಯನ್ನು ಬ್ಲಾಕ್‌ ಮಾಡುವುದಾಗಿ ತಿಳಿಸಿತ್ತು. ಇಂದಿಗೆ ಬ್ಯಾಂಕ್ ನೀಡಿದ್ದ ಗಡುವು ಮುಗಿಯುತ್ತಿದೆ. ನೀವು ಇನ್ನೂ ಇನ್ನೂ ಕೆವೈಸಿ ಮಾಡಿಸದಿದ್ದರೆ, ನಾಳೆಯಿಂದಲೇ ನಿಮ್ಮ ಉಳಿತಾಯ ಖಾತೆ ಬ್ಲಾಕ್‌ ಆಗಬಹುದು. ಇಂದೇ ನೀವು ಖಾತೆ ಹೊಂದಿರುವ ಬ್ಯಾಂಕ್‌ ಶಾಖೆಗೆ ತೆರಳಿ ಕೆವೈಸಿ ಮಾಡಿಸಿಕೊಳ್ಳಿ.
Vijaya Karnataka Web sbi bank customers alert your sbi account may get blocked after 28th february bank says do this
ನೀವು ಎಸ್‌ಬಿಐ ಗ್ರಾಹಕರೇ? ಕೆವೈಸಿ ಮಾಡಿಸಿದ್ದೀರಾ? ಇಲ್ಲವಾದಲ್ಲಿ ಅಕೌಂಟ್‌ ಬ್ಲಾಕ್‌!!!


ಎಲ್ಲ ಬ್ಯಾಂಕುಗಳೂ ಕೆವೈಸಿ ಮಾಡಿಸಬೇಕು

ಇತ್ತೀಚೆಗೆ ಎಲ್ಲ ಬ್ಯಾಂಕುಂಗಳು ತಮ್ಮ ಗ್ರಾಹಕರ ಕೆವೈಸಿ ವಿಚಾರದಲ್ಲಿ ಹೆಚ್ಚು ಗಮ,ನಹರಿಸುತ್ತಿವೆ. ಬ್ಯಾಂಕುಗಳು ಎಲ್ಲಾ ಗ್ರಾಹಕರ ಕೆವೈಸಿಯನ್ನು ನಿಯತಕಾಲಿಕವಾಗಿ ನವೀಕರಸಬೇಕಾಗುತ್ತದೆ. ಅಲ್ಲದೇ ಕೆವೈಸಿ ಮಾಡಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಎಸ್ ಬಿಐ ಇದೀಗ ಕೆವೈಸಿ ಪರಿಶೀಲನೆಯ ಕೊನೆಯ ದಿನಾಂಕದ ಮೊದಲು ನವೀಕರಿಸಲು ಖಾತೆದಾರರಿಗೆ ಮಹತ್ವದ ಸೂಚನೆ ನೀಡಿದೆ.

ವಹಿವಾಟು ಮೇಲ್ವಿಚಾರಣೆಗಾಗಿ ಕ್ರಮ

ಮನಿ ಲಾಂಡರಿಂಗ್ ತಡೆ ಕಾಯ್ದೆ 2002 ಮತ್ತು ಮನಿ ಲಾಂಡರಿಂಗ್ ತಡೆ (ದಾಖಲೆಗಳ ನಿರ್ವಹಣೆ) ನಿಯಮಗಳು, 2005 ರ ಪ್ರಕಾರ, ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆ, ಖಾತೆ ಆಧಾರಿತ ಸಂಬಂಧ (ಕೆವೈಸಿ) ಸ್ಥಾಪಿಸಬೇಕು. ಈ ಮೂಲಕ ಅವರ ವಹಿವಾಟುಗಳನ್ನು ಮೇಲ್ವಿಚಾರಣೆ ಸುಲಭವಾಗುತ್ತದೆ. ಆರ್‌ಬಿಐ ಮಾರ್ಗಸೂಚಿಯಂತೆ 2020 ರ ಫೆಬ್ರವರಿ 28 ರೊಳಗೆ ಎಲ್ಲಾ ಭಾರತೀಯ ಬ್ಯಾಂಕುಗಳು ತಮ್ಮ ಕೆವೈಸಿಯನ್ನು ನವೀಕರಿಸಬೇಕಾಗಿದೆ ಮತ್ತು ಗ್ರಾಹಕರಿಗೆ ತಮ್ಮ ಕೆವೈಸಿ ಬಾಕಿ ಇದೆ ಎಂದು ತಿಳಿಸುವ ಸೂಚನೆ ಇದೆ. ಅದನ್ನು ಮಾಡಲು ವಿಫಲವಾದರೆ, ಬ್ಯಾಂಕುಗಳು ಭಾರಿ ದಂಡವನ್ನು ಎದುರಿಸಬೇಕಾಗುತ್ತದೆ.

ಕೆವೈಸಿ ಮಾಡಿಸುವುದು ಹೇಗೆ?

ನೀವು ಖಾತೆ ಹೊಂದಿರುವ ಎಸ್‌ಬಿಐ ಶಾಖೆಗೆ ತೆರಳಿ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಕೆವೈಸಿ ಮಾಡಿಸಬಹುದು. ಆನ್‌ಲೈನ್‌ ಟ್ರಾನ್ಸಾಕ್ಷನ್‌ ಸೌಲಭ್ಯ ಉಳ್ಳವರು ಆನ್‌ಲೈನ್‌ನಲ್ಲೇ ಕೆವೈಸಿ ಮಾಡಿಕೊಳ್ಳಬಹುದು.

ಬೇಕಾಗಿರುವ ದಾಖಲೆಗಳು

  • ಮೊಬೈಲ್ ನಂಬರ್
  • ಪಾಸ್ ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಎನ್ ಪಿಆರ್
  • ವೋಟರ್ ಐಡಿ ಕಾರ್ಡ್
  • ಎಲೆಕ್ಟ್ರಿಸಿಟಿ ಬಿಲ್‌
  • ರೇಷನ್ ಕಾರ್ಡ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ