ಆ್ಯಪ್ನಗರ

ಕನಿಷ್ಠ ಠೇವಣಿ ಕಡಿತಗೊಳಿಸಿದ ಎಸ್‌ಬಿಐ; 5000 ರೂ.ನಿಂದ 3000ಕ್ಕೆ ಇಳಿಕೆ

ಪಿಂಚಣಿದಾರರಿಗೆ, ಅಪ್ರಾಪ್ತರಿಗೆ ವಿನಾಯ್ತಿ ನೀಡಲಾಗಿದೆ.

Vijaya Karnataka Web 25 Sep 2017, 8:59 pm
ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದೆ.
Vijaya Karnataka Web sbi reduces minimum balance limit to rs 3000
ಕನಿಷ್ಠ ಠೇವಣಿ ಕಡಿತಗೊಳಿಸಿದ ಎಸ್‌ಬಿಐ; 5000 ರೂ.ನಿಂದ 3000ಕ್ಕೆ ಇಳಿಕೆ


ಉಳಿತಾಯ ಖಾತೆಯ ತಿಂಗಳ ಕನಿಷ್ಠ ಠೇವಣಿ ಮೊತ್ತವನ್ನು 5 ಸಾವಿರದಿಂದ 3 ಸಾವಿರ ರೂಪಾಯಿಗೆ ಕಡಿತಗೊಳಿಸಿದೆ. ಅಲ್ಲದೆ ಕನಿಷ್ಠ ಠೇವಣಿ ಉಳಿಸಿಕೊಳ್ಳದ ಖಾತೆದಾರರಿಗೆ ವಿಧಿಸುವ ದಂಡವನ್ನು ಕಡಿತಗೊಳಿಸಿದೆ.

ಪರಿಷ್ಕೃತ ತಿಂಗಳ ಕನಿಷ್ಠ ಠೇವಣಿ ಮೊತ್ತ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ಎಸ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಪಿಂಚಣಿದಾರರ ಮತ್ತು ಅಪ್ರಾಪ್ತರ ಉಳಿತಾಯ ಖಾತೆಗೆ ವಿನಾಯಿತಿ ನೀಡಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಕಳೆದ ಏಪ್ರಿಲ್ ನಿಂದ ಉಳಿತಾಯ ಖಾತೆಗೆ ಕನಿಷ್ಠ ಠೇವಣಿ ನಿಗದಿ ಮಾಡಿ, ಅದನ್ನು ಪಾಲಿಸದ ಗ್ರಾಹಕರಿಗೆ ದಂಡ ವಿಧಿಸುತ್ತಿತ್ತು.

ಮೆಟ್ರೊ ಪಾಲಿಟನ್ ನಗರಗಳಲ್ಲಿ 5 ಸಾವಿರ, ನಗರ ಪ್ರದೇಶಗಳಲ್ಲಿ 3 ಸಾವಿರ, ಇತರೆ ಉಪ ನಗರ ಪ್ರದೇಶಗಳಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂಪಾಯಿ ಕನಿಷ್ಠ ಠೇವಣಿ ನಿಗದಿ ಮಾಡಿತ್ತು.

ಮೆಟ್ರೊಪಾಲಿಟನ್ ಮತ್ತು ನಗರ ಪ್ರದೇಶ ಎರಡಕ್ಕೂ 3 ಸಾವಿರ ರೂಪಾಯಿ ಕನಿಷ್ಠ ಠೇವಣಿ ನಿಗದಿ ಮಾಡಲಾಗಿದ್ದು, ಉಳಿದಂತೆ ಉಪನಗರದಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 1 ಸಾವಿರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

SBI reduces minimum balance limit to Rs 3,000

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ