ಆ್ಯಪ್ನಗರ

ಎಸ್‌ಬಿಐ ವೈಯಕ್ತಿಕ ಸಾಲಗಳ ಸಂಸ್ಕರಣಾ ಶುಲ್ಕ ಮನ್ನಾ

ಚಿಲ್ಲರೆ ಸಾಲಗಳ ವಿಭಾಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ದೇಶದ ಅತಿದೊಡ್ಡ ಸರಕಾರಿ ಬ್ಯಾಂಕ್‌ ಎಸ್‌ಬಿಐ ತನ್ನ ಬಹುತೇಕ ಎಲ್ಲ ಚಿಲ್ಲರೆ ಸಾಲಗಳ ಸಂಸ್ಕರಣಾ ಶುಲ್ಕಗಳನ್ನು ಮನ್ನಾ ಮಾಡಿದೆ. ಜತೆಗೆ ಇತರ ಬ್ಯಾಂಕುಗಳ ಸಾಲವನ್ನು ಎಸ್‌ಬಿಐಗೆ ವರ್ಗಾಯಿಸಿಕೊಳ್ಳುವವರಿಗೂ ಈಗ ಇರುವ ಶುಲ್ಕಗಳನ್ನು ಮನ್ನಾ ಮಾಡಿದೆ.

TNN 21 Aug 2017, 5:30 pm
ಮುಂಬಯಿ: ಚಿಲ್ಲರೆ ಸಾಲಗಳ ವಿಭಾಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ದೇಶದ ಅತಿದೊಡ್ಡ ಸರಕಾರಿ ಬ್ಯಾಂಕ್‌ ಎಸ್‌ಬಿಐ ತನ್ನ ಬಹುತೇಕ ಎಲ್ಲ ಚಿಲ್ಲರೆ ಸಾಲಗಳ ಸಂಸ್ಕರಣಾ ಶುಲ್ಕಗಳನ್ನು ಮನ್ನಾ ಮಾಡಿದೆ. ಜತೆಗೆ ಇತರ ಬ್ಯಾಂಕುಗಳ ಸಾಲವನ್ನು ಎಸ್‌ಬಿಐಗೆ ವರ್ಗಾಯಿಸಿಕೊಳ್ಳುವವರಿಗೂ ಈಗ ಇರುವ ಶುಲ್ಕಗಳನ್ನು ಮನ್ನಾ ಮಾಡಿದೆ.
Vijaya Karnataka Web sbi waives processing fees on personal loans
ಎಸ್‌ಬಿಐ ವೈಯಕ್ತಿಕ ಸಾಲಗಳ ಸಂಸ್ಕರಣಾ ಶುಲ್ಕ ಮನ್ನಾ


ಸೋಮವಾರ ಈ ಕುರಿತು ಪ್ರಕಟಣೆ ನೀಡಿರುವ ಎಸ್‌ಬಿಐ, ಕಾರುಗಳ ಮೇಲಿನ ಸಾಲ, ವೈಯಕ್ತಿಕ ಚಿನ್ನದ ಮೇಲಿನ ಸಾಲಗಳು ಮತ್ತು ವೈಯಕ್ತಿಕ ಸಾಲಗಳ ಮೇಲಿನ ಸಂಸ್ಕರಣ ಶುಲ್ಕವನ್ನು ಶೇ 100ರಷ್ಟು ಮನ್ನಾ ಮಾಡಲಾಗಿದೆ ಎಂದು ತಿಳಿಸಿದೆ.

ಹಬ್ಬಗಳ ಋತುವಿನ ವಿಶೇಷ ಕೊಡುಗೆಯಾಗಿ ಬ್ಯಾಂಕ್‌ ಈ ಕೊಡುಗೆ ಘೋಷಿಸಿದೆ. 2017ರ ಡಿಸೆಂಬರ್‌ 31ರ ವರೆಗೆ ಸ್ವೀಕರಿಸಲಾಗುವ ಎಲ್ಲ ಕಾರ್‌ ಲೋನ್‌ಗಳ ಮೇಲೆ ಈ ಶುಲ್ಕ ಮನ್ನಾ ದೊರೆಯಲಿದೆ. ಅಕ್ಟೋಬರ್ 31ರ ವರೆಗೆ ವೈಯಕ್ತಿಕ ಚಿನ್ನದ ಸಾಲಗಳ ಮೇಲೆ ಸಂಸ್ಕರಣಾ ಶುಲ್ಕವನ್ನು ಶೇ 50ರಷ್ಟು ಮನ್ನಾ ಮಾಡಲಾಗಿದೆ. ಎಸ್‌ಬಿಐನಿಂದ ಪಡೆಯುವ ಎಕ್ಸ್‌ಪ್ರೆಸ್‌ ಕ್ರೆಡಿಟ್‌ (ತ್ವರಿತ ಸಾಲ) ಮೇಲಿನ ಸಂಸ್ಕರಣಾ ಶುಲ್ಕವನ್ನು ಸೆಪ್ಟೆಂಬರ್‌ 30ರ ವರೆಗೂ ಶೇ 50ರಷ್ಟು ಮನ್ನಾ ಮಾಡಲಾಗಿದೆ.

SBI waives processing fees on personal loans

MUMBAI: In a bid to boost its retail loan portfolio, the country's largest lender State Bank of India (SBI) has waived processing fees on most of its retail loans. This is in addition to the existing waiver of fees on takeover of home loans from other lenders.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ