ಆ್ಯಪ್ನಗರ

ಸಾರಿಡಾನ್‌ ಮಾತ್ರೆಯ ನಿಷೇಧ ತೆರವುಗೊಳಿಸಿದ ಸುಪ್ರೀಂಕೋರ್ಟ್‌

ನೋವು ನಿವಾರಕ ಮಾತ್ರೆ ಸಾರಿಡಾನ್‌ ಅನ್ನು ನಿಷೇಧಿತ ಔಷಧಗಳ ಪಟ್ಟಿಯಿಂದ ಸುಪ್ರೀಂ ಕೋರ್ಟ್‌ ತೆರವುಗೊಳಿಸಿದೆ ಎಂದು ಉತ್ಪಾದಕ ಪಿರಮಲ್‌ ಎಂಟರ್‌ಪ್ರೈಸಸ್‌ ತಿಳಿಸಿದೆ.

Vijaya Karnataka Web 22 Feb 2019, 5:00 am
ಹೊಸದಿಲ್ಲಿ : ನೋವು ನಿವಾರಕ ಮಾತ್ರೆ ಸಾರಿಡಾನ್‌ ಅನ್ನು ನಿಷೇಧಿತ ಔಷಧಗಳ ಪಟ್ಟಿಯಿಂದ ಸುಪ್ರೀಂ ಕೋರ್ಟ್‌ ತೆರವುಗೊಳಿಸಿದೆ ಎಂದು ಉತ್ಪಾದಕ ಪಿರಮಲ್‌ ಎಂಟರ್‌ಪ್ರೈಸಸ್‌ ತಿಳಿಸಿದೆ.
Vijaya Karnataka Web sc exempts painkiller saridon from the banned list in india
ಸಾರಿಡಾನ್‌ ಮಾತ್ರೆಯ ನಿಷೇಧ ತೆರವುಗೊಳಿಸಿದ ಸುಪ್ರೀಂಕೋರ್ಟ್‌


ಸಾರಿಡಾನ್‌ ಪರವಾಗಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ ಎಂದು ಪಿರಮಲ್‌ ಎಂಟರ್‌ಪ್ರೈಸಸ್‌ (ಪಿಇಎಲ್‌) ತಿಳಿಸಿದೆ.

2018ರ ಸೆಪ್ಟೆಂಬರ್‌ನಲ್ಲಿ ಸಾರಿಡಾನ್‌ಗೆ ನಿಷೇಧ ವಿಧಿಸಲಾಗಿತ್ತು. ಆದರೆ ಇದಕ್ಕೆ ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತರುವಲ್ಲಿ ಕಂಪನಿ ಯಶಸ್ವಿಯಾಗಿತ್ತು. ಹೀಗಾಗಿ ಇದರ ಉತ್ಪಾದನೆ, ಮಾರಾಟವನ್ನು ಮುಂದುವರಿಸಿತ್ತು.

''ಸುಪ್ರೀಂ ಕೋರ್ಟ್‌ ಆದೇಶದಿಂದ ಸಂತಸವಾಗಿದೆ. ಸುರಕ್ಷಿತ ಔಷಧವನ್ನು ನೀಡುವ ನಮ್ಮ ಬದ್ಧತೆಯನ್ನು ಇದು ದೃಢಪಡಿಸಿದೆ'' ಎಂದು ಪಿಇಎಲ್‌ ಕಾರ್ಯಕಾರಿ ನಿರ್ದೇಶಕ ನಂದಿನಿ ಪಿರಮಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ