ಆ್ಯಪ್ನಗರ

ಮಾರುಕಟ್ಟೆಯಲ್ಲಿ ಭರ್ಜರಿ ಸಂಚಲನ: 39 ಸಾವಿರ ದಾಟಿದ ಸೆನ್ಸೆಕ್ಸ್

ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಧನಾತ್ಮಕತೆ ಹಾಗೂ ಆರ್‌ಬಿಐ ಬಡ್ಡಿದರ ಕಡಿತ ಸಂಭವದ ಕಾರಣಗಳಿಂದ ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಸನ್ಸೆಕ್ಸ್ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಉತ್ತಮ ವಹಿವಾಟು ಆರಂಭಿಸಿದೆ.

THE ECONOMIC TIMES 1 Apr 2019, 11:44 am
ಮುಂಬಯಿ: ಹೊಸ ಹಣಕಾಸು ವರ್ಷದ ಮೊದಲ ದಿನವೇ ಸೆನ್ಸೆಕ್ಸ್ ಭರ್ಜರಿ ಏರಿಕೆ ಕಂಡಿದೆ.
Vijaya Karnataka Web bse


ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಧನಾತ್ಮಕತೆ ಹಾಗೂ ಆರ್‌ಬಿಐ ಬಡ್ಡಿದರ ಕಡಿತ ಸಂಭವದ ಕಾರಣಗಳಿಂದ ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಸನ್ಸೆಕ್ಸ್ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಉತ್ತಮ ವಹಿವಾಟು ಆರಂಭಿಸಿದೆ.

ಇಂದಿನ ದಿನದ ಆರಂಭಕ್ಕೆ ಸನ್ಸೆಕ್ಸ್ 39.017 ದಾಖಲೆಯ ಮುನ್ನಡೆ ಸಾಧಿಸಿದೆ. ನಿಫ್ಟಿ ಕೂಡ 50 ಅಂಕಗಳ ಮುನ್ನಡೆ ಸಾಧಿಸಿದ್ದು, 11,710 ಅಂಕಗಳಿಗೆ ತಲುಪಿದೆ.

ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಬಿಎಸ್‌ಇ ಬೆಂಚ್‌ಮಾರ್ಕ್ ಸನ್ಸೆಕ್ಸ್ 264.72 (0.68%) ಅಂಕಗಳ ಏರಿಕೆ ಕಂಡು 38,937.63 ಅಂಕ ತಲುಪಿತ್ತು. ಇದು ಸರ್ವಕಾಲಿಕ ದಾಖಲೆಯಾಗಿದೆ.

ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಎಂ&ಎಂ, ಐಸಿಐಸಿಐ ಬ್ಯಾಂಕ್ ಮತ್ತು ಭಾರತೀಯ ಏರ್‌ಟೆಲ್ ಷೇರುಗಳು ಕ್ರೀಯಾಶೀಲವಾಗಿದ್ದರೆ, ಕೋಲ್ ಇಂಡಿಯಾ, ಎನ್‌ಟಿಪಿಸಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಷೇರುಗಳ ಮೌಲ್ಯ ಕ್ಷೀಣಿಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ