ಆ್ಯಪ್ನಗರ

ಸೆನ್ಸೆಕ್ಸ್‌ 714 ಅಂಕ ಪತನ

ಐದು ರಾಜ್ಯಗಳ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿದ್ದು, ಸೆನ್ಸೆಕ್ಸ್‌ ಸೋಮವಾರ 714 ಅಂಕ ಕುಸಿಯಿತು.

Vijaya Karnataka Web 11 Dec 2018, 5:00 am
ಮುಂಬಯಿ: ಐದು ರಾಜ್ಯಗಳ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿದ್ದು, ಸೆನ್ಸೆಕ್ಸ್‌ ಸೋಮವಾರ 714 ಅಂಕ ಕುಸಿಯಿತು. ಸೆನ್ಸೆಕ್ಸ್‌ 34,959ಕ್ಕೆ ಕುಸಿತಕ್ಕೀಡಾಯಿತು. ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಇದು ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ನಿಫ್ಟಿ 205 ಅಂಕ ಕಳೆದುಕೊಂಡು 10,488ಕ್ಕೆ ಸ್ಥಿರವಾಯಿತು. ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಎಲ್ಲ ವಲಯಗಳ ಷೇರುಗಳೂ ನಷ್ಟಕ್ಕೀಡಾಯಿತು. ರಿಲಯನ್ಸ್‌ ಇಂಡಸ್ಟ್ರೀಸ್‌, ಏಷ್ಯನ್‌ ಪೇಂಟ್ಸ್‌, ಟಾಟಾ ಮೋಟಾರ್ಸ್‌, ಅದಾನಿ ಪೋರ್ಟ್ಸ್ ಷೇರುಗಳು ಭಾರಿ ನಷ್ಟ ದಾಖಲಿಸಿತು. ವಿದೇಶಿ ಹೂಡಿಕೆದಾರರು ಕಳೆದ ಶುಕ್ರವಾರ 817 ಕೋಟಿ ರೂ. ಮೌಲ್ಯದ ಷೇರು ಮಾರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ