ಆ್ಯಪ್ನಗರ

ಸೆನ್ಸೆಕ್ಸ್‌ 490 ಅಂಕ ಜಿಗಿತ

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 490 ಅಂಕ ಜಿಗಿಯಿತು. 39,054ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 150 ಅಂಕ ಏರಿಕೊಂಡು 11,726ಕ್ಕೆ ಸ್ಥಿರವಾಯಿತು.

Vijaya Karnataka Web 25 Apr 2019, 5:00 am
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 490 ಅಂಕ ಜಿಗಿಯಿತು. 39,054ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 150 ಅಂಕ ಏರಿಕೊಂಡು 11,726ಕ್ಕೆ ಸ್ಥಿರವಾಯಿತು.
Vijaya Karnataka Web sensex ends 489 points higher nifty closes at 11726
ಸೆನ್ಸೆಕ್ಸ್‌ 490 ಅಂಕ ಜಿಗಿತ


ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ, ಇನ್ಫೋಸಿಸ್‌, ಐಟಿಸಿ, ಐಸಿಐಸಿಐ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌ ಷೇರುಗಳು ಲಾಭ ಗಳಿಸಿತು. ಕಚ್ಚಾ ತೈಲ ದರ ಬುಧವಾರ ಪ್ರತಿ ಬ್ಯಾರೆಲ್‌ಗೆ ಶೇ.0.08ರಷ್ಟು ಇಳಿಕೆಯಾಗಿದ್ದು, 74.45 ಡಾಲರ್‌ಗೆ ತಗ್ಗಿತು. ಇದು ಷೇರು ಪೇಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಡಾಲರ್‌ ಎದುರು ರೂಪಾಯಿ ಮೌಲ್ಯ 21 ಪೈಸೆ ಇಳಿದು 69.83ಕ್ಕೆ ತಗ್ಗಿತು. ಶಾಂಘೈ, ಟೋಕಿಯೊ, ಸೋಲ್‌ ಮುಂತಾದ ಕಡೆ ಷೇರು ಸೂಚ್ಯಂಕಗಳು ಕುಸಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ