ಆ್ಯಪ್ನಗರ

ಸತತ ಕುಸಿತದ ಬಳಿಕ ಶುಕ್ರವಾರ ಮೇಲೆದ್ದ ಸೆನ್ಸೆಕ್ಸ್‌, 1,628 ಅಂಕ ಏರಿಕೆ

ಒಎನ್‌ಜಿಸಿ ಷೇರುಗಳು ಶೇಕಡಾ 18.58 ರಷ್ಟು ಏರಿಕೆ ಕಂಡರೆ, ಇನ್ಫೋಸಿಸ್‌ ಮತ್ತು ವಿಪ್ರೋದ ಶೇರುಗಳು ಶೇ. 9.68ರವರೆಗೆ ಏರಿಕೆ ಕಂಡವು. ಆದರೆ ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಷೇರುಗಳು ಮಾತ್ರ ಈ ಏರಿಕೆ ಮಧ್ಯೆಯೂ ಶೇ. 1.3 ರಷ್ಟು ಕುಸಿತ ದಾಖಲಿಸಿದವು.

TIMESOFINDIA.COM 20 Mar 2020, 6:59 pm

ಹೊಸದಿಲ್ಲಿ: ಹಲವು ದೇಶಗಳ ಮುಖ್ಯಸ್ಥರು ಕೊರೊನಾ ವೈರಸ್‌ ಆರ್ಥಿಕತೆ ಮೇಲಾಗುವ ಪರಿಣಾಮ ಎದುರಿಸಲು ಪರಿಹಾರ ಕ್ರಮಗಳನ್ನು ಘೋಷಿಸಿರುವ ಬೆನ್ನಲ್ಲೇ ಇಳಿಕೆಯ ಹಾದಿಯಲ್ಲಿದ್ದ ಷೇರು ಮಾರುಕಟ್ಟೆ ಸ್ವಲ್ಪ ಮಟ್ಟಿಗೆ ಶುಕ್ರವಾರ ಚೇತರಿಸಿಕೊಂಡಿದೆ.
Vijaya Karnataka Web sensex 01


ಇದರ ಜೊತೆಗೆ ಕೊರೊನಾ ವೈರಸ್‌ನಿಂದ ಆರ್ಥಿಕತೆ ಮೇಲಾಗುವ ಪರಿಣಾಮಗಳನ್ನು ಎದುರಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ತುರ್ತು ಕಾರ್ಯಪಡೆ ರಚಿಸುವುದಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ವ್ಯಾಪಾರಿಗಳ ಪ್ರಕಾರ ಈ ಎಲ್ಲಾ ಕಾರಣಗಳಿಂದ ಹೂಡಿಕೆದಾರರು ಭಾವನೆಗಳು ಶುಕ್ರವಾರ ಧನಾತ್ಮಕವಾಗಿದ್ದವು, ಹೀಗಾಗಿ ಬಿರುಸಿನ ಷೇರು ವ್ಯಾಪಾರ ಶುಕ್ರವಾರ ಕಂಡು ಬಂತು.

ಬಾಂಬೆ ಷೇರು ಮಾರುಕಟ್ಟೆ ಸೆನ್ಸೆಕ್ಸ್‌ ಸಂವೇದಿ ಸೂಚ್ಯಂಕ 1,628 ಅಂಕ ಏರಿಕೆ ಕಂಡು 29,926 ಕ್ಕೆ ತಲುಪಿತು. ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 8,746ಕ್ಕೆ ಏರಿಕೆಯಾಯಿತು.

ಡಾಲರ್‌ ಎದುರು ಮುಗ್ಗರಿಸಿದ ರೂಪಾಯಿ, ಮೊದಲ ಬಾರಿ 75ಕ್ಕಿಂತ ಕೆಳಕ್ಕೆ ಇಳಿಕೆ; ಯಾರಿಗೆ ಲಾಭ-ನಷ್ಟ?

ಸರಕಾರಿ ಸ್ವಾಮ್ಯದ ಒಎನ್‌ಜಿಸಿ ಷೇರುಗಳಲ್ಲಿ ಶೇಕಡಾ 18.58 ರಷ್ಟು ಏರಿಕೆ ಕಂಡುಬಂದರೆ, ಇನ್ಫೋಸಿಸ್‌ ಮತ್ತು ವಿಪ್ರೋದ ಶೇರುಗಳು ಶೇ. 9.68ರವರೆಗೆ ಏರಿಕೆ ಕಂಡವು. ಆದರೆ ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಷೇರುಗಳು ಮಾತ್ರ ಈ ಏರಿಕೆ ಮಧ್ಯೆಯೂ ಶೇ. 1.3 ರಷ್ಟು ಕುಸಿತ ದಾಖಲಿಸಿದವು.

ಕೊರೊನಾ ವೈರಸ್‌ನಿಂದ ಆರ್ಥಿಕ ಕುಸಿತದ ಭೀತಿ: ತುರ್ತು ಕಾರ್ಯಪಡೆ ರಚಿಸಿದ ಪ್ರಧಾನಿ ಮೋದಿ

ಇನ್ನು ಗುರುವಾರ ಸಾರ್ವಕಾಲಿಕ ಕುಸಿತ ಕಂಡು 75.35ಕ್ಕೆ ಇಳಿಕೆ ಕಂಡಿದ್ದ ರೂಪಾಯಿ ಮೌಲ್ಯ ಇಂದು ಸ್ವಲ್ಪ ಚೇತರಿಕೆ ಕಂಡಿತು. ಸದ್ಯ ಡಾಲರ್‌ ಎದುರು ರೂಪಾಯಿ ವಿನಿಮಯ ದರ 74.78ಕ್ಕೆ ಏರಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ