ಆ್ಯಪ್ನಗರ

ವಾರದ ಆರಂಭ; ಷೇರು ಮಾರುಕಟ್ಟೆ ಶುಭಾರಂಭ, ಬೆಳ್ಳಂ ಬೆಳಗ್ಗೆ 350 ಅಂಕ ಜಂಪ್‌

ಕೇಂದ್ರ ಸರಕಾರದ ಆರ್ಥಿಕ ಸುಧಾರಣೆ ಕ್ರಮಗಳು ಹಾಗೂ ಸೆ.14ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ ಇನ್ನಷ್ಟು ನಿರೀಕ್ಷೆಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿದೆ.

Vijaya Karnataka Web 14 Sep 2020, 10:07 am
ಮುಂಬಯಿ: ಕಳೆದ ಕೆಲವು ದಿನಗಳಿಂದ ಡಲ್‌ ಹೊಡೆದಿದ್ದ ಷೇರು ಮಾರುಕಟ್ಟೆ, ವಾರದ ಆರಂಭದ ದಿನವಾದ ಸೋಮವಾರ ಚೇತರಿಕೆ ಕಂಡಿದೆ.
Vijaya Karnataka Web ಬಿಎಸ್‌ಇ
ಬಿಎಸ್‌ಇ


ಸೋಮವಾರ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ವಿನಿಮಯ ಪೇಟೆಯಲ್ಲಿ 350 ಅಂಕಗಳ ಜಂಪ್‌ ಕಂಡುಬಂದಿದೆ. ವಾರದ ಆರಂಭ ದಿನ ಸೆನ್ಸೆಕ್ಸ್‌ 39,143 ಅಂಕಗಳೊಂದಿಗೆ ವಹಿವಾಟು ಆರಂಭಿಸಿದೆ.

ರಾಷ್ಟ್ರೀಯ ಷೇರು ವಿನಿಮಯ ಪೇಟೆಯಲ್ಲೂ ಸೋಮವಾರದ ಆರಂಭ ಉತ್ತಮವಾಗಿ ನಿಫ್ಟಿ 250 ಅಂಕಗಳ ಏರಿಕೆ ಕಂಡು 11,500 ಅಂಕಗಳೊಂದಿಗೆ ಪ್ರಗತಿಯ ಹಾದಿಯತ್ತ ಮುಖ ಮಾಡಿದೆ.

ಸೆನ್ಸೆಕ್ಸ್‌ 350 ಅಂಕ ಏರಲು ಕೆಲವು ಕಂಪನಿಗಳ ಚೇತರಿಕೆಯೂ ಕಾರಣವಾಗಿದೆ. ಪ್ರಮುಖವಾಗಿ ಎಸ್‌ಬಿಐ ಷೇರು ಮೌಲ್ಯ ಹೆಚ್ಚಾಗಿದ್ದು ಚೇತರಿಕೆಗೆ ಇದು ನಾಂದಿ ಹಾಡಿದೆ.

ಬ್ಯಾಂಕಿಂಗ್‌ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಕಂಪನಿಗಳ ಷೇರು ವಾರದ ಸ್ವಲ್ಪ ಗೇನ್‌ ಮಾಡಿಕೊಂಡಿದೆ. ಇದು ಒಟ್ಟಾರೆ ಮಾರುಕಟ್ಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.

ಇದಲ್ಲದೇ ಐಟಿ ಕ್ಷೇತ್ರದ ಕೆಲವು ಪ್ರತಿಷ್ಠಿತ ಕಂಪನಿಗಳ ಷೇರು ಕೂಡ ಚೇತರಿಕೆಯ ಹಾದಿಯತ್ತ ಸಾಗಿದೆ. ಇದು ಮುಂಬಯಿಯ ದಲಾಲ್‌ ಸ್ಟ್ರೀಟ್‌ನಲ್ಲಿ ಭಾರಿ ಭರವಸೆಯನ್ನು ಮೂಡಿಸಿದೆ.

ಕಳೆದ ವಾರದಲ್ಲಿ ಭಾರಿ ಏರಿಳಿತ ಕಂಡಿದ್ದ ಷೇರು ಮಾರುಕಟ್ಟೆ ಈ ವಾರದಲ್ಲಿ ಇನ್ನಷ್ಟು ಏರಿಕೆಯ ನಿರೀಕ್ಷೆಯನ್ನು ಹೊಂದಿದೆ. ಮಾರುಕಟ್ಟೆಯ ಮೇಲೆ ಕೊರೊನಾ ಲಸಿಕೆಯ ಪ್ರಭಾವ ಕೂಡ ಬಿದ್ದಿರುವುದು ಚೇತರಿಕೆಗೆ ದಾರಿಯಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಬ್ರಿಟನ್‌ನಲ್ಲಿ ಕೊರೊನ ಲಸಿಕೆಯ ಮೂರನೇ ಹಂತ ಕೂಡ ಯಶಸ್ವಿಯಾಗಿರುವುದು ಷೇರು ಮಾರುಕಟ್ಟೆ ಡಬಲ್‌ ಡೋಸ್‌ ಟಾನಿಕ್ ಕೊಟ್ಟಂತೆ ಆಗಿದೆ.

ಕೇಂದ್ರ ಸರಕಾರದ ಆರ್ಥಿಕ ಸುಧಾರಣೆ ಕ್ರಮಗಳು ಹಾಗೂ ಸೆ.14ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ ಇನ್ನಷ್ಟು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರಕಾರ ಶೀಘ್ರದಲ್ಲೇಕೈಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ