ಆ್ಯಪ್ನಗರ

ದಸರಾದಂದೇ ಷೇರು ಪೇಟೆಯಲ್ಲಿ ಭಾರಿ ಕುಸಿತ, 540 ಅಂಕ ಕಳೆದುಕೊಂಡ ಸೆನ್ಸೆಕ್ಸ್‌

ರಿಲಯನ್ಸ್‌-ಫ್ಯೂಚರ್‌ ಗ್ರೂಪ್‌ ಡೀಲ್‌ ವಿವಾದದಲ್ಲಿ ಅಮೆಜಾನ್‌ಗೆ ಸಿಂಗಾಪುರ ನ್ಯಾಯಾಲಯದಲ್ಲಿ ಮಧ್ಯಂತರ ಗೆಲುವು ಸಿಗುತ್ತಿದ್ದಂತೆ ಷೇರುಪೇಟೆಯಲ್ಲಿ ರಿಲಯನ್ಸ್‌ ಷೇರುಗಳ ಮೌಲ್ಯ ಶೇ.4ರಷ್ಟು ಇಳಿಕೆಯಾಗಿದೆ.

Agencies 26 Oct 2020, 6:18 pm
ಮುಂಬಯಿ: ವಾರದ ಮೊದಲ ದಿನವೇ ಷೇರು ಪೇಟೆ ಭಾರಿ ಕುಸಿತಕ್ಕೆ ಸಾಕ್ಷಿಯಾಗಿದೆ. ಆಟೋಮೊಬೈಲ್‌ ಮತ್ತು ಮೆಟಲ್‌ ಕಂಪನಿಗಳ ಷೇರುಗಳು ದೊಡ್ಡ ಮಟ್ಟಕ್ಕೆ ಇಳಿಕೆಯಾಗಿದ್ದೇ ಇದಕ್ಕೆ ಕಾರಣ.
Vijaya Karnataka Web Stock Market


ಸೋಮವಾರದ ವಹಿವಾಟಿನಲ್ಲಿ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 540 ಅಂಕ ಕುಸಿತ ಕಂಡಿತು. ಈ ಮೂಲಕ ಸೆನ್ಸೆಕ್ಸ್‌ 40,146 ಅಂಕಗಳಿಗೆ ದಿನದ ವಹಿವಾಟು ಕೊನೆಗೊಳಿಸಿತು. ಇನ್ನೊಂದೆಡೆ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿಯೂ 163 ಅಂಕ ಕುಸಿತ ದಾಖಲಿಸಿ 11,368 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು.

ಸೆನ್ಸೆಕ್ಸ್‌ನಲ್ಲಿ ಬಜಾಜ್‌ ಆಟೋ, ಮಹೀಂದ್ರಾ ಆಂಡ್‌ ಮಹೀಂದ್ರಾ, ಟಾಟಾ ಸ್ಟೀಲ್‌, ಟೆಕ್‌ ಮಹೀಂದ್ರ ಮತ್ತು ಎಸ್‌ಬಿಐ ಷೇರುಗಳು ಶೇ. 6.10ಯವರೆಗೆ ಕುಸಿತ ಕಂಡವು. ಆದರೆ ಇದರ ನಡುವೆಯೂ ನೆಸ್ಟ್ಲೆ ಇಂಡಿಯಾ, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಪವರ್ ಗ್ರಿಡ್‌ ಹಾಗೂ ಹಿಂದೂಸ್ಥಾನ್‌ ಯುನಿಲೆವರ್‌ ಷೇರುಗಳು ಏರಿಕೆ ದಾಖಲಿಸಿದ್ದು ವಿಶೇಷ.

ರಿಲಯನ್ಸ್‌-ಫ್ಯೂಚರ್‌ ಗ್ರೂಪ್‌ ಡೀಲ್‌ನಲ್ಲಿ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ಗೆ ಸಿಂಗಾಪುರ ನ್ಯಾಯಾಲಯದಲ್ಲಿ ಮಧ್ಯಂತರ ಗೆಲುವು ಸಿಗುತ್ತಿದ್ದಂತೆ ಇತ್ತ ರಿಲಯನ್ಸ್‌ ಷೇರುಗಳು ಶೇ.4ರಷ್ಟು ಇಳಿಕೆ ದಾಖಲಿಸಿದವು. ಇದು ಆಗಸ್ಟ್‌ 4ರ ನಂತರದ ರಿಲಯನ್ಸ್‌ ಷೇರುಗಳ ಕನಿಷ್ಠ ದರವಾಗಿದೆ. ಇನ್ನೊಂದೆಡೆ ಫ್ಯೂಚರ್‌ ಗ್ರೂಪ್‌ ಷೇರುಗಳು ಬರೋಬ್ಬರು ಶೇ.8.48ರಷ್ಟು ಕುಸಿತ ಕಂಡವು.

ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ವಹಿವಾಟು ಸೂಪರ್‌, ಸೆನ್ಸೆಕ್ಸ್‌, ನಿಫ್ಟಿ ಏರಿಕೆ, ಬ್ಯಾಂಕಿಂಗ್‌, ಆಟೊ ಷೇರು ಚೇತರಿಕೆ
ಈ ವಾರದಲ್ಲಿ ಹೆಚ್ಚಿನ ಕಂಪನಿಗಳು ಎರಡನೇ ತ್ರೈಮಾಸಿಕದ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಲಿದ್ದು, ಇದು ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇದೇ ವೇಳೆ ರೂಪಾಯಿಯೂ ಮೌಲ್ಯವೂ ಇಳಿಕೆಯಾಗಿದ್ದು, ಅಮೆರಿಕಾದ ಡಾಲರ್‌ ಎದುರು ರೂಪಾಯಿ ಮೌಲ್ಯ 23 ಪೈಸೆಯಷ್ಟು ಕುಸಿತವಾಗಿ 73.84 ರೂಪಾಯಿಗೆ ಇಳಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ