ಆ್ಯಪ್ನಗರ

ಮುಂದುವರಿದ ಗೂಳಿ ಓಟ, 50,000 ಸನಿಹಕ್ಕೆ ಜಿಗಿದ ಸೆನ್ಸೆಕ್ಸ್‌

ಅಮೆರಿಕದಲ್ಲಿ ಜನವರಿ 20ರಂದು ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಬೃಹತ್‌ ನೆರವಿನ ಪ್ಯಾಕೇಜ್‌ ಘೋಷಿಸಬಹುದು ಎಂಬ ನಿರೀಕ್ಷೆ ಮೂಡಿದೆ. ಇದು ಷೇರು ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದೆ.

Agencies 20 Jan 2021, 5:23 pm
ಮುಂಬಯಿ: ಬಾಂಬೆ ಷೇರು ಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಸತತ ಎರಡನೇ ದಿನವೂ ಏರಿಕೆ ದಾಖಲಿಸಿದ್ದು, 393 ಅಂಕಗಳ ಗಳಿಕೆಯೊಂದಿಗೆ 49,792.12 ಅಂಕಗಳಿಗೆ ಏರಿಕೆಯಾಗಿದೆ. ಇದು ಸಾರ್ವಕಾಲಿಕ ದಾಖಲೆಯೂ ಹೌದು. ಐಟಿ, ಆಟೋಮೊಬೈಲ್‌ ಷೇರುಗಳು ಗರಿಷ್ಠ ಏರಿಕೆ ದಾಖಲಿಸಿದ್ದು ಸೆನ್ಸೆಕ್ಸ್‌ ಹೆಚ್ಚಳಕ್ಕೆ ಮಹತ್ವದ ಕೊಡುಗೆ ನೀಡಿವೆ.
Vijaya Karnataka Web Sensex bull


ಅಮೆರಿಕದಲ್ಲಿ ಜನವರಿ 20ರಂದು ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಹೊಸ ನೆರವಿನ ಪ್ಯಾಕೇಜ್‌ ಘೋಷಿಸಬಹುದು ಎಂಬ ನಿರೀಕ್ಷೆ ಮೂಡಿದೆ. ಅಮೆರಿಕ ಹಣಕಾಸು ಕಾರ್ಯದರ್ಶಿಯಾಗಿ ನೇಮಕವಾಗಿರುವ ಜಾನೆಟ್‌ ಯೆಲ್ಲೆನ್ ದೇಶದ ಆರ್ಥಿಕತೆಯನ್ನು ರಕ್ಷಿಸಲು ಭಾರಿ ನೆರವು ಅನಿವಾರ್ಯ ಎಂದಿದ್ದಾರೆ. ಇದು ಕೂಡ ಸೆನ್ಸೆಕ್ಸ್‌ ನೆಗೆತಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನೊಂದೆಡೆ ನಿಫ್ಟಿ 123.55 ಅಂಕಗಳಗಳ ಏರಿಕೆಯೊಂದಿಗೆ 14,644 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು.

ಮತ್ತೆ ಪುಟಿದೆದ್ದ ಗೂಳಿ, ಒಂದೇ ದಿನ 834 ಅಂಕ ಜಿಗಿದ ಸೆನ್ಸೆಕ್ಸ್‌
ಸೆನ್ಸೆಕ್ಸ್‌ನಲ್ಲಿ ಮಾರುತಿ ಷೇರು ಮೌಲ್ಯ ಶೇ.2.75ರಷ್ಟು ಹೆಚ್ಚಾದರೆ, ಟೆಕ್‌ ಮಹೀಂದ್ರ, ಮಹೀಂದ್ರಾ ಆಂಡ್‌ ಮಹೀಂದ್ರಾ, ಏಷ್ಯನ್‌ ಪೇಂಟ್ಸ್‌ ಷೇರುಗಳು ಶೇ.2.67ರಷ್ಟು ಮೇಲೇರಿದವು. ರಿಲಯನ್ಸ್‌, ಟಿಸಿಎಸ್‌, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಷೇರುಗಳೂ ಮೇಲೇರಿದ್ದು ಸೆನ್ಸೆಕ್ಸ್‌ ನಾಗಾಲೋಟಕ್ಕೆ ಮತ್ತಷ್ಟು ನೆರವಾಯಿತು.

ಈ ಗಳಿಕೆಯ ಮಧ್ಯೆಯೂ ಪವರ್‌ ಗ್ರಿಡ್‌ ಷೇರುಗಳು ಶೇ.175ರಷ್ಟು ನಷ್ಟ ಅನುಭವಿಸಿದರೆ, ಎನ್‌ಟಿಪಿಸಿ ಷೇರುಗಳು ಶೇ.1.35ರಷ್ಟು ಕೆಳಗಿಳಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ