ಆ್ಯಪ್ನಗರ

ವರ್ಕ್ ಆಯ್ತು ನಿರ್ಮಲಾ ಟಾನಿಕ್!: ಗಣನೀಯ ಏರಿಕೆ ಕಂಡ ಷೇರು ಮಾರುಕಟ್ಟೆ

ಭಾರತದ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿದೆ ಎಂಬ ಊಹಾಪೋಹಕ್ಕೆ ಬ್ರೇಕ್ ಬೀಳುವ ರೀತಿಯಲ್ಲಿ ಷೇರು ಮಾರುಕಟ್ಟೆ ಸದ್ದು ಮಾಡ್ತಿದೆ. ದಿನದ ಅಂತ್ಯದ ವೇಳೆಗೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 700ಕ್ಕೂ ಹೆಚ್ಚು ಅಂಕಗಳ ಏರಿಕೆ ದಾಖಲಾಗಿದೆ. ಈ ಮೂಲಕ, ದೇಶದ ಆರ್ಥಿಕಾಭಿವೃದ್ಧಿಗೆ ನಿರ್ಮಲಾ ಸೀತಾರಾಮನ್ ಸಾರಥ್ಯದ ಕೇಂದ್ರ ಹಣಕಾಸು ಇಲಾಖೆ ನೀಡಿದ ಟಾನಿಕ್ ವರ್ಕೌಟ್ ಆಗಿದೆ.

THE ECONOMIC TIMES 26 Aug 2019, 3:31 pm
ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಮತ್ತೆ ಪುಟಿದೆದ್ದಿದೆ. ಕೇಂದ್ರ ಹಣಕಾಸು ಇಲಾಖೆ ದೇಶದ ಆರ್ಥಿಕಾಭಿವೃದ್ಧಿಗೆ ಟಾನಿಕ್ ಕೊಟ್ಟ ಬೆನ್ನಲ್ಲೇ, ಷೇರು ಮಾರುಕಟ್ಟೆಯಲ್ಲಿ 700ಕ್ಕೂ ಹೆಚ್ಚು ಅಂಕಗಳ ಏರಿಕೆ ದಾಖಲಾಗಿದೆ. ಒಟ್ಟಾರೆ 37,496 ಅಂಕಗಳಿಗೆ ಬಂದು ನಿಂತಿದೆ. ನಿಫ್ಟಿ ಕೂಡಾ 2.10 ಅಂಕಗಳ ಏರಿಕೆ ಕಂಡಿದ್ದು, ದಾಖಲೆಯ 11,052 ಅಂಕಗಳಿಗೆ ವೃದ್ದಿ ಕಂಡಿದೆ. ಬ್ಯಾಂಕಿಂಗ್, ಹಣಕಾಸು ಸೇವಾ ವಲಯಗಳಲ್ಲಿ ಪ್ರಗತಿ ಕಂಡಿದ್ದೇ ಈ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
Vijaya Karnataka Web Sensex


ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ನಿರ್ಮಲಾ ಸೀತಾರಾಮನ್‌ ಟಾನಿಕ್

ಇನ್ನೊಂದೆಡೆ, ಲೋಹ ಉತ್ಪನ್ನಗಳ ಉತ್ಪಾದನಾ ವಲಯದಲ್ಲಿ ಕುಸಿತ ಕಂಡಿದೆ. ಚೀನಾ ಹಾಗೂ ಅಮೆರಿಕ ನಡುವಣ ವ್ಯಾಪಾರ-ವಹಿವಾಟಿನ ಸಮರದ ನೇರ ದುಷ್ಪರಿಣಾಮ ಭಾರತದ ಮಾರುಕಟ್ಟೆ ಮೇಲೆ ಆಗುತ್ತಿದೆ. ಚೀನಾದ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚುವರಿ ತೆರಿಗೆ ವಿಧಿಸಿರುವ ಪರಿಣಾಮ, ಭಾರತಕ್ಕೂ ಬಿಸಿ ತಟ್ಟಿದೆ.

ನಿಫ್ಟಿಯಲ್ಲಿ ಅದಾನಿ ಪೋರ್ಟ್ ಗಣನೀಯ ಏರಿಕೆ ಕಂಡ ಮೊದಲ ಸಂಸ್ಥೆಯಾಗಿ ಗುರ್ತಿಸಿಕೊಂಡಿದೆ. ಯೆಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ, ಇಂಡಿಯಾ ಬುಲ್ಸ್, ಎಲ್ ಅಂಡ್ ಟಿ, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್ ಗಳ ಸಾಧನೆ ಸುಧಾರಿಸಿದೆ. ಆದ್ರೆ, ಟಾಟಾ, ಜೆಎಸ್ ಡಬ್ಲ್ಯೂ ಸ್ಟೀಲ್ಸ್, ವೇದಾಂತ, ಹೀರೋ ಮೋಟಾರ್ ಕಾರ್ಪ್ ಸೇರಿದಂತೆ ಹಲವು ಸಂಸ್ಥೆಗಳು ಕುಸಿತ ಕಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ