ಆ್ಯಪ್ನಗರ

ಷೇರು ಮಾರುಕಟ್ಟೆ: ವಾರಾಂತ್ಯ ಆರಂಭದಲ್ಲಿ ಮೋಡ ಕವಿದ ವಾತಾವರಣ, ಸೆನ್ಸೆಕ್ಸ್‌, ನಿಫ್ಟಿ ಡೌನ್‌

ಕಳೆದ ಕೆಲವು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡು ಬಂದಿದ್ದ ಬ್ಯಾಂಕಿಂಗ್‌ ಷೇರುಗಳು ಹಾಗೂ ಕೆಲವು ಆಟೋ ಷೇರುಗಳು ಶುಕ್ರವಾರದ ಭಾರಿ ನಿರೀಕ್ಷೆಯನ್ನು ಹೊಂದಿದ್ದವು. ಆದರೆ ಕೆಲವೇ ಕೆಲವು ಷೇರುಗಳು ಹೂಡಿಕೆದಾರರಿಗೆ ನೆಮ್ಮದಿಯನ್ನು ಉಂಟು ಮಾಡಿದೆ.

Vijaya Karnataka Web 27 Nov 2020, 9:56 am
ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಮೋಡಕವಿದ ವಾತಾವರಣ ಕಂಡುಬಂದಿದೆ. ನಿವಾರ್‌ ಚಂಡಮಾರುತದಿಂದ ಭಾರಿ ಮಳೆಯಾಗಿದ್ದರೆ ದಲಾಲ್‌ ಸ್ಟ್ರೀಟ್‌ನಲ್ಲಿ ಷೇರುಗಳು ತಣ್ಣಗಾಗಿವೆ.
Vijaya Karnataka Web ಬಿಎಸ್‌ಇ
ಬಿಎಸ್‌ಇ


ವಾರಾಂತ್ಯವಾದ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಇಳಿಮುಖ ಕಂಡಿದೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಶುಕ್ರವಾರದ ಆರಂಭದ ವಹಿವಾಟಿನಲ್ಲಿ ಆಮೆ ಗತಿಯಲ್ಲಿ ಸಾಗಿ ಹೂಡಿಕೆದಾರರಿಗೆ ನಿರಾಸೆ ಮೂಡಿಸಿದೆ.

ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ವಿನಿಮಯ ಪೇಟೆಯಲ್ಲಿ ಸೆನ್ಸೆಕ್ಸ್‌ 18 ಅಂಕಗಳ ಇಳಿಕೆ ಕಂಡುಬಂದಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 44,241ಕ್ಕೆ ಇಳಿಕೆಯಾಗಿದೆ.

ರಾಷ್ಟ್ರೀಯ ಷೇರು ವಿನಿಮಯ ಪೇಟೆಯಲ್ಲೂ ಶುಕ್ರವಾರ ವಹಿವಾಟು ಡಲ್‌ ಹೊಡೆದಿದೆ. ನಿಫ್ಟಿ 2 ಅಂಕಗಳ ಇಳಿಕೆ ಕಂಡು 12,984 ಅಂಕದಲ್ಲಿ ವಹಿವಾಟು ನಡೆಸುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾದ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪ್ರಭಾವ ಬೀರಿದೆ. ಆದರೆ ಒಟ್ಟಾರೆ ಮಾರುಕಟ್ಟೆ ಪರಿಸ್ಥಿತಿ ಗಮನಿಸಿದರೆ ಆತಂಕ ಪಡಬೇಕಾಗಿಲ್ಲ, ದಿನಕಳೆದಂತೆ ಇದು ಕುದುರಿಕೊಳ್ಳಬಹುದು ಎಂದು ಷೇರುಪೇಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಒಟ್ಟು 753 ಷೇರುಗಳು ಮೇಲ್ಮುಖದಲ್ಲಿ ಸಾಗಿದ್ದರೆ, 322 ಷೇರುಗಳು ಇಳಿಮುಖವಾಗಿದೆ, 74 ಷೇರುಗಳು ಯಥಾಸ್ಥಿತಿಯಲ್ಲಿದೆ.

ಕಳೆದ ಕೆಲವು ದಿನಗಳಿಂದ ಸ್ಥಿರತೆ ಕಾಪಾಡಿಕೊಂಡು ಬಂದಿದ್ದ ಬ್ಯಾಂಕಿಂಗ್‌ ಷೇರುಗಳು ಹಾಗೂ ಕೆಲವು ಆಟೋ ಷೇರುಗಳು ಶುಕ್ರವಾರದ ಭಾರಿ ನಿರೀಕ್ಷೆಯನ್ನು ಹೊಂದಿದ್ದವು. ಆದರೆ ಕೆಲವೇ ಕೆಲವು ಷೇರುಗಳು ಹೂಡಿಕೆದಾರರಿಗೆ ತುಸು ನೆಮ್ಮದಿಯನ್ನು ಉಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ