ಆ್ಯಪ್ನಗರ

ಶೀಘ್ರವೇ ಎಸ್‌ಬಿಐ ಎಟಿಎಂನಲ್ಲಿ 20, 50 ರೂ.ನೋಟುಗಳೂ ಲಭ್ಯ

ಗರಿಷ್ಠ ಬೆಲೆಯ ನೋಟುಗಳ ನಿಷೇಧದಿಂದ ದೇಶದೆಲ್ಲೆಡೆ ಚಿಲ್ಲರೆ ಕಾಸಿಗಾಗಿ ಜನರು ಪರದಾಡುವಂತಾಗಿದ್ದು, ಜನ ಸಾಮಾನ್ಯರ ಈ ಸಮಸ್ಯೆ ನೀಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 50 ರೂ. ಹಾಗೂ 20 ರೂ.ಮುಖಬೆಲೆಯ ನೋಟುಗಳನ್ನು ಎಟಿಎಂಗಳ ಮೂಲಕ ವಿತರಿಸಲಿದೆ.

ಏಜೆನ್ಸೀಸ್ 15 Nov 2016, 10:45 am
ಹೊಸದಿಲ್ಲಿ: ಗರಿಷ್ಠ ಬೆಲೆಯ ನೋಟುಗಳ ನಿಷೇಧದಿಂದ ದೇಶದೆಲ್ಲೆಡೆ ಚಿಲ್ಲರೆ ಕಾಸಿಗಾಗಿ ಜನರು ಪರದಾಡುವಂತಾಗಿದ್ದು, ಜನ ಸಾಮಾನ್ಯರ ಈ ಸಮಸ್ಯೆ ನೀಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 50 ರೂ. ಹಾಗೂ 20 ರೂ.ಮುಖಬೆಲೆಯ ನೋಟುಗಳನ್ನು ಎಟಿಎಂಗಳ ಮೂಲಕ ವಿತರಿಸಲಿದೆ.
Vijaya Karnataka Web state bank atms to soon start dispensing rs 50 rs 20 notes sbi chairperson
ಶೀಘ್ರವೇ ಎಸ್‌ಬಿಐ ಎಟಿಎಂನಲ್ಲಿ 20, 50 ರೂ.ನೋಟುಗಳೂ ಲಭ್ಯ


'ಎಟಿಎಂ ಹಾಗೂ ಬ್ಯಾಂಕ್ ಮುಂದೆ ತುಸು ಜನಸಂದಣೆ ಕಡಿಮೆಯಾದ ಕೂಡಲೇ ಕಡಿಮೆ ಮುಖಬೆಲೆಯ ನೋಟುಗಳೂ ಎಟಿಎಂಗಳಲ್ಲಿ ಸಿಗುವಂತೆ ಮಾಡುವ ವ್ಯವಸ್ಥೆ ಮಾಡಲಾಗುವುದು,' ಎಂದು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಚಾರ್ಯ ಘೋಷಿಸಿದ್ದಾರೆ.

ಕಪ್ಪು ಹಣ ಹಾಗೂ ಭ್ರಷ್ಟಚಾರ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನ.8ರಂದು 500 ರೂ. ಹಾಗೂ 1000 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸುವುದಾಗಿ ದಿಢೀರ್ ಘೋಷಿಸಿದ ನಂತರ ಚಿಲ್ಲರೆ ಕಾಸಿಗಾಗಿ ಪರದಾಡುತ್ತಿರುವ ಸಾಮಾನ್ಯ ಜನತೆಗೆ ಎಸ್‌ಬಿಐಯ ಈ ಘೋಷಣೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಳೆದೈದು ದಿನಗಳಲ್ಲಿ ಎಸ್‌ಬಿಐ ಇದುವರೆಗೆ 83,702 ಕೋಟಿ ರೂ. ಸಂಗ್ರಹಿಸಿದ್ದು, 4,146 ಕೋಟಿ ರೂ. ನೋಟುಗಳನ್ನು ಬದಲಾಯಿಸಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ