ಆ್ಯಪ್ನಗರ

ಲೋಕಸಭೆ ಫಲಿತಾಂಶ: ಷೇರುಪೇಟೆ ಚೇತರಿಕೆ

ಲೋಕಸಭೆ ಎಕ್ಸಿಟ್ ಪೋಲ್ ಪ್ರಕಟದ ಬಳಿಕವೂ ಎನ್‌ಡಿಎ ಬಹುಮತ ಪಡೆಯಲಿದೆ ಎನ್ನುವ ಅಂಶ ಷೇರುಪೇಟೆ ದಾಖಲೆ ಏರಿಕೆಗೆ ಕಾರಣವಾಗಿತ್ತು.

Vijaya Karnataka Web 23 May 2019, 9:44 am
ಗುರುವಾರ ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಒಟ್ಟಾರೆ ದೇಶವೇ ಕಾತರದಿಂದಿದೆ.
Vijaya Karnataka Web Stock


ಆರಂಭಿಕ ಹಂತದ ಟ್ರೆಂಡ್ ಪ್ರಕಾರ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದ್ದು, ಷೇರುಪೇಟೆಯ ಮೇಲೂ ಸಕಾರಾತ್ಮಕ ಪ್ರಭಾವ ಬೀರಿದೆ.

ಗುರುವಾರದ ಬೆಳಗಿನ ವಹಿವಾಟಿನ ಆರಂಭದಿಂದಲೇ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನಿಫ್ಟಿ ಮುನ್ನಡೆ ಕಾಯ್ದುಕೊಂಡಿದೆ.

ಬಿಎಸ್‌ಇ 783.57 ಅಂಶಗಳ ಮುನ್ನಡೆಯೊಂದಿಗೆ 39,893.78 ತಲುಪಿದ್ದರೆ, ನಿಫ್ಟಿ 206.90 ಅಂಶಗಳ ದಾಖಲಿಸಿದ್ದು, 11,944.80ಕ್ಕೆ ತಲುಪಿದೆ.

ಆರಂಭಿಕ ಏರುಗತಿಯ ಮುನ್ನಡೆ ದಿನದ ಅಂತ್ಯದವರೆಗೂ ಇರುವ ನಿರೀಕ್ಷೆಯಿದ್ದು, ಹೂಡಿಕೆದಾರರು ಬಂಪರ್ ಗಳಿಕೆಯ ನಿರೀಕ್ಷೆಯಲ್ಲಿದ್ದಾರೆ.

ಲೋಕಸಭೆ ಎಕ್ಸಿಟ್ ಪೋಲ್ ಪ್ರಕಟದ ಬಳಿಕವೂ ಎನ್‌ಡಿಎ ಬಹುಮತ ಪಡೆಯಲಿದೆ ಎನ್ನುವ ಅಂಶ ಷೇರುಪೇಟೆ ದಾಖಲೆ ಏರಿಕೆಗೆ ಕಾರಣವಾಗಿತ್ತು.

ಲೈವ್: ತಾಜಾ ಚಿತ್ರಣ: ಬಿಜೆಪಿ 133, ಕಾಂಗ್ರೆಸ್‌ 41 ಕ್ಷೇತ್ರಗಳಲ್ಲಿ ಮುನ್ನಡೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ