ಆ್ಯಪ್ನಗರ

ಚೇತರಿಕೆ ಕಂಡ ಷೇರು ಮಾರುಕಟ್ಟೆ: ಶೇ.7.3ಏರಿಕೆ ಕಂಡ ಸೆನ್ಸೆಕ್ಸ್‌

ಮಂಗಳವಾರದ ವಹಿವಾಟಿಲ್ಲಿ ಷೇರುಪೇಟೆ ಕೊಂಚ ಚೇತರಿಸಿಕೊಂಡಿದೆ. ಸೆನ್ಸೆಕ್ಸ್‌ 2476 ಪಾಯಿಂಟ್ಸ್‌ ಏರಿಕೆ ಕಂಡಿದ್ದರೆ, ನಿಫ್ಟಿ 569 ಪಾಯಿಂಟ್ಸ್‌ ಏರಿಕೆ ಕಂಡಿದೆ. ಸೆನ್ಸೆಕ್ಸ್‌ 29,605ರಷ್ಟಿದ್ದು, ಶೇ. 7.3ರಷ್ಟು ಏರಿಕೆ ಕಂಡಿತ್ತು. ರಾಷ್ಟ್ರೀಯ ಸಂವೇದಿ ಸೂಚ್ಯಂಕವು (ನಿಫ್ಟಿ) 8,652ರಷ್ಟಿದೆ.

THE ECONOMIC TIMES 7 Apr 2020, 4:28 pm
ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕಿನಿಂದಾಗಿ ಲಾಕ್‌ಡೌನ್‌ ಘೋಷಣೆ ಮಾಡಿದಾಗಿನಿಂದ ಷೇರುಪೇಟೆ ದಿನೇದಿನೇ ನೆಲಕಚ್ಚಿತ್ತು. ಸದ್ದಿಲ್ಲದೆ ಮಲಗಿದ್ದ ಗೂಳಿ, ಮಂಗಳವಾರದ ವಹಿವಾಟಿಲ್ಲಿ ಕೊಂಚ ಚೇತರಿಸಿಕೊಂಡು ಗುಟುರು ಹಾಕಿದೆ. ಸೆನ್ಸೆಕ್ಸ್‌ 2476 ಪಾಯಿಂಟ್ಸ್‌ ಏರಿಕೆ ಕಂಡಿದ್ದರೆ, ನಿಫ್ಟಿ 569 ಪಾಯಿಂಟ್ಸ್‌ ಏರಿಕೆ ಕಂಡಿದೆ.
Vijaya Karnataka Web stock market has seen recovery after lockdown sensex gains 7 3 in early trade
ಚೇತರಿಕೆ ಕಂಡ ಷೇರು ಮಾರುಕಟ್ಟೆ: ಶೇ.7.3ಏರಿಕೆ ಕಂಡ ಸೆನ್ಸೆಕ್ಸ್‌


ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್‌), ಮಂಗಳವಾರ 29,605ರಷ್ಟಿದ್ದು, ಶೇ. 7.3ರಷ್ಟು ಏರಿಕೆ ಕಂಡಿತ್ತು. ರಾಷ್ಟ್ರೀಯ ಸಂವೇದಿ ಸೂಚ್ಯಂಕವು (ನಿಫ್ಟಿ) 8,652ರಷ್ಟಿದೆ.

ಲಾಕ್‌ಡೌನ್‌ ಘೋಷಣೆ ಬೆನ್ನಲ್ಲೇ ಭಾರೀ ನಷ್ಟ ಅನುಭವಿಸಿದ್ದ ಹೂಡಿಕೆದಾರರು, ಇದೀಗ ಕೊಂಚ ಸುಧಾರಿಸಿಕೊಂಡಿದ್ದಾರೆ. ಮಂಗಳವಾರ ಹೂಡಿಕೆದಾರರಿಗೆ 6.63 ಲಕ್ಷ ಕೋಟಿ ರೂಪಾಯಿಯಷ್ಟು ಲಾಭ ಗಳಿಸಿದ್ದಾರೆ.

ಷೇರುಪೇಟೆ ಮೇಲೆ ಕೊರೊನಾ ಎಫೆಕ್ಟ್‌ ಕಂಟಿನ್ಯೂ, ಪಾತಾಳಕ್ಕೆ ಸೆನ್ಸೆಕ್ಸ್‌-ನಿಫ್ಟಿ, ಯೆಸ್‌ ಬ್ಯಾಂಕ್‌ಗೆ ಬಂಪರ್‌

ಕಳೆದ ಎರಡು ವಾರಗಳಿಂದ ನಿರಂತರ ಕುಸಿತದ ಹಾದಿಯಲ್ಲಿದ್ದ ಷೇರು ಸೂಚ್ಯಂಕಗಳು ಇಂದು ಮತ್ತೆ ಪಾತಾಳಕ್ಕೆ ಇಳಿದಿತ್ತು. ಕೊರೊನಾ ವೈರಸ್‌ ಭೀತಿಯಿಂದ ಸದ್ಯಕ್ಕೆ ಷೇರುಪೇಟೆ ಚೇತರಿಸಿಕೊಳ್ಳುವ ಯಾವ ಸಾಧ್ಯತೆಯೂ ಸದ್ಯಕ್ಕೆ ಕಾಣುತ್ತಿಲ್ಲ ಎನ್ನಲಾಗಿತ್ತು. ಆದರೆ, ಮಂಗಳವಾರ ವಹಿವಾಟಿನಲ್ಲಿ ಕೊಂಚ ಏರಿಕೆ ಕಂಡಿದೆ.


ಬ್ಯಾಂಕ್ ಆದಾಯ ಖೋತಾ: ಹಣ ಕಟ್ಟುವವರೇ ಇಲ್ಲ, ವಿತ್‌ ಡ್ರಾ ಹೆಚ್ಚು!

ದೇಶೀಯ ಹೂಡಿಕೆದಾರರಿಗೂ ಷೇರುಪೇಟೆ ಧನಾತ್ಮಕವಾಗಿದೆ. ದೇಶಿಯ ಹೂಡಿಕೆದಾರರು ಸುಮಾರು 1.3 ಮಿಲಿಯನ್‌ ಡಾಲರ್‌ (9,900 ಕೋಟಿ ರೂಪಾಯಿ) ಬಂಡವಾಳ ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. ಫಾರಿನ್‌ ಪೋರ್ಟ್‌ಫೋಲಿಯೋ ಇನ್ವೆಸ್ಟ್‌ಮೆಂಟ್ ಮಿತಿಯನ್ನು ಹೆಚ್ಚಿಸಿದ ನಂತರ ಬಂಡವಾಳದ ಹರಿವು ಕೂಡ ಹೆಚ್ಚಾಗಿದೆ.


ಔಷಧ ರಫ್ತು ನಿಷೇಧ ತೆರವುಗೊಳಿಸಿದ ಭಾರತ
ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಎಲ್ಲ ರಫ್ತುಗಳ ಮೇಲೆ ನಿಷೇಧ ಹೇರಲಾಗಿತ್ತು. ಇದೀಗ 24 ಬಗೆಯ ಔಷಧಗಳ ಮೇಲಿನ ರಫ್ತು ನಿರ್ಭಂಧವನ್ನು ತೆರವುಗೊಳಿಸಲಾಗಿದೆ. ಆದರೆ, ಪ್ಯಾರಸಿಟಮಾಲ್‌ ಔಷಧ ರಫ್ತಿನ ಮೇಲಿನ ನಿಷೇಧ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ