ಆ್ಯಪ್ನಗರ

ಇಎಂಐ ಮುಂದೂಡಿಕೆ ಅವಧಿಗೆ ಬಡ್ಡಿ ಏಕೆ? ಆರ್‌ಬಿಐಗೆ ಸುಪ್ರೀಂ ತರಾಟೆ!

ಸಾಲ ಮರು ಪಾವತಿಯ ಅವಧಿಯನ್ನು ಆಗಸ್ಟ್‌ 31ರ ತನಕ ಮುಂದೂಡಲು ಅವಕಾಶ ಮಾಡಿರುವ ಆರ್‌ಬಿಐ, ಇದೇ ಅವಧಿಯಲ್ಲಿ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

Vijaya Karnataka Web 5 Jun 2020, 4:49 pm
ಹೊಸದಿಲ್ಲಿ: ಸಾಲ ಮರು ಪಾವತಿಯ ಅವಧಿಯನ್ನು ಆಗಸ್ಟ್‌ 31ರ ತನಕ ಮುಂದೂಡಲು ಅವಕಾಶ ಮಾಡಿರುವ ಆರ್‌ಬಿಐ, ಇದೇ ಅವಧಿಯಲ್ಲಿ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web supeme court


ಸುಪ್ರಿಂಕೋರ್ಟ್‌ನ ಮೂವರು ಸದಸ್ಯರ ಪೀಠವು, '' ಒಂದು ಕಡೆ ನೀವು ಸಾಲ ಮರು ಪಾವತಿಗೆ ಅವಧಿಯನ್ನು ಮುಂದೂಡಿಕೆ ಮಾಡಿದ್ದೀರಿ. ಮತ್ತೊಂದು ಕಡೆ ಬಡ್ಡಿ ಸಂಗ್ರಹವನ್ನು ಮುಂದುವರಿಸಿದ್ದೀರಿ. ಇದು ಮತ್ತಷ್ಟು ಹಾನಿಕಾರಕ ನಿರ್ಧಾರ'' ಎಂದು ಆರ್‌ಬಿಐ ಅನ್ನು ಗುರುವಾರ ತರಾಟೆಗೆ ತೆಗೆದುಕೊಂಡಿತು.

ಆರ್‌ಬಿಐ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಾಲದ ಇಎಂಐ ಕಟ್ಟಲು ಅವಧಿಯನ್ನು ಮಾರ್ಚ್ನಿಂದ ಆಗಸ್ಟ್‌ 31ರ ತನಕ ಮುಂದೂಡಿತ್ತು. ಆದರೆ ಇದೇ ಅವಧಿಯಲ್ಲಿ ಬಡ್ಡಿ ವಸೂಲಿ ಮಾಡಲು ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಿತ್ತು. ಇದು ಅನಿವಾರ್ಯ ಎಂದೂ ಆರ್‌ಬಿಐ ಸುಪ್ರಿಂಕೋರ್ಟ್‌ಗೆ ತನ್ನ ವಿವರಣೆ ನೀಡಿತ್ತು.

ಎಸ್‌ಬಿಐ ಲಾಭದಲ್ಲಿ ನಾಲ್ಕು ಪಟ್ಟು ಹೆಚ್ಚಳ: ಮಾರ್ಚ್‌ ತ್ರೈಮಾಸಿಕದಲ್ಲಿ ₹3,581 ಕೋಟಿ ನಿವ್ವಳ ಲಾಭ!

ಸುಪ್ರಿಂಕೋರ್ಟ್‌ ಜೂನ್‌ 12ಕ್ಕೆ ವಿಚಾರಣೆ ಮುಂದೂಡಿದ್ದು, ಸರಕಾರ ಮತ್ತು ಆರ್‌ಬಿಐ ಜಂಟಿಯಾಗಿ ವಿವರಣೆ ನೀಡಬೇಕು ಎಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ