ಆ್ಯಪ್ನಗರ

ಜಿಯೋ ಮಾರ್ಟ್‌ಗೆ ಸಡ್ಡು, 9,600 ಕೋಟಿ ರೂ.ಗೆ ಬಿಗ್‌ಬಾಸ್ಕೆಟ್‌ ಖರೀದಿಯತ್ತ ಟಾಟಾ ಗ್ರೂಪ್‌

ಆನ್‌ಲೈನ್‌ ದಿನಸಿ ಮಾರಾಟ ಕ್ಷೇತ್ರದಲ್ಲಿರುವ ಅವಕಾಶ ಬಾಚಿಕೊಳ್ಳಲು ಅಮೆಜಾನ್‌, ಮುಕೇಶ್‌ ಅಂಬಾನಿ ಒಡೆತನದ ಜಿಯೋ ಮಾರ್ಟ್‌, ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಪೈಪೋಟಿಗೆ ಬಿದ್ದಿವೆ. ಇದೀಗ ಇದೇ ಸ್ಪರ್ಧೆಗೆ ಬಿಗ್‌ ಬಾಸ್ಕೆಟ್‌ ಖರೀದಿಯೊಂದಿಗೆ ಟಾಟಾ ಗ್ರೂಪ್‌ ಕೂಡ ಎಂಟ್ರಿಯಾಗುತ್ತಿದೆ.

THE ECONOMIC TIMES 2 Dec 2020, 7:50 pm
ಬೆಂಗಳೂರು: ಆನ್‌ಲೈನ್‌ ಮೂಲಕ ದಿನಸಿ ವಸ್ತುಗಳನ್ನು ಮಾರಾಟ ಮಾಡುವ ಬಿಗ್‌ಬಾಸ್ಕೆಟ್‌ ಖರೀದಿಗೆ ಟಾಟಾ ಗ್ರೂಪ್‌ ನಿರ್ಧರಿಸಿದ್ದು, ಮಾತುಕತೆಗಳು ಅಂತಿಮ ಹಂತದಲ್ಲಿವೆ.
Vijaya Karnataka Web bigbasket


ಬಿಗ್‌ಬಾಸ್ಕೆಟ್‌ನ ಮೌಲ್ಯ 11,800 ಕೋಟಿ ರೂ. (1.6 ಬಿಲಿಯನ್‌ ಡಾಲರ್‌) ಎಂದು ಅಂದಾಜು ಮಾಡಲಾಗಿದ್ದು, ಇದೀಗ ಕಂಪನಿಯ ಶೇ. 80ರಷ್ಟು ಷೇರುಗಳನ್ನು ಟಾಟಾ ಗ್ರೂಪ್‌ ಖರೀದಿಸಲು ಮುಂದಾಗಿದೆ.

ಬಿಗ್‌ಬಾಸ್ಕೆಟ್‌ನ ಮೂಲ ಕಂಪನಿ 'ಇನ್ನೋವೇಟಿವ್‌ ರಿಟೇಲ್‌ ಕಾನ್ಸೆಪ್ಟ್ಸ್‌ ಪ್ರೈವೇಟ್‌'ನ ಎಷ್ಟು ಪ್ರಮಾಣದ ಷೇರುಗಳನ್ನು ಖರೀದಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ‘ಮಿಂಟ್‌’ ವರದಿ ಪ್ರಕಾರ ಬಿಗ್‌ಬಾಸ್ಕೆಟ್‌ನ ಶೇ.80ರಷ್ಟು ಷೇರುಗಳನ್ನು ಟಾಟಾ ಗ್ರೂಪ್‌ ಸುಮಾರು 9,600 ಕೋಟಿ ರೂಪಾಯಿಗೆ ಖರೀದಿಸಲಿದೆ.

ಉಪ್ಪಿನಿಂದ ಉಕ್ಕಿನವರೆಗಿನ ಸಾಮ್ರಾಜ್ಯವನ್ನು ಹೊಂದಿರುವ ಟಾಟಾ ಗ್ರೂಪ್‌ ಆನ್‌ಲೈನ್‌ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಭಾರತದಲ್ಲಿ ಇ-ಕಾಮರ್ಸ್‌ ಮಾರುಕಟ್ಟೆಯಲ್ಲಿ ಇತ್ತೀಚೆಗೆ ತೀವ್ರ ಸ್ಪರ್ಧೆ ಕಂಡು ಬಂದಿದ್ದು, ಇದೇ ಅಖಾಡದಲ್ಲಿ ತನ್ನ ಪ್ರಭಾವ ಬೀರಲು ಟಾಟಾ ಗ್ರೂಪ್‌ ಕೂಡ ಮುಂದಾಗಿದೆ. ಇದೇ ನಿಟ್ಟಿನಲ್ಲಿ ಬಿಗ್‌ಬಾಸ್ಕೆಟ್‌ ಖರೀದಿಯೂ ನಡೆಯುತ್ತಿದೆ.

ಟಾಟಾ ಗ್ರೂಪ್‌ ತೆಕ್ಕೆಗೆ ಬಿಗ್‌ಬಾಸ್ಕೆಟ್‌? 7,000 ಕೋಟಿ ರೂ. ಹೂಡಿಕೆ?
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆನ್‌ಲೈನ್‌ ದಿನಸಿ ಮಾರಾಟ ಭಾರತದಲ್ಲಿ ವೇಗವಾಗಿ ಮೇಲೇರಿದೆ. ಆದರೆ ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅವಕಾಶಗಳಿರುವುದರಿಂದ ಇದನ್ನು ಬಾಚಿಕೊಳ್ಳಲು ಪ್ರಬಲ ಕಂಪನಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಅಮೆಜಾನ್‌, ಮುಕೇಶ್‌ ಅಂಬಾನಿ ಒಡೆತನದ ಜಿಯೋ ಮಾರ್ಟ್‌, ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಇದರಲ್ಲಿ ಪ್ರಮುಖವಾದವು. ಬಿಗ್‌ ಬಾಸ್ಕೆಟ್‌ ಖರೀದಿಯೊಂದಿಗೆ ತಾನೂ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಟಾಟಾ ಗ್ರೂಪ್‌ ಮುಂದಾಗಿದೆ.

ಚೀನಾದ ಅಲಿಬಾಬ ಬಿಗ್‌ಬಾಸ್ಕೆಟ್‌ನಲ್ಲಿ ಷೇರು ಹೊಂದಿದ್ದು, ತನ್ನೆಲ್ಲಾ ಷೇರುಗಳನ್ನು ವಾಪಸ್‌ ಪಡೆಯಲು ಕಂಪನಿ ಮುಂದಾಗಿದೆ. ಈ ಷೇರುಗಳನ್ನೆಲ್ಲಾ ಟಾಟಾ ಗ್ರೂಪ್‌ ಖರೀದಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ