ಆ್ಯಪ್ನಗರ

ದೇಶದ ಮೊದಲ 100 ಬಿಲಿಯನ್ ಡಾಲರ್ ಕಂಪೆನಿಯಾಗಿ ಟಿಸಿಎಸ್

ದೇಶದ ಐಟಿ ದಿಗ್ಗಜ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಹೊಸ ಇತಿಹಾಸ ಸೃಷ್ಟಿಸಿದೆ. ದೇಶದ ಮೊಟ್ಟ ಮೊದಲ 100 ಬಿಲಿಯನ್ ಡಾಲರ್ (6,60,000 ಕೋಟಿ ರೂ.) ಕಂಪೆನಿಯಾಗಿ ಹೊರಹೊಮ್ಮಿದೆ ಟಿಸಿಎಸ್.

THE ECONOMIC TIMES 23 Apr 2018, 12:58 pm
ಹೊಸದಿಲ್ಲಿ: ದೇಶದ ಐಟಿ ದಿಗ್ಗಜ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಹೊಸ ಇತಿಹಾಸ ಸೃಷ್ಟಿಸಿದೆ. ದೇಶದ ಮೊಟ್ಟ ಮೊದಲ 100 ಬಿಲಿಯನ್ ಡಾಲರ್ (6,60,000 ಕೋಟಿ ರೂ.) ಕಂಪೆನಿಯಾಗಿ ಹೊರಹೊಮ್ಮಿದೆ ಟಿಸಿಎಸ್. ಈ ಮೂಲಕ ಸೋಮವಾರದ ಬೆಳಗ್ಗೆ 9.49 ಗಂಟೆಗಳ ಸಮಯದಲ್ಲಿ ಕಂಪೆನಿ ಮಾರುಕಟ್ಟೆ ಮೌಲ್ಯ 6,62,726.36 ಕೋಟಿ ರೂ.ಗೆ ತಲುಪಿತು.

ಈ ಬಗ್ಗೆ ಟಾಟಾ ಗ್ರೂಪ್ ಮುಖ್ಯಸ್ಥ ಎನ್ ಚಂದ್ರಶೇಖರನ್ ಸಂತಸ ವ್ಯಕ್ತಪಡಿಸಿದರು. 'ಇದು ವಿಶೇಷ ಕ್ಷಣ. ಇದಕ್ಕಾಗಿ ನಾವು ಎದುರುನೋಡುತ್ತಿದ್ದೆವು' ಎಂದಿದ್ದಾರೆ. ಮುಂದಿನ ತಿಂಗಳುಗಳಲ್ಲಿ, ತ್ರೈಮಾಸಿಕಗಳಲ್ಲಿ ಟಿಸಿಎಸ್ ಇನ್ನಷ್ಟು ಬೆಳವಣಿಗೆ ಹೊಂದಲಿದೆ ಎಂದು ಪಾಲುದಾರರನ್ನುದ್ದೇಶಿಸಿ ಹೇಳಿದರು.

ಟಿಸಿಎಸ್ 50 ವರ್ಷಗಳ ಹಿಂದೆ ಆರಂಭವಾಯಿತು. ಇತ್ತೀಚೆಗೆ ಈ ಕಂಪೆನಿ ಕಳೆದ ಹಣಕಾಸು ವರ್ಷ ಜನವರಿ-ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತು. ಈ ಫಲಿತಾಂಶಗಳು ಆಶಾಜನಕವಾಗಿದ್ದ ಕಾರಣ ಶುಕ್ರವಾರದ ಷೇರುಮಾರುಕಟ್ಟೆಯಲ್ಲಿ ಕಂಪೆನಿ ಮೌಲ್ಯ ಒಮ್ಮೆಲೆ ಏರಿಕೆಯಾಯಿತು. ಆ ಒಂದು ದಿನದಲ್ಲೇ ಮಾರುಕಟ್ಟೆ ಮೌಲ್ಯ 40 ಸಾವಿರ ಕೋಟಿ ರೂ. ಹೆಚ್ಚಳವಾಯಿತು. ಹಾಗಾಗಿ 100 ಬಿಲಿಯನ್ ಡಾಲರ್ ಮೈಲುಗಲ್ಲು ತಲುಪಲು ಇನ್ನಷ್ಟು ಸಮೀಪಕ್ಕೆ ಬಂದ ಟಿಸಿಎಸ್, ಇಂದು ಆ ಘನತೆಯನ್ನು ದಕ್ಕಿಸಿಕೊಂಡಿದೆ.

ದೇಶದಲ್ಲಿ ಈ ಮೈಲಿಗಲ್ಲು ಸಾಧಿಸಿದ ಮೊದಲ ಕಂಪೆನಿ ಎನ್ನಿಸಿಕೊಂಡಿರುವುದು ವಿಶೇಷ. ಈ ಮೈಲುಗಲ್ಲು ತಲುಪುವುದು ಇತರೆ ದೇಶೀಯ ಐಟಿ ಕಂಪೆನಿಗಳಿಗೆ ಈಗ ಗಗನಕುಸುಮ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಯಾಕೆಂದರೆ ಟಿಸಿಎಸ್‌ಗೆ ಪ್ರಮುಖ ಸ್ಪರ್ಧಿಯಾಗಿರುವ ಇನ್ಫೋಸಿಸ್ ಮಾರುಕಟ್ಟೆ ಮೌಲ್ಯ ಸುಮಾರು 38 ಬಿಲಿಯನ್ ಡಾಲರ್‌ಗಳಷ್ಟಿದೆ. ಹಾಗಾಗಿ ಈಗ ಯಾವ ಕಂಪನಿಯೂ ಆ ಘನತೆ ಸಾಧಿಸುವ ಲಕ್ಷಣಗಳು ಕಾಣುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ