ಆ್ಯಪ್ನಗರ

ಎಟಿಎಂನಿಂದ ಹಣ ತೆಗೆಯಲು ಬರಲಿದೆ ಕಾಲಮಿತಿ; ಒಮ್ಮೆ ಹಣ ತೆಗೆದರೆ ಮತ್ತೆ ಕಾಯಬೇಕು 6-12 ಗಂಟೆ!

2018-19ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 179 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 233 ಪ್ರಕರಣಗಳು ದಾಖಲಾಗಿವೆ. 2018-19ರಲ್ಲಿ ಒಟ್ಟು 980 ಎಂಟಿಎಂ ವಂಚನೆಗಳು ದಾಖಲಾಗಿವೆ. ಕಳೆದ ಸಾಲಿನಲ್ಲಿ ಇದು 911 ಆಗಿತ್ತು.

Vijaya Karnataka Web 27 Aug 2019, 4:00 pm
ಹೊಸದಿಲ್ಲಿ: ಎಟಿಎಂಗಳಲ್ಲಿ ಭಾರಿ ಅಕ್ರಮ ಹಾಗೂ ಕಳ್ಳತನಗಳು ಸಂಭವಿಸುವುದನ್ನು ತಡೆಗಟ್ಟಲು ಹೊಸ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
Vijaya Karnataka Web ಎಟಿಎಂ
ಎಟಿಎಂ


ದಿಲ್ಲಿ ಸ್ಟೇಟ್‌ ಲೆವೆಲ್‌ ಬ್ಯಾಂಕರ್ಸ್‌ ಕಮಿಟಿ ಈ ಕುರಿತು ಕೆಲವು ಸಲಹೆ, ಸೂಚನೆ, ಶಿಫಾರಸುಗಳನ್ನು ನೀಡಿದೆ.

ಎಟಿಎಂನಲ್ಲಿ ಬಹುತೇಕ ಅಕ್ರಮಗಳು ನಡೆಯುವುದು ಮಧ್ಯರಾತ್ರಿಯಲ್ಲಿ. ಅದರು ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ. ಹೀಗಾಗಿ ಎಟಿಎಂನಲ್ಲಿ ಹಣ ಪಡೆಯುವುದಕ್ಕೆ ಕಾಲಮಿತಿ ನಿಗದಿಪಡಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

6 ರಿಂದ 12 ಗಂಟೆಗಳ ಕಾಲಮಿತಿ ವಿಧಿಸುವ ಸಾಧ್ಯತೆ ಇದೆ. ಇದು ಜಾರಿಗೆ ಬಂದರೆ ನಿಗದಿತ ಕಾಲಮಿತಿಯೊಳಗೆ ಹಣ ಪಡೆಯಲು ಸಾಧ್ಯವಿಲ್ಲ. ಅಂದರೆ ಒಮ್ಮೆ ಎಟಿಎಂನಲ್ಲಿ ಹಣ ಪಡೆದುಕೊಂಡ ನಂತರ ಮತ್ತೊಮ್ಮೆ ಹಣ ಪಡೆಯಲು ಕೆಲ ಸಮಯ ಕಾಯಬೇಕಾಗುತ್ತದೆ.

ಈ ಕುರಿತು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮುಕೇಶ್‌ ಕುಮಾರ್‌ ಜೈನ್‌ ಮಾಹಿತಿ ನೀಡಿದ್ದಾರೆ.

18 ಬ್ಯಾಂಕ್‌ಗಳ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಇತ್ತೀಚಿನ ದಿನಗಳಲ್ಲಿ ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.

ಪ್ರತಿ ಬಾರಿ ಎಟಿಎಂನಿಂದ ಹಣ ಪಡೆಯುವಾಗಲೂ ಒನ್‌ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಎಂಟ್ರಿ ಮಾಡಲು ಗ್ರಾಹಕರಿಗೆ ಸೂಚಿಸುವುದು ಸೂಕ್ತ ಎನಿಸುತ್ತದೆ ಎಂದು ಬ್ಯಾಂಕ್‌ ಪ್ರತಿನಿಧಿಗಳ ಸಭೆಯಲ್ಲಿ ಮತ್ತೊಂದು ಸಲಹೆ ನೀಡಲಾಯಿತು.

ಎಟಿಎಂಗಳ ಒಳಗೆ ಹೆಲ್ಮೆಟ್‌ ಧರಿಸಿ ಗ್ರಾಹಕರು ತೆರಳಿದರೆ, ಕೂಡಲೇ ಹೆಲ್ಮೆಟ್‌ ತೆಗೆಯುವ ಸೂಚನೆ ಬರುತ್ತದೆ. ಓರಿಯಂಟಲ್‌ ಬ್ಯಾಂಕ್‌ನ 300ಕ್ಕೂ ಹೆಚ್ಚು ಎಟಿಎಂಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ