ಆ್ಯಪ್ನಗರ

ಭಾರತ ಬಂದ್: ದಿನಕ್ಕೆ 18 ಸಾವಿರ ಕೋಟಿ ನಷ್ಟ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆ ಇಂದು ಭಾರತ ಬಂದ್‌ಗೆ ಕರೆ ನೀಡಿದ್ದು, ಪ್ರಮುಖ ಉತ್ಪಾದನಾ ಘಟಕಗಳು ಹಾಗೂ ಬ್ಯಾಂಕ್ ಸೇವೆಗಳು ಸ್ಥಗಿತಗೊಂಡಿದ್ದವು.

ಏಜೆನ್ಸೀಸ್ 2 Sep 2016, 7:38 pm
ಲಖನೌ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆ ಇಂದು ಭಾರತ ಬಂದ್‌ಗೆ ಕರೆ ನೀಡಿದ್ದು, ಪ್ರಮುಖ ಉತ್ಪಾದನಾ ಘಟಕಗಳು ಹಾಗೂ ಬ್ಯಾಂಕ್ ಸೇವೆಗಳು ಸ್ಥಗಿತಗೊಂಡಿದ್ದವು. ಇದರಿಂದ ದಿನವೊಂದರಲ್ಲಿಯೇ ಆದ ನಷ್ಟವನ್ನು 16 ಸಾವಿರದಿಂದ 18 ಸಾವಿರ ಕೋಟಿ ಎಂದು ಅಸೋಚಾಮ್ ಲೆಕ್ಕ ಹಾಕಿದೆ.
Vijaya Karnataka Web trade unions strike may cause losses of rs 18000 crore hit exports assocham
ಭಾರತ ಬಂದ್: ದಿನಕ್ಕೆ 18 ಸಾವಿರ ಕೋಟಿ ನಷ್ಟ


ವಿವಿಧ ಸೇವಾ ವಲಯ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು, ಒಟ್ಟು ದೇಶೀಯ ಉತ್ಪನ್ನ ಪ್ರಗತಿಯೆಡೆಗೆ ಗಮನ ಹರಿಸಬೇಕಾಗಿದೆ. ಈ ರೀತಿಯ ಬಂದ್ ಹಾಗೂ ಪರಿಸ್ಥಿತಿಯನ್ನು ಹದಗೆಡಿಸುವಂತೆ ಮಾಡುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು, ಎಂದು ಅಸೋಚಾಮ್ (The Associated Chambers of Commerce and Industry) ಅಭಿಪ್ರಾಯ ವ್ಯಕ್ತಪಡಿಸಿದೆ.

ಬಂದ್ ವೇಳೆ ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಸಾರಿಗೆ ಸೇವೆಗಳನ್ನು ನಿಲ್ಲಿಸುವುದರಿಂದ ಪ್ರಗತಿ ಕುಂಠಿತವಾಗುತ್ತದೆ, ಎಂದು ವರದಿಯಲ್ಲಿ ಸಂಘಟನೆಯಲ್ಲಿ ಹೇಳಿದೆ.

'ವ್ಯಾಪಾರ, ಸಾರಿಗೆ ಹಾಗೂ ಹೊಟೇಲ್ ಉದ್ಯಮಗಳು ರಾಷ್ಟ್ರದ ಜಿಡಿಪಿ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಬ್ಯಾಂಕಿಂಗ್‌ನಂಥ ವಿತ್ತೀಯ ಸೇವೆ ನೀಡುವಂಥ ಕ್ಷೇತ್ರಗಳಿಂದ ಜಿಡಿಪಿ ಹಾಗೂ ಜಿವಿಎ (ನಿವ್ವಳ ಮೌಲ್ಯ) ಪ್ರಗತಿ ಮೇಲೂ ಪರಿಣಾಮ ಬೀರಲಿದೆ. ಬಂದ್ ಹಾಗೂ ಪ್ರತಿಭಟನೆಗಳಿಂದ ಈ ಸೇವೆಗಳು ಸಂಪೂರ್ಣ ಸ್ಥಿಗತಿಗೊಳ್ಳುವುದರಿಂದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ,' ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದ್ದಾರೆ.

'ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಹಾಗೂ ಬಂದ್‌ಗೆ ಕರೆ ನೀಡುವ ಬದಲು ಸರಕಾರದೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಬೇಕು. ಹಾಗಂಥ ಕಾರ್ಮಿಕರಿಗೆ ಉತ್ತಮ ವೇತನ ಹಾಗೂ ಕಾರ್ಯ ಕ್ಷೇತ್ರ ನೀಡಲು ಸಂಘಟನೆ ಅಡ್ಡಿಗೊಳಿಸುವುದಿಲ್ಲ. ಅವರ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಆರ್ಥಿಕತೆಗೆ ಹೊಡೆತ ಬೀರುವಂತೆ ಆಗಬಾರದು,' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ