ಹೊಸದಿಲ್ಲಿ : ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಸೇವೆ ಒದಗಿಸುವ ಉಬರ್ ಇಂಡಿಯಾದ ಘಟಕವಾದ ಉಬರ್ ಇಂಡಿಯಾ ಸಿಸ್ಟಮ್ಸ್ ಕಂಪನಿಯು 2017-18ರಲ್ಲಿ ತನ್ನ ಆದಾಯವನ್ನು ಶೇ.30ರಷ್ಟು ವೃದ್ಧಿಸಿದೆ. ಕಂಪನಿ 2018ರ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾದ ಆರ್ಥಿಕ ವರ್ಷದಲ್ಲಿ 533 ಕೋಟಿ ರೂ. ಆದಾಯ ಗಳಿಸಿದೆ. 2017-18ರಲ್ಲಿ ಕಂಪನಿ 26.4 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.40 ಏರಿಕೆಯಾಗಿದೆ. ಉಬರ್ ಜಾಗತಿಕ ಮಟ್ಟದಲ್ಲಿ 2017-18ರಲ್ಲಿ ಅತ್ಯುತ್ತಮ ಮಟ್ಟದ ಆದಾಯ ಗಳಿಸಿರಲಿಲ್ಲ. ಕಂಪನಿಯ ಸಿಇಒ ಟ್ರೆವಿಸ್ ಕಾಲ್ನಿಕ್ ಕೂಡ 2017ರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಉಬರ್ ಇಂಡಿಯಾದ ಸಾಧನೆ ಮಹತ್ವ ಪಡೆದಿದೆ.
ಉಬರ್ ಆದಾಯ ಶೇ.30 ಏರಿಕೆ
ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಸೇವೆ ಒದಗಿಸುವ ಉಬರ್ ಇಂಡಿಯಾದ ಘಟಕವಾದ ಉಬರ್ ಇಂಡಿಯಾ ಸಿಸ್ಟಮ್ಸ್ ಕಂಪನಿಯು 2017-18ರಲ್ಲಿ ತನ್ನ ಆದಾಯವನ್ನು ಶೇ.30ರಷ್ಟು ವೃದ್ಧಿಸಿದೆ. ಉಬರ್ ಜಾಗತಿಕ ಮಟ್ಟದಲ್ಲಿ 2017-18ರಲ್ಲಿ ಅತ್ಯುತ್ತಮ ಮಟ್ಟದ ಆದಾಯ ಗಳಿಸಿರಲಿಲ್ಲ.
Vijaya Karnataka 23 Jan 2019, 10:31 am
ಹೈಲೈಟ್ಸ್:
- ಉಬರ್ ಇಂಡಿಯಾ ಸಿಸ್ಟಮ್ಸ್ ಕಂಪನಿ ಆದಾಯ ವೃದ್ಧಿ
- 2018ರ ಮಾರ್ಚ್ ಅಂತ್ಯದ ಆರ್ಥಿಕ ವರ್ಷದಲ್ಲಿ 533 ಕೋಟಿ ರೂ. ಆದಾಯ
- 2017-18ರಲ್ಲಿ ಅತ್ಯುತ್ತಮ ಮಟ್ಟದ ಆದಾಯ ಗಳಿಸಿರಲಿಲ್ಲ