ಭಾರತದ ನಿರುದ್ಯೋಗ ದರವು ನವೆಂಬರ್ನಲ್ಲಿ ಶೇ. 8.0ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ - CMIE) ಅಂಕಿ - ಅಂಶಗಳು ಹೇಳಿವೆ. ಇದು ಕಳೆದ ಮೂರು ತಿಂಗಳಲ್ಲೇ ಅತ್ಯಧಿಕ ಎಂದು ಗುರುವಾರ ಬಿಡುಗಡೆಯಾದ ವರದಿ ತಿಳಿಸಿದೆ. ಹಿಂದಿನ ತಿಂಗಳಲ್ಲಿ ಅಂದರೆ ಅಕ್ಟೋಬರ್ನಲ್ಲಿ ಭಾರತದ ನಿರುದ್ಯೋಗ ದರ ಶೇ. 7.77ರಷ್ಟಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಹೇಳಿದೆ. ಇದೀಗ ನವೆಂಬರ್ ವೇಳೆಗೆ ಮತ್ತಷ್ಟು ಏರಿಕೆ ಕಂಡಿದೆ.
ನಗರದ ನಿರುದ್ಯೋಗ ಪ್ರಮಾಣವು ನವೆಂಬರ್ನಲ್ಲಿ ಶೇ. 8.96ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ನಲ್ಲಿ ಶೇ. 7.21ರಷ್ಟಿದ್ದ ನಿರುದ್ಯೋಗ ದರ ಒಂದೇ ಸಮನೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ.
ಇದೇ ವೇಳೆ ದೇಶದ ಗ್ರಾಮೀಣ ನಿರುದ್ಯೋಗ ದರವು ಇಳಿಕೆ ಕಂಡಿದೆ. ಅಕ್ಟೋಬರ್ನಲ್ಲಿ ಶೇ. 8.04ರಷ್ಟಿದ್ದ ಗ್ರಾಮೀಣ ನಿರುದ್ಯೋಗ ದರ ನವೆಂಬರ್ ವೇಳೆಗೆ ಇದೀಗ ಶೇ. 7.55ಕ್ಕೆ ಇಳಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ದತ್ತಾಂಶಗಳು ತೋರಿಸಿವೆ.
ಸರ್ಕಾರವು ತನ್ನದೇ ಆದ ಮಾಸಿಕ ನಿರುದ್ಯೋಗ ಅಂಕಿ - ಅಂಶಗಳನ್ನು ಬಿಡುಗಡೆ ಮಾಡದೇ ಇರುವ ಕಾರಣ ಮುಂಬೈ ಮೂಲದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ - ಅಂಶಗಳನ್ನು ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ಸೂಕ್ಷ್ಮವಾಗಿ ಗಮನಿಸುತ್ತಾರೆ.
ಆರ್ಥಿಕ ಹಿಂಜರಿತದ ಜತೆ ನಿರುದ್ಯೋಗದ ಭೀತಿ
ಒಂದೆಡೆ ಜಗತ್ತಿನೆಲ್ಲೆಡೆ ಆರ್ಥಿಕ ಹಿಂಜರಿತದ ಭಯ ಆವರಿಸಿಕೊಂಡಿದೆ. ಹತ್ತಾರು ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿವೆ. ಇದರ ನಡುವೆ ಭಾರತೀಯ ಆರ್ಥಿಕತೆಯೂ ನಿಧಾನಗತಿಗೆ ಹೊರಳಿದ್ದು ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಶೇ. 6.3ಕ್ಕೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಡಿಪಿ ಶೇ. 8.4ರಷ್ಟಿತ್ತು. ಜಿಡಿಪಿ ಕುಸಿತದ ಜತೆ ಜತೆಗೆ ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿರುವುದು ತೀವ್ರ ಕಳವಳ ಹುಟ್ಟುಹಾಕಿದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್ಸ್ಕ್ರೈಬ್ ಆಗಿ.