ಆ್ಯಪ್ನಗರ

ಚುನಾವಣೆ ಎಫೆಕ್ಟ್: ರೂಪಾಯಿ ಮೌಲ್ಯ ಏರಿಕೆ ಸಂಭವ

ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರೂಪಾಯಿ ಮೌಲ್ಯ ವೃದ್ಧಿಸಿದೆ ಎಂದು ಡಚ್‌ ಬ್ಯಾಂಕ್‌ ವರದಿ ತಿಳಿಸಿದೆ.

Vijaya Karnataka Web 12 Apr 2019, 10:49 am
ಮುಂಬಯಿ: ಹದಿನೇಳನೇ ಲೋಕಸಭೆಗೆ ಚುನಾವಣೆಯ ಮೊದಲ ಹಂತ ಗುರುವಾರ ಆರಂಭವಾಗಿದ್ದು, ಮೇ 19ರಂದು ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆಯಾಗುವ ಸಾಧ್ಯತೆ ಇದೆ.
Vijaya Karnataka Web rupee


ಈ ಹಿಂದಿನ ನಿದರ್ಶನಗಳನ್ನು ಅವಲೋಕಿಸಿದರೆ, ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರೂಪಾಯಿ ಮೌಲ್ಯ ವೃದ್ಧಿಸಿದೆ ಎಂದು ಡಚ್‌ ಬ್ಯಾಂಕ್‌ ವರದಿ ತಿಳಿಸಿದೆ.

ಸಾಮಾನ್ಯವಾಗಿ ಚುನಾವಣೆಯ ನಂತರ ರೂಪಾಯಿ ಮೌಲ್ಯದಲ್ಲಿ ಕ್ರಮೇಣ ಇಳಿಕೆಯಾಗುತ್ತದೆ. ಆದರೆ ಫಲಿತಾಂಶವು ಆಡಳಿತಾರೂಢ ಪಕ್ಷದ ಪರವಾಗಿ ಬಂದರೆ, ಮೇ ಅಂತ್ಯದ ತನಕವೂ ರೂಪಾಯಿ ಮೌಲ್ಯ ಏರುಗತಿಯಲ್ಲಿರಬಹುದು ಎಂದು ತಿಳಿಸಿದೆ.

ಆರ್‌ಬಿಐ ರೂಪಾಯಿಯ ಬೆಲೆಯಲ್ಲಿ ಸ್ಥಿರತೆ ಕಂಡುಕೊಳ್ಳುವ ಸಲುವಾಗಿ ಡಾಲರ್‌ಗಳನ್ನು ಖರೀದಿಸುವ ಸಾಧ್ಯತೆಗಳೂ ಇದೆ ಎಂದಿದೆ. ಸದ್ಯಕ್ಕೆ ರೂಪಾಯಿ ಮೌಲ್ಯ 69 ರೂ.ಗಳ ಆಸುಪಾಸಿನಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ