ಆ್ಯಪ್ನಗರ

ಹೆಚ್ಚಿದ ಬಿಸಿಲಿನ ಝಳ, ತರಕಾರಿ ಉತ್ಪಾದನೆ ಕುಂಠಿತ; ಬೀನ್ಸ್‌ ದರ ಏರಿಕೆ, ಕ್ಯಾರೆಟ್‌ ಅಗ್ಗ

ಒಂದೆಡೆ ಬಿಸಿಲಿನಿಂದಾಗಿ ಉತ್ಪಾದನೆ ಕುಂಠಿತಗೊಂಡಿದ್ದರೆ, ಎಲ್ಲೆಡೆ ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಗಳಿಂದಾಗಿ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕೆಲವು ಸೊಪ್ಪು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿದೆ.

Vijaya Karnataka Web 6 Mar 2023, 8:35 am
ಬೆಂಗಳೂರು: ಬಿಸಿಲಿನ ಝಳ ಏರುತ್ತಿದ್ದಂತೆಯೇ ಹುರುಳಿಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಏರುಮುಖವಾಗಿದೆ. ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು, ಕ್ಯಾರೆಟ್‌, ಬದನೆಕಾಯಿಗಳ ದರದಲ್ಲಿ ಕೊಂಚ ಏರಿಕೆಯಾಗಿದೆ. ಹುರುಳಿಕಾಯಿ ಕಳೆದ ವಾರ ಕೆ.ಜಿ.ಗೆ ಕೇವಲ 60 ರೂ. ಇದ್ದುದು ಈಗ 80 ರೂ. ತಲುಪಿದೆ.
Vijaya Karnataka Web Vendors sell vegetables


ಬಿಸಿಲಿನಿಂದಾಗಿ ಬೆಳೆಗಳಿಗೆ ನೀರು ಕಡಿಮೆಯಾಗಿ, ಉತ್ಪಾದನೆ ಕುಂಠಿತಗೊಂಡಿದೆ. ಇದೇ ವೇಳೆ ಎಲ್ಲೆಡೆ ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ತರಕಾರಿಗಳಿಗೆ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಸೊಪ್ಪು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದೆ.

ಹುರುಳಿಕಾಯಿ ಹೊರತುಪಡಿಸಿದರೆ ಇತರ ಎಲ್ಲಾ ತರಕಾರಿಗಳ ಬೆಲೆಯೂ ಸಾಧಾರಣವಾಗಿದೆ. ಸಗಟು ದರದಲ್ಲಿ ಎಲ್ಲಾ ಬಗೆಯ ತರಕಾರಿಗಳ ದರವೂ 15 ರಿಂದ 20 ರೂ. ಮಿತಿಯಲ್ಲಿದೆ. ಹುರುಳಿಕಾಯಿ ಮಾತ್ರ ಸಗಟು ದರದಲ್ಲಿ 38-40 ರೂ. ಇದೆ. ಚಿಲ್ಲರೆ ದರದಲ್ಲಿ 20 ರೂ. ಹೆಚ್ಚಿಸಿ ಮಾರಲಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಹಣ್ಣು, ತರಕಾರಿ ಫಸಲಿಗೆ ಬೇಸಿಗೆ ಬರೆ, ಉತ್ಪಾದನೆ 30% ಕುಸಿತ ಸಾಧ್ಯತೆ
ಕಳೆದ ಹಲವು ತಿಂಗಳಿಂದ ಕ್ಯಾರೆಟ್‌ ದರ ಕೆಜಿಗೆ 90-100 ರೂ. ಇತ್ತು. ಇದೀಗ ಕೆಜಿಗೆ 20-30 ರೂ.ಗೆ ಇಳಿಕೆಯಾಗಿದೆ. ಕೆ.ಆರ್‌. ಮಾರುಕಟ್ಟೆ ಮತ್ತಿತರ ಕಡೆ ಮೂರನೇ ದರ್ಜೆಯ ಕ್ಯಾರೆಟ್‌ ತಳ್ಳುಗಾಡಿಗಳಲ್ಲಿ ಕೆಜಿಗೆ ಕೇವಲ 10 ರೂ. ಗೆ ಮಾರಾಟವಾಗುತ್ತಿದೆ. ಈ ಬಾರಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾರಟ್‌ ಬೆಳೆದಿದ್ದಾರೆ. ಹೀಗಾಗಿ ಉತ್ಪಾದನೆ ಹೆಚ್ಚಾಗಿದ್ದು, ಬೆಲೆಗಳು ಕುಸಿದಿವೆ ಎನ್ನುತ್ತಾರೆ ಮಾರಾಟಗಾರರು.

ಹಾಪ್‌ಕಾಮ್ಸ್‌ನಲ್ಲಿ ಸೊಪ್ಪು-ತರಕಾರಿ ದರ (ಕೆ.ಜಿ.ಗಳಲ್ಲಿ)

ಕ್ರ. ಸಂ.ತರಕಾರಿ-ಸೊಪ್ಪುದರ (ಕೆ.ಜಿ.ಗಳಲ್ಲಿ)
1ಮೂಲಂಗಿ 26 ರೂ.
2ಬಜ್ಜಿ ಮೆಣಸಿನಕಾಯಿ 48 ರೂ.
3ಬದನೆಕಾಯಿ34 ರೂ.
4ಸೌತೆಕಾಯಿ 36 ರೂ.
5ಕ್ಯಾರೆಟ್‌ (ನಾಟಿ) 37 ರೂ.
6ಬೀಟ್‌ರೂಟ್‌ 27 ರೂ.
7ಹೀರೇಕಾಯಿ 60 ರೂ.
8ಟೊಮೆಟೊ 31 ರೂ.
9ಮೆಂತ್ಯ ಸೊಪ್ಪು 38 ರೂ.
10ದಂಟಿನ ಸೊಪ್ಪು 40 ರೂ.
11ಸಬ್ಬಸಿಗೆ ಸೊಪ್ಪು 44 ರೂ.
12ಕೊತ್ತಂಬರಿ ಸೊಪ್ಪು 30 ರೂ.
13ಪಾಲಾಕ್‌ ಸೊಪ್ಪು 43 ರೂ.
14ಬಾಳೆ ಎಲೆ ಒಂದಕ್ಕೆ 5 ರೂ.
15ಸಿಹಿ ಕುಂಬಳ 12 ರೂ.
16ಈರುಳ್ಳಿ 24 ರೂ.
17ಎಲೆಕೋಸು 16 ರೂ.
18ಡೆಲ್ಲಿಕ್ಯಾರೆಟ್‌68 ರೂ.
19ನವಿಲು ಕೋಸು28 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ