ಆ್ಯಪ್ನಗರ

ವಾಹನಗಳ ಮಾರಾಟ ಡಬಲ್‌: ಕೋವಿಡ್‌ ಪೂರ್ವ ಮಟ್ಟಕ್ಕೆ ಸುಧಾರಣೆ

ಕೆಲವು ಕಂಪನಿಗಳ ಪ್ಯಾಸೆಂಜರ್‌ ವಾಹನಗಳ ಮಾರಾಟ ಜೂನ್‌ಗೆ ಹೋಲಿಸಿದರೆ, ಜುಲೈನಲ್ಲಿ ದ್ವಿಗುಣಗೊಂಡಿದೆ. ಕೋವಿಡ್‌ ಪೂರ್ವ ದಿನಗಳ ಮಟ್ಟಕ್ಕೆ ಮಾರಾಟ ತಲುಪಿದೆ. ಸಣ್ಣ ಕಾರುಗಳು, ಸೆಡಾನ್‌ ಮತ್ತು ಎಸ್‌ಯುವಿಗಳ ಮಾರಾಟ ಸುಧಾರಿಸಿದೆ.

Vijaya Karnataka Web 3 Aug 2020, 9:37 am
ಮುಂಬಯಿ: ಕೆಲವು ಕಂಪನಿಗಳ ಪ್ಯಾಸೆಂಜರ್‌ ವಾಹನಗಳ ಮಾರಾಟ ಜೂನ್‌ಗೆ ಹೋಲಿಸಿದರೆ, ಜುಲೈನಲ್ಲಿ ದ್ವಿಗುಣಗೊಂಡಿದೆ. ಕೋವಿಡ್‌ ಪೂರ್ವ ದಿನಗಳ ಮಟ್ಟಕ್ಕೆ ಮಾರಾಟ ತಲುಪಿದೆ. ಸಣ್ಣ ಕಾರುಗಳು, ಸೆಡಾನ್‌ ಮತ್ತು ಎಸ್‌ಯುವಿಗಳ ಮಾರಾಟ ಸುಧಾರಿಸುತ್ತಿದ್ದು, ಆರ್ಥಿಕತೆ ಚೇತರಿಕೆಗೆ ಈ ಅಂಶವು ಸೂಚಕದಂತಿದೆ.
Vijaya Karnataka Web car sale


ಇತ್ತ, ಟ್ರ್ಯಾಕ್ಟರ್‌ಗಳ ಮಾರಾಟ ಜುಲೈನಲ್ಲಿ ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್‌ಗಳ ಮಾರಾಟವು ಜುಲೈನಲ್ಲಿ ಶೇ.28ರಷ್ಟು ಏರಿಕೆಯಾಗಿದೆ. ಉದ್ಯಮದ ಅಂದಾಜುಗಳ ಪ್ರಕಾರ, 1,97,523 ಪ್ಯಾಸೆಂಜರ್‌ ವಾಹನಗಳು ಕಳೆದ ತಿಂಗಳು ಮಾರಾಟವಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ. 2,00,790 ವಾಹನಗಳು ಇದೇ ಅವಧಿಯಲ್ಲಿ ಮಾರಾಟವಾಗಿದ್ದವು. ಆದರೆ, ಪ್ರಸಕ್ತ ವರ್ಷದ ಜೂನ್‌ನಲ್ಲಿ 1,05,617 ವಾಹನಗಳು ಮಾರಾಟವಾಗಿದ್ದು, ಇದಕ್ಕೆ ಹೋಲಿಸಿದರೆ ಜುಲೈನಲ್ಲಿ ಸಂಖ್ಯೆ ದ್ವಿಗುಣಗೊಂಡಿದೆ.

ಕೃಷಿ ಉದ್ದೇಶಿತ ಚಿನ್ನದ ಸಾಲದ ಬಡ್ಡಿಯನ್ನು ಶೇ.7ಕ್ಕೆ ಇಳಿಸಿದ ಇಂಡಿಯನ್‌ ಬ್ಯಾಂಕ್‌!

ಮುಂದಿನ ದಿನಗಳಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚುವ ವಿಶ್ವಾಸವನ್ನು ವಾಹನ ಕಂಪನಿಗಳು ಹೊಂದಿವೆ. ಮಾರುತಿ ಸುಜುಕಿಯ ಪ್ಯಾಸೆಂಜರ್‌ ವಾಹನಗಳ ಮಾರಾಟವು ಕಳೆದ ತಿಂಗಳಿಗೆ ಹೋಲಿಸಿದರೆ 91%, ಕಳೆದ ವರ್ಷಕ್ಕೆ ಹೋಲಿಸಿದರೆ 1.3% ಹೆಚ್ಚಳವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ