ಆ್ಯಪ್ನಗರ

13,960 ಕೋಟಿ ರೂ. ಸೆಟ್ಲ್‌ಮೆಂಟ್‌ ಆಫರ್‌ ನೀಡಿದ ವಿಜಯ್‌ ಮಲ್ಯ

ಬ್ರಿಟನ್‌ ಕೋರ್ಟ್‌ಗಳು ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಈಗಾಗಲೇ ಹಸಿರು ನಿಶಾನೆ ತೋರಿಸಿವೆ. ಆದರೆ, ಕಾನೂನು ಆಯ್ಕೆಗಳನ್ನು ಬಳಸಿ ಮಲ್ಯ ದಿನ ತಳ್ಳುತ್ತಿದ್ದಾರೆ. ಈ ಮಧ್ಯೆ, ರಾಜಾಶ್ರಯ ಕೋರಿಯೂ ಅವರು ಅರ್ಜಿ ಸಲ್ಲಿಸಿದ್ದಾರೆ.

Vijaya Karnataka Web 17 Jul 2020, 11:47 pm
ಹೊಸದಿಲ್ಲಿ: ಬ್ರಿಟನ್‌ನಿಂದ ಭಾರತಕ್ಕೆ ಉದ್ಯಮಿ ವಿಜಯ ಮಲ್ಯ ಅವರನ್ನು ಕರೆತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಏತನ್ಮಧ್ಯೆ, ರಾಜಿ ಮೂಲಕ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಮಲ್ಯ ಮುಂದಾಗಿದ್ದಾರೆ. ತಮ್ಮ ಸಾಲಕ್ಕೆ ಸಂಬಂಧಿಸಿದಂತೆ 13,960 ಕೋಟಿ ರೂ.ಗಳ ಸೆಟ್ಲ್‌ಮೆಂಟ್‌ ಪ್ಯಾಕೇಜ್‌ ಆಹ್ವಾನವನ್ನು ಸರಕಾರದ ಮುಂದಿಟ್ಟಿದ್ದಾರೆ.
Vijaya Karnataka Web ವಿಜಯ್‌ ಮಲ್ಯ
ವಿಜಯ್‌ ಮಲ್ಯ


ಬ್ಯಾಂಕ್‌ನಿಂದ 9,000 ಕೋಟಿ ರೂ.ಗಳ ಸಾಲ ಪಡೆದು ಸುಸ್ತಿದಾರರಾಗಿರುವ ಮಲ್ಯ, ಈಗ 13,960 ಕೋಟಿ ರೂ.ಗಳ ಆಫರ್‌ ಅನ್ನು ಬ್ಯಾಂಕ್‌ಗಳಿಗೆ ನೀಡಿದ್ದಾರೆ. ಸಾಲ ತೀರಿಸುವುದಾಗಿ ಹೇಳುತ್ತಲೇ ಬಂದಿದ್ದ ಅವರು, ಈ ಸಲ ಮೊತ್ತವನ್ನು ಸೂಚಿಸಿದ್ದಾರೆ.

ಮಲ್ಯ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಈ ಸಂಬಂಧ ವಿವರಣೆ ನೀಡಿದ್ದಾರೆ. ಮಲ್ಯ ನೀಡಿರುವ ಸೆಟ್‌್ಲಮೆಂಟ್‌ ಆಫರ್‌ ಅನ್ನು ಸರಕಾರವು ಒಪ್ಪಿ, ಅವರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಎಲ್ಲಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ವಕೀಲರು ಕೋರಿದ್ದಾರೆ. ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಮಲ್ಯ ವಕೀಲರ ಸೆಟ್ಲ್‌ಮೆಂಟ್‌ ಆಫರ್‌ ಅನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಿರೋಧಿಸಿದ್ದಾರೆ.

ಅಸಲೇ 9,000 ಕೋಟಿ ರೂ.!

ಮಲ್ಯ ಪಡೆದಿರುವ ಸಾಲದಲ್ಲಿಅ ಸಲು 9,000 ಕೋಟಿ ರೂ. ಇದೆ. ಈಗ 13,960 ಕೋಟಿ ರೂ. ಪಡೆದು ಕೇಸುಗಳಿಂದ ಪಾರಾಗಲು ಮಲ್ಯ ಹೊರಟಿದ್ದಾರೆ.

ರಾಜಾಶ್ರಯಕ್ಕೆ ಕಸರತ್ತು

ಬ್ರಿಟನ್‌ ಕೋರ್ಟ್‌ಗಳು ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಈಗಾಗಲೇ ಹಸಿರು ನಿಶಾನೆ ತೋರಿಸಿವೆ. ಆದರೆ, ಕಾನೂನು ಆಯ್ಕೆಗಳನ್ನು ಬಳಸಿ ಮಲ್ಯ ದಿನ ತಳ್ಳುತ್ತಿದ್ದಾರೆ. ಈ ಮಧ್ಯೆ, ರಾಜಾಶ್ರಯ ಕೋರಿಯೂ ಅವರು ಅರ್ಜಿ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ