ಆ್ಯಪ್ನಗರ

‘ದಯವಿಟ್ಟು ನಿಮ್ಮ ದುಡ್ಡು ತಗೊಳ್ಳಿ’: ಬ್ಯಾಂಕ್‌ಗಳಿಗೆ ವಿಜಯ್‌ ಮಲ್ಯ ಮತ್ತೆ ಆಫರ್‌

‘‘ನಿಮ್ಮ ಹಣ ನೀವು ತೆಗೆದುಕೊಳ್ಳಿ ಎಂದು ನಾನು ಬ್ಯಾಂಕ್‌ಗಳಿಗೆ ಹೇಳುತ್ತಿದ್ದೇನೆ. ಆದರೆ, ಇದಕ್ಕೆ ಇ.ಡಿ. ಅವಕಾಶ ನೀಡುತ್ತಿಲ್ಲ. ನನ್ನ ಆಸ್ತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮತ್ತು ಇ.ಡಿ. ಕಾದಾಡುತ್ತಿವೆ,’’ ಎಂದು ಮಲ್ಯ ದೂರಿದ್ದಾರೆ.

PTI 14 Feb 2020, 7:49 pm
ಲಂಡನ್‌: ಬ್ಯಾಂಕ್‌ಗಳಿಗೆ ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ಬ್ಯಾಂಕ್‌ ಮುಖ್ಯಸ್ಥರೇ, ಈಗಲೇ ನಿಮ್ಮ ಮೂಲ ಹಣವನ್ನು (ಅಸಲು) ನೂರಕ್ಕೆ ನೂರರಷ್ಟೂ ವಾಪಸ್‌ ನೀಡುತ್ತೇನೆ. ದಯವಿಟ್ಟು ಸ್ವೀಕರಿಸಿ...
Vijaya Karnataka Web Vijay Malluya


- ಇದು ವಿದೇಶದಲ್ಲಿ ನೆಲೆ ನಿಂತಿರುವ ಉದ್ಯಮಿ ವಿಜಯ ಮಲ್ಯ ಅವರು ಬ್ಯಾಂಕ್‌ಗಳಿಗೆ ಮಾಡಿರುವ ಮನವಿ. ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ಸುಸ್ತಿದಾರರಾಗಿ ದೇಶದಿಂದ ಪರಾರಿಯಾದ ಮಲ್ಯ ಈಗ ಬ್ರಿಟನ್‌ನಲ್ಲಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತ ಒತ್ತಾಯಿಸಿದ್ದು, ಈ ಸಂಬಂಧಿ ವಿಚಾರಣೆ ಲಂಡನ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ. ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ಅವರು ಬ್ರಿಟಿಷ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆಗೆ ಹಾಜರಾಗಿದ್ದ 64 ವರ್ಷದ ಮಲ್ಯ, ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ‘‘ನಾನು ಹಣ ಮರು ಪಾವತಿ ಮಾಡುತ್ತಿಲ್ಲ ಎನ್ನುವುದು ಬ್ಯಾಂಕುಗಳ ದೂರು. ಇದರನ್ವಯ ಜಾರಿ ನಿರ್ದೇಶನಾಲಯವು (ಇ.ಡಿ) ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಾಳಧನ ವರ್ಗಾವಣೆ ತಡೆ ಕಾಯಿದೆಗೆ (ಪಿಎಂಎಲ್‌ಎ) ಒಳಪಡುವಂಥ ಯಾವುದೇ ಅಪರಾಧವನ್ನೂ ನಾನು ಮಾಡಿಲ್ಲ,’’ ಎಂದಿದ್ದಾರೆ.

‘‘ನಿಮ್ಮ ಹಣ ನೀವು ತೆಗೆದುಕೊಳ್ಳಿ ಎಂದು ನಾನು ಬ್ಯಾಂಕ್‌ಗಳಿಗೆ ಹೇಳುತ್ತಿದ್ದೇನೆ. ಆದರೆ, ಇದಕ್ಕೆ ಇ.ಡಿ. ಅವಕಾಶ ನೀಡುತ್ತಿಲ್ಲ. ನನ್ನ ಆಸ್ತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮತ್ತು ಇ.ಡಿ. ಕಾದಾಡುತ್ತಿವೆ,’’ ಎಂದು ಮಲ್ಯ ದೂರಿದ್ದಾರೆ.

ಭಾರತಕ್ಕೆ ವಾಪಸ್‌ ಬರ್ತಾರಾ?

ಭಾರತಕ್ಕೆ ಮತ್ತೆ ಮರಳುವಿರಾ ಎನ್ನುವ ಪ್ರಶ್ನೆಗೆ, ‘‘ನನ್ನ ಪರಿವಾರ ಮತ್ತು ನನ್ನ ಹಿತಾಸಕ್ತಿ ಎಲ್ಲಿರುವುದೋ ಅಲ್ಲಿಯೇ ನಾನೂ ಇರಬೇಕಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಸಿಬಿಐ ಮತ್ತು ಇ.ಡಿ. ಸರಿಯಾಗಿ ನಡೆದುಕೊಂಡಿಲ್ಲ,’’ ಎಂದು ವಿಜಯ ಮಲ್ಯ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ