ಆ್ಯಪ್ನಗರ

ಹೈಕೋರ್ಟ್‌ಗೆ ಮಲ್ಯ ಮಲತಾಯಿ ಮೊರೆ

ಬ್ಯಾಂಕ್‌ಗಳ ಸಾಲ ತೀರಿಸುವುದಾಗಿ ಹೇಳಿದ್ದ ಉದ್ಯಮಿ ವಿಜಯ ಮಲ್ಯ ಅವರಿಗೆ, ಅವರ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದ ಕಡೆಯಿಂದಲೇ ಕಾನೂನು ತಕರಾರು ಎದುರಾಗಿದೆ...

TNN 12 Dec 2018, 5:00 am
ಬೆಂಗಳೂರು: ಬ್ಯಾಂಕ್‌ಗಳ ಸಾಲ ತೀರಿಸುವುದಾಗಿ ಹೇಳಿದ್ದ ಉದ್ಯಮಿ ವಿಜಯ ಮಲ್ಯ ಅವರಿಗೆ, ಅವರ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದ ಕಡೆಯಿಂದಲೇ ಕಾನೂನು ತಕರಾರು ಎದುರಾಗಿದೆ.
Vijaya Karnataka Web Vijay Mallya


''ಯುಬಿಎಚ್‌ಎಲ್‌ನಲ್ಲಿ ನನ್ನ ಷೇರುಗಳಿದ್ದು, ಅದನ್ನು ಉಳಿಸಿಕೊಡಿ,'' ಎಂಬುದಾಗಿ ಮಲ್ಯ ಅವರ ಮಲತಾಯಿ ರಿತು ಮಲ್ಯಾ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬ್ಯಾಂಕ್‌ಗಳ ಸೆಟ್ಲಮೆಂಟ್‌ಗೆ ಸಂಬಂಧಿಸಿದಂತೆ ಮಲ್ಯ ಹೇಳಿಕೆ ನೀಡಿದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ. ತಮ್ಮ ಆಸ್ತಿಯನ್ನು ಮಾರಾಟ ಮಾಡಿ, ಸಾಲ ತೀರಿಸುವ ಇಂಗಿತವು ಮಲ್ಯ ಮಾತಿನಲ್ಲಿದೆ. ಆದರೆ, ರಿತು ಅವರ ತಕರಾರು ಈಗ ಕೇಳಿಬಂದಿದೆ. ಆದಾಗ್ಯೂ, ಎಚ್‌ಬಿಎಚ್‌ಎಲ್‌ನಲ್ಲಿ ಎಷ್ಟು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

''ನನ್ನ ಪತಿಯು 1983ರಲ್ಲಿ ನಿಧನರಾದಾಗ ಮೂರನೇ ಒಂದರಷ್ಟು ಷೇರುಗಳು ನನಗೆ ಸೇರಿದ್ದವು. ಅದರಲ್ಲಿ ಒಂದನ್ನೂ ನಾನು ಈ ತನಕ ಮಾರಾಟ ಮಾಡಿಲ್ಲ. ಸಾಲವನ್ನೂ ಪಡೆದಿಲ್ಲ. ನನ್ನ ಆಸ್ತಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ,'' ಎಂದು ರಿತು ಮಲ್ಯ ಹೇಳಿದ್ದಾರೆ. ಮಲ್ಯ ಅವರ ಗಡೀಪಾರಿಗೆ ಸಂಬಂಧಿಸಿದಂತೆ ಬ್ರಿಟನ್‌ ಕೋರ್ಟ್‌ ಇತ್ತೀಚೆಗಷ್ಟೇ ತೀರ್ಪು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ