ಆ್ಯಪ್ನಗರ

ವಿಜಯ ಬ್ಯಾಂಕ್‌ಗೆ 161 ಕೋಟಿ ರೂ. ಲಾಭ

ಸಾರ್ವಜನಿಕ ವಲಯದ ವಿಜಯ ಬ್ಯಾಂಕ್‌ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಫಲಿತಾಮಶವನ್ನು ಶುಕ್ರವಾರ ಪ್ರಕಟಿಸಿದ್ದು, 161.66 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹೊಸ ಉಳಿತಾಯ ಖಾತೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ಬ್ಯಾಂಕ್‌ ಕಂಡಿದ್ದು, ಬಿಸಿನೆಸ್‌ ಹೆಚ್ಚಲು ಕಾರಣವಾಗಿದೆ.

ವಿಕ ಸುದ್ದಿಲೋಕ 23 Jul 2016, 4:54 am
ಬೆಂಗಳೂರು: ಸಾರ್ವಜನಿಕ ವಲಯದ ವಿಜಯ ಬ್ಯಾಂಕ್‌ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಫಲಿತಾಮಶವನ್ನು ಶುಕ್ರವಾರ ಪ್ರಕಟಿಸಿದ್ದು, 161.66 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹೊಸ ಉಳಿತಾಯ ಖಾತೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ಬ್ಯಾಂಕ್‌ ಕಂಡಿದ್ದು, ಬಿಸಿನೆಸ್‌ ಹೆಚ್ಚಲು ಕಾರಣವಾಗಿದೆ.
Vijaya Karnataka Web vijaya bank rs 161 crore profit
ವಿಜಯ ಬ್ಯಾಂಕ್‌ಗೆ 161 ಕೋಟಿ ರೂ. ಲಾಭ


ಮೊದಲ ತ್ರೈಮಾಸಿಕದಲ್ಲಿ ಲಾಭಾಂಶ 13.4 ಪರ್ಸೆಂಟ್‌ ಹೆಚ್ಚಳವಾಗಿದ್ದು, ಬಿಸಿನೆಸ್‌ ಶೇ.6.12ರಷ್ಟು ಏರಿಕೆಯಾಗಿದೆ. ಅಂದರೆ 21,7839 ಕೋಟಿ ರೂ.ಗೆ ಏರಿದೆ.

ಹೀಗಿದ್ದರೂ ಬ್ಯಾಂಕ್‌ನ ಅನುತ್ಪಾದಕ ಸಾಲದ ಮೊತ್ತ (ಎನ್‌ಪಿಎ) ಬೆಳೆದಿದ್ದು, ಇದು ಒಟ್ಟು ಮುಂಗಡದ ಶೇ.7.31ಕ್ಕೆ ವೃದ್ಧಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ.3.39ರಷ್ಟಿತ್ತು. ನಿವ್ವಳ ಎನ್‌ಪಿಎ ಶೇ.5.42ಕ್ಕೆ ಜಿಗಿದಿದೆ. ಎನ್‌ಪಿಎ ನಿರ್ವಹಣೆ ಕುರಿತು ಬ್ಯಾಂಕ್‌ 267.82 ಕೋಟಿ ರೂ.ಗಳನ್ನು ತೆಗೆದಿಟ್ಟಿದೆ. ವರ್ಷದ ಹಿಂದೆ 146.38 ಕೋಟಿ ರೂ.ಗಳನ್ನು ತೆಗೆದಿರಿಸಿತ್ತು.

ಮುಂಬಯಿ ಷೇರು ಮಾರುಕಟ್ಟೆ ಕೇಂದ್ರ ಬಿಎಸ್‌ಇನಲ್ಲಿ ವಿಜಯ ಬ್ಯಾಂಕ್‌ನ ಷೇರು ದರ ಶೇ.3.37ರಷ್ಟು ಏರಿಕೆಯಾಗಿದ್ದು, 42.95 ರೂ.ನಷ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ