ಆ್ಯಪ್ನಗರ

ಬಿಎಸ್ಸೆನ್ನೆಲ್‌ನಲ್ಲಿ ವಿಆರ್‌ಎಸ್‌ಗೆ ಸಿದ್ಧತೆ ಚುರುಕು

50 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಉದ್ಯೋಗಿಗಳಿಗೆ ವಿಆರ್‌ಎಸ್‌ ಆಫರ್‌ ನೀಡುವ ನಿರೀಕ್ಷೆ ಇದೆ. ಇದರಿಂದ 54,000 ಸಿಬ್ಬಂದಿಗೆ ವಿಆರ್‌ಎಸ್‌ ಪಡೆಯಲು ಸಾಧ್ಯವಾಗಲಿದೆ.

Vijaya Karnataka Web 6 Apr 2019, 2:50 pm
ಹೊಸದಿಲ್ಲಿ: ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್ಸೆನ್ನೆಲ್‌ ಹಾಗೂ ಎಂಟಿಎನ್‌ಎಲ್‌ನಲ್ಲಿ ಉದ್ಯೋಗಿಗಳಿಗೆ ಸ್ವಯಂ ಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೊಳಿಸಲು ಸಿದ್ಧತೆ ಚುರುಕಾಗಿದ್ದು, ಉಭಯ ಟೆಲಿಕಾಂ ಕಂಪನಿಗಳ ಅಧಿಕಾರಿಗಳು ಪ್ರಧಾನಿಯವರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದು, ವಿಆರ್‌ಎಸ್‌ ಜಾರಿ ಬಗ್ಗೆ ಚರ್ಚಿಸಿದ್ದಾರೆ.
Vijaya Karnataka Web bsnl


50 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಉದ್ಯೋಗಿಗಳಿಗೆ ವಿಆರ್‌ಎಸ್‌ ಆಫರ್‌ ನೀಡುವ ನಿರೀಕ್ಷೆ ಇದೆ. ಇದರಿಂದ 54,000 ಸಿಬ್ಬಂದಿಗೆ ವಿಆರ್‌ಎಸ್‌ ಪಡೆಯಲು ಸಾಧ್ಯವಾಗಲಿದೆ. ಒಟ್ಟು 1.76 ಲಕ್ಷ ಉದ್ಯೋಗಿಗಳು ಬಿಎಸ್ಸೆನ್ನೆಲ್‌ನಲ್ಲಿ ದುಡಿಯುತ್ತಿದ್ದಾರೆ.

ಬಿಎಸ್ಸೆನ್ನೆಲ್‌ 2017-18ರಲ್ಲಿ 8,000 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಎಂಟಿಎನ್‌ಎಲ್‌ 3,000 ಕೋಟಿ ರೂ. ನಷ್ಟಕ್ಕೀಡಾಗಿತ್ತು.

ದೂರ ಸಂಪರ್ಕ ಇಲಾಖೆಯು ಮುಂದಿನ ಕೆಲ ದಿನಗಳಲ್ಲಿ ವಿಆರ್‌ಎಸ್‌ ಆಯ್ಕೆ ಬಗ್ಗೆ ಸಂಪುಟ ಟಿಪ್ಪಣಿ ರಚಿಸಲಿದೆ. ಇದಕ್ಕಾಗಿ ಚುನಾವಣಾ ಆಯೋಗದ ಅನುಮೋದನೆ ಪಡೆಯಲಿದೆ. ವಿಆರ್‌ಎಸ್‌ಗೆ ನಿಧಿ ಕ್ರೋಢೀಕರಿಸಲು 10 ವರ್ಷಗಳ ಬಾಂಡ್‌ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಎರಡೂ ಕಂಪನಿಗಳಿಗೆ ಉದ್ಯೋಗಿಗಳ ವೇತನ ವಿತರಣೆಯೇ ದೊಡ್ಡ ಮೊತ್ತವಾಗುತ್ತಿದೆ. ಬಿಎಸ್ಸೆನ್ನೆಲ್‌ನ ಆದಾಯದಲ್ಲಿ ಶೇ.65-70ರಷ್ಟು ಸಂಬಳ ವಿತರಿಸಲು ಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ