ಆ್ಯಪ್ನಗರ

16 ಶತಕೋಟಿ ಡಾಲರ್‌ಗೆ ಫ್ಲಿಪ್‌ಕಾರ್ಟ್‌ನ ಶೇ. 77 ಷೇರು ಖರೀದಿಸಿದ ವಾಲ್‌ಮಾರ್ಟ್‌

ಭಾರತದ ರಿಟೇಲ್ ಮಾರುಕಟ್ಟೆ ಜಗತ್ತಿನಲ್ಲೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಮತ್ತು ಅವಕಾಶ ಹೊಂದಿರುವ ಮಾರುಕಟ್ಟೆಯಾಗಿದೆ. ಇದರಿಂದಾಗಿ ವಾಲ್‌ಮಾರ್ಟ್‌ ದೇಶದಲ್ಲಿ ಹೂಡಿಕೆಗೆ ಮುಂದಾಗಿದೆ ಎಂದು ವಾಲ್‌ಮಾರ್ಟ್‌ ಅಧ್ಯಕ್ಷ ಮತ್ತು ಸಿಇಒ ಡೌಗ್ ಮ್ಯಾಕ್‌ಮಿಲನ್ ತಿಳಿಸಿದ್ದಾರೆ.

Vijaya Karnataka Web 9 May 2018, 6:50 pm
ಹೊಸದಿಲ್ಲಿ: ದೇಶದ ಅತಿದೊಡ್ಡ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ಶೇ. 77 ಷೇರುಗಳನ್ನು 16 ಶತಕೋಟಿ ಡಾಲರ್‌ಗೆ ಖರೀದಿಸುವ ಮೂಲಕ ಅಮೆರಿಕದ ವಾಲ್‌ಮಾರ್ಟ್‌ ಭಾರತದ ಇ ಕಾಮರ್ಸ್ ಮಾರುಕಟ್ಟೆಗೆ ಅದ್ಧೂರಿಯಾಗಿ ಲಗ್ಗೆ ಇರಿಸಿದೆ.
Vijaya Karnataka Web walmart-buys-flipkart-in-worlds-largest-ecommerce-deal


ಭಾರತದ ರಿಟೇಲ್ ಮಾರುಕಟ್ಟೆ ಜಗತ್ತಿನಲ್ಲೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಮತ್ತು ಅವಕಾಶ ಹೊಂದಿರುವ ಮಾರುಕಟ್ಟೆಯಾಗಿದೆ. ಇದರಿಂದಾಗಿ ವಾಲ್‌ಮಾರ್ಟ್‌ ದೇಶದಲ್ಲಿ ಹೂಡಿಕೆಗೆ ಮುಂದಾಗಿದೆ ಎಂದು ವಾಲ್‌ಮಾರ್ಟ್‌ ಅಧ್ಯಕ್ಷ ಮತ್ತು ಸಿಇಒ ಡೌಗ್ ಮ್ಯಾಕ್‌ಮಿಲನ್ ತಿಳಿಸಿದ್ದಾರೆ.

ಖರೀದಿ ಜತೆಗೆ ಸುಮಾರು 13,000 ಕೋಟಿ ರೂ.ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ ಮಾಡಲಿದ್ದು, ಇ ಕಾಮರ್ಸ್‌ ಕ್ಷೇತ್ರದಲ್ಲಿ ಮತ್ತಷ್ಟು ಸ್ಪರ್ಧೆ ಏರ್ಪಡಲಿದೆ.

ಮಂಗಳವಾರ ರಾತ್ರಿ ಫ್ಲಿಪ್‌ಕಾರ್ಟ್ ಷೇರು ಖರೀದಿಗೆ ವಾಲ್‌ಮಾರ್ಟ್ ಅಂತಿಮ ಒಪ್ಪಿಗೆ ನೀಡಿತು ಎಂದು ಫ್ಲಿಪ್‌ಕಾರ್ಟ್‌ನಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ್ದ ಜಪಾನ್ ಮೂಲದ ಸಾಫ್ಟ್‌ಬ್ಯಾಂಕ್ ತಿಳಿಸಿತ್ತು. ಫ್ಲಿಪ್‌ಕಾರ್ಟ್ ಖರೀದಿಗೆ ದೇಶದಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಅಮೆಜಾನ್ ಕೂಡ ಮುಂದಾಗಿತ್ತು.

ವಾಲ್‌ಮಾರ್ಟ್ ಶೇ. 77 ಷೇರುಗಳನ್ನು ಖರೀದಿ ಮಾಡಿದ್ದು, ಉಳಿದ ಶೇ. 23 ಷೇರುಗಳನ್ನು ಫ್ಲಿಪ್‌ಕಾರ್ಟ್‌ನ ಮೂಲ ಷೇರುದಾರರು, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್, ಚೀನಾದ ಟೆನ್‌ಸೆಂಟ್‌ ಹೋಲ್ಡಿಂಗ್ಸ್‌, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಮತ್ತು ಮೈಕ್ರೋಸಾಫ್ಟ್‌ ಕಾರ್ಪೋರೇಷನ್ ಹೊಂದಿದೆ.
2007ರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣವನ್ನು ಸ್ಥಾಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ