ಆ್ಯಪ್ನಗರ

ಪ್ರತಿವರ್ಷ $10 ಬಿಲಿಯನ್ ಮೌಲ್ಯದ ಭಾರತ ನಿರ್ಮಿತ ಉತ್ಪನ್ನಗಳ ರಫ್ತಿಗೆ ವಾಲ್‍ಮಾರ್ಟ್ ಸಂಕಲ್ಪ!

ಜಾಗತಿಕ ರೀಟೇಲ್‌ ಸಂಸ್ಥೆ ವಾಲ್‍ಮಾರ್ಟ್‌ 2027ರ ವೇಳೆಗೆ ಪ್ರತಿವರ್ಷವೂ 10 ಬಿಲಿಯನ್ ಡಾಲರ್ ಮೌಲ್ಯದ ಭಾರತ ನಿರ್ಮಿತ ಉತ್ಪನ್ನಗಳನ್ನು ರಫ್ತು ಮಾಡುವ ಸಂಕಲ್ಪ ಹೊಂದಿದೆ. ಈ ಮೂಲಕ ತನ್ನ ಒಟ್ಟಾರೆ ರಫ್ತು ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳಲಿದೆ.

Vijaya Karnataka Web 10 Dec 2020, 11:04 pm
ಬೆಂಗಳೂರು: ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಹಬ್ ಆಗಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಾಲ್‍ಮಾರ್ಟ್ ವ್ಯಾಪಾರ ಗುರಿಯನ್ನು ವಿಸ್ತರಿಸಿಕೊಂಡಿದೆ. 2027ರ ವೇಳೆಗೆ ಪ್ರತಿವರ್ಷವೂ 10 ಬಿಲಿಯನ್ ಡಾಲರ್ (70 ಸಾವಿರ ಕೋಟಿ ರೂಪಾಯಿ) ಮೌಲ್ಯದ ಭಾರತ ನಿರ್ಮಿತ ಉತ್ಪನ್ನಗಳನ್ನು ರಫ್ತು ಮಾಡುವ ಸಂಕಲ್ಪ ಹೊಂದಿದೆ. ಈ ಮೂಲಕ ತನ್ನ ಒಟ್ಟಾರೆ ರಫ್ತು ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ.
Vijaya Karnataka Web Walmart
The exports boosting initiatives would come in addition to Walmart's existing vendor development programmes including Flipkart Samarth and Walmart Vriddhi.


ಪ್ರಸ್ತುತ ವಾಲ್‍ಮಾರ್ಟ್‍ನ ಹೊಸ ರಫ್ತು ಗುರಿಯಿಂದಾಗಿ ಭಾರತದಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‍ಎಂಇಗಳು) ಗಣನೀಯ ಪ್ರಮಾಣದಲ್ಲಿ ಉನ್ನತಿ ಪಡೆಯಲಿವೆ ಎಂಬ ನಿರೀಕ್ಷೆಗಳಿವೆ. ಜೊತೆಗೆ 'ಫ್ಲಿಪ್‍ಕಾರ್ಟ್ ಸಮರ್ಥ್' ಮತ್ತು 'ವಾಲ್‍ಮಾರ್ಟ್ ವೃದ್ಧಿ' ಕಾರ್ಯಕ್ರಮಗಳ ಮೂಲಕ ಪೂರೈಕೆದಾರರ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.

ಆಹಾರ, ಔಷಧಿ, ಗ್ರಾಹಕ ಬಳಕೆ ಉತ್ಪನ್ನಗಳು, ಆರೋಗ್ಯ ಮತ್ತು ಕ್ಷೇಮ ಹಾಗೂ ಸಾಮಾನ್ಯ ವ್ಯಾಪಾರಗಳು ಸೇರಿದಂತೆ ಇನ್ನಿತರೆ ವ್ಯವಹಾರಗಳ ನೂರಾರು ಹೊಸ ಪೂರೈಕೆದಾರರಿಗೆ ಬೆಳವಣಿಗೆ ಹೊಂದಲು ವಾಲ್‍ಮಾರ್ಟ್‍ನ ಈ ವಿಸ್ತರಣೆ ಕಾರ್ಯಕ್ರಮ ನೆರವಾಗಲಿದೆ. ಇದಿಷ್ಟೇ ಅಲ್ಲದೇ, ಜವಳಿ, ಹೋಮ್‌ ವೇರ್ ಮತ್ತು ಇತರೆ ಪ್ರಮುಖ ಭಾರತೀಯ ರಫ್ತು ವಿಭಾಗಗಳಿಗೂ ನೆರವು ಸಿಗಲಿದೆ.

ಭಾರತ ಮೂಲದ ಉದ್ಯಮಿಗಳಿಂದ ಬ್ರಿಟನ್‌ ವಾಲ್‌ಮಾರ್ಟ್‌ ಘಟಕ ಖರೀದಿ!

ವಾಲ್‍ಮಾರ್ಟ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೌಗ್ ಮ್ಯಾಕ್‍ಮಿಲನ್ ಅವರು ಮಾತನಾಡಿ, ``ಅಂತಾರಾಷ್ಟ್ರೀಯ ರೀಟೇಲರ್ ಆಗಿರುವ ನಮ್ಮ ಸಂಸ್ಥೆಯು ವಿಶ್ವದಾದ್ಯಂತ ಗ್ರಾಹಕರು ಮತ್ತು ಸಮುದಾಯಗಳಿಗೆ ಮೌಲ್ಯ ತಂದುಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ರೀಟೇಲ್ ಕ್ಷೇತ್ರದ ಯಶಸ್ಸಿಗೆ ಸ್ಥಳೀಯ ಉದ್ಯಮಿಗಳು ಮತ್ತು ತಯಾರಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ವಾಲ್‍ಮಾರ್ಟ್ ಅರ್ಥ ಮಾಡಿಕೊಂಡಿದೆ. ಮತ್ತು ವಾಲ್‍ಮಾರ್ಟ್ ಪೂರೈಸುತ್ತಿರುವ ಜಾಗತಿಕ ವಿತರಣಾ ಅವಕಾಶಗಳನ್ನು ಮತ್ತು ವಿನೂತನವಾದ ಮಾನದಂಡಗಳನ್ನು ಬಳಸಿಕೊಂಡು ಭಾರತೀಯ ಪೂರೈಕೆದಾರರು ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳಲು ದೊಡ್ಡ ಮಟ್ಟದ ಅವಕಾಶಗಳಿವೆ’’ ಎಂದು ತಿಳಿಸಿದರು.

``ಮುಂಬರುವ ವರ್ಷಗಳಲ್ಲಿ ನಮ್ಮ ವಾರ್ಷಿಕ ಭಾರತ ರಫ್ತುಗಳನ್ನು ಗಣನೀಯ ಪ್ರಮಾಣದಲ್ಲಿ ವೇಗಗೊಳಿಸಲಿದ್ದೇವೆ. ಈ ಮೂಲಕ ನಾವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುತ್ತಿದ್ದೇವೆ ಮತ್ತು ಹೆಚ್ಚಿನ ಸ್ಥಳೀಯ ವ್ಯವಹಾರಗಳು ಅಂತಾರಾಷ್ಟ್ರೀಯ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತಿದ್ದೇವೆ. ಇದೇ ಸಮಯದಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮನೆಗಳಲ್ಲಿ ಸಮೃದ್ಧಿಯನ್ನು ಸೃಷ್ಟಿಸಲಿದ್ದೇವೆ. ವಾಲ್‍ಮಾರ್ಟ್‍ಗೆ ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಹೆಚ್ಚು ಉತ್ತಮ ಗುಣಮಟ್ಟದ ಭಾರತ ನಿರ್ಮಿತ ಅಂದರೆ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಪೂರೈಸಲು ಇದೊಂದು ಉತ್ತಮ ಅವಕಾಶ ಒದಗಿಬಂದಿದೆ’’ ಎಂದು ಅವರು ಹೇಳಿದರು.

ಜಿಯೋ ಮಾರ್ಟ್‌ಗೆ ಸಡ್ಡು, 9,600 ಕೋಟಿ ರೂ.ಗೆ ಬಿಗ್‌ಬಾಸ್ಕೆಟ್‌ ಖರೀದಿಯತ್ತ ಟಾಟಾ ಗ್ರೂಪ್‌

ಫ್ಲಿಪ್‍ಕಾರ್ಟ್ ಗ್ರೂಪ್‍ನ ಮುಖ್ಯ ಕಾರ್ಯಕಾರಿ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು ಮಾತನಾಡಿ, ``ಸಾವಿರಾರು ಭಾರತೀಯ ಬ್ರ್ಯಾಂಡ್‍ಗಳು, ಎಂಎಸ್‍ಎಂಇಗಳು ಮತ್ತು ಕುಶಲಕರ್ಮಿಗಳ ವ್ಯವಹಾರಗಳನ್ನು ಯಶಸ್ವಿಗೊಳಿಸುವತ್ತ ಗಮನಹರಿಸಲಾಗುತ್ತದೆ. ಅವರಿಗೆ ಭಾರತದಾದ್ಯಂತದ ಮಾರುಕಟ್ಟೆಯನ್ನು ತಲುಪಲು ಮತ್ತು ತಮ್ಮ ಎಲ್ಲಾ ಪ್ರಮುಖ ಬ್ರ್ಯಾಂಡಿಂಗ್, ಮಾರುಕಟ್ಟೆ, ಲಾಜಿಸ್ಟಿಕ್ಸ್ ಮತ್ತು ಜಾಗತಿಕ ಮಾರುಕಟ್ಟೆವರೆಗೂ ಕೊಂಡೊಯ್ಯಲು ನಾವು ವೇದಿಕೆ ಒದಗಿಸಿಕೊಡುತ್ತೇವೆ. ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಭಾರತೀಯ ಕಂಪನಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ಜಾಗತಿಕ ಮಟ್ಟಕ್ಕೆ ತಲುಪಿಸುವುದಕ್ಕಾಗಿ ಹೂಡಿಕೆ ಮಾಡುತ್ತಿರುವ ವಾಲ್‍ಮಾರ್ಟ್‍ನ ಕ್ರಮ ಸ್ವಾಗತಾರ್ಹವಾಗಿದೆ’ ಎಂದರು.

ಭಾರತದ ತನ್ನ ರಫ್ತು ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ರಫ್ತುದಾರರನ್ನು ಉತ್ತೇಜಿಸುವ ಮೂಲಕ ಹಾಗೂ ದೇಶದ ರಫ್ತು ಸಿದ್ಧವಾದ ವ್ಯವಹಾರಗಳನ್ನು ವಿಸ್ತರಿಸುವುದರೊಂದಿಗೆ ವಾಲ್‍ಮಾರ್ಟ್ ಭಾರತದಲ್ಲಿ ತನ್ನ ಪೂರೈಕೆ ಸರಪಳಿಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ