ಆ್ಯಪ್ನಗರ

ಅಧಿಕ ಮೊತ್ತದ ಆಸ್ಪತ್ರೆ ಬಿಲ್‌ನಿಂದ ಪಾರಾಗುವುದು ಹೇಗೆ?

ನಮ್ಮ ಸೆಂಟಿಮೆಂಟ್‌ ಅನ್ನೇ ಬಂಡವಾಳಗಿಸಿವೆ ಕೆಲ ದಂಧೆಕೋರ ಖಾಸಗಿ ಆಸ್ಪತ್ರೆಗಳು.

Vijaya Karnataka Web 21 Nov 2017, 4:46 pm
ಡೆಂಗೆ ಜ್ವರದಿಂದ ಬಳಲುತ್ತಿದ್ದ 7 ವರ್ಷದ ಬಾಲಕಿ ಆದ್ಯಾಳ ಚಿಕಿತ್ಸೆಗೆ ಗುರ್ಗಾಂವ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆ 16 ಲಕ್ಷ ಬಿಲ್‌ ಮಾಡಿರುವ ಕುರಿತು ಭಾರತದೆಲ್ಲಡೆ ತೀವ್ರ ಚರ್ಚೆ ನಡೆಯುತ್ತಿದೆ. ಆಸ್ಪತ್ರೆಯ ಈ ದಂಧೆಯಿಂದಾಗಿ ಮಗಳು ಮತ್ತು ಹಣವನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ ಆದ್ಯಾಳ ಪೋಷಕರು.
Vijaya Karnataka Web want to avoid fortis like mega medical bills
ಅಧಿಕ ಮೊತ್ತದ ಆಸ್ಪತ್ರೆ ಬಿಲ್‌ನಿಂದ ಪಾರಾಗುವುದು ಹೇಗೆ?


ನಮ್ಮ ಆಪ್ತರು ಆಸ್ಪತ್ರೆಗೆ ದಾಖಲಾದಾಗ ಯಾರೂ ದುಡ್ಡಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಷ್ಟು ದುಡ್ಡು ಖರ್ಚಾದರೂ ಪರ್ವಾಗಿಲ್ಲ, ಮೊದಲಿನಂತೆ ಆರೋಗ್ಯವಂತರಾದರೆ ಸಾಕು ಎಂದು ಕೈಯಲ್ಲಿ ದುಡ್ಡು ಇಲ್ಲದಿದ್ದರೂ ಸಾಲ-ಸೋಲ ಮಾಡಿಯಾದರೂ ಆಸ್ಪತ್ರೆಯವರು ಹೇಳಿದ ಮೊತ್ತ ತಂದು ಕಟ್ಟುತ್ತೇವೆ. ಈ ನಮ್ಮ ಸೆಂಟಿಮೆಂಟ್‌ ಅನ್ನೇ ಬಂಡವಾಳಗಿಸಿವೆ ಕೆಲ ದಂಧೆಕೋರ ಖಾಸಗಿ ಆಸ್ಪತ್ರೆಗಳು.

ಡೆಂಗ್ಯೂ ಜ್ವರಕ್ಕೆ ಮಗು ಬಲಿ, ಪೋಷಕರಿಗೆ 16 ಲಕ್ಷ ಬಿಲ್‌ ಮಾಡಿದ ಫೋರ್ಟಿಸ್‌

ಅದರಲ್ಲೂ ಮಧ್ಯಮ ವರ್ಗದ ಕುಟುಂಬದ ಮನೆಯಲ್ಲಿ ಯಾರಾದರೂ ಕಾಯಿಲೆಗೆ ತುತ್ತಾದರೆ ಆ ಕುಟುಂಬದ ಪರಿಸ್ಥಿತಿ ತುಂಬಾ ಶೋಚನೀಯ ಸ್ಥಿತಿ ತಲುಪುವುದು.

ನಾವು ಜೀವನದಲ್ಲಿ ಸರಿಯಾದ ಪ್ಲಾನ್ ಮಾಡಿದರೆ ಮನೆಯವರಿಗೆ ಅನಾರೋಗ್ಯ ಉಂಟಾದಾಗ ತೀವ್ರ ಆರ್ಥಿಕ ತೊಂದರೆಗೆ ಒಳಗಾಗುವುದನ್ನು ತಪ್ಪಿಸಬಹುದು.

ಅದಕ್ಕಾಗಿ ನಾವು ಮಾಡಬೇಕಾದದು ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸಬೇಕು. ಯಾರಿಗೆ- ಯಾವಾಗ ಆರೋಗ್ಯ ಕೈ ಕೊಡುತ್ತೆ ಎಂದು ಹೇಳಲು ಸಾಧ್ಯವಿಲ್ಲ.

ಇದ್ದಕ್ಕಿದ್ದಂತೆ ಆರೋಗ್ಯ ತಪ್ಪಿದಾಗ ನಮ್ಮ ಕೈಯಲ್ಲಿ ಹಣ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ಸಾಲಕ್ಕಾಗಿ ಅವರಿವರ ಬಳಿ ಕೇಳುವ ಬದಲು ಆರೋಗ್ಯ ವಿಮೆ ಕೈಯಲ್ಲಿದ್ದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ವಿಮೆ ಕಾರ್ಡ್‌ ಬಳಸಿ ಕ್ಯಾಶ್‌ಲೆಸ್‌ ಸೌಲಭ್ಯ ಪಡೆಯಬಹುದು. ಕೆಲವೊಂದು ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್‌ ವ್ಯವಸ್ಥೆ ಇರುವುದಿಲ್ಲ, ಅಂಥ ಕಡೆ ಪಾವತಿಸಿದ ಹಣವನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಬಳಿಕ ವಿಮೆ ಸಂಸ್ಥೆಗೆ ಕಳುಹಿಸಿ ಮರುಪಾವತಿ ಪಡೆಯಬಹುದಾಗಿದೆ.

ಆರೋಗ್ಯ ವಿಮೆ ಕೊಳ್ಳುವಾಗ ಎಚ್ಚರ

ಆರೋಗ್ಯ ವಿಮೆಯನ್ನು ಕೊಳ್ಳುವಾಗ ಎಚ್ಚರ ವಹಿಸಬೇಕು. ಅಧಿಕೃತ ಆರೋಗ್ಯ ವಿಮೆ ಕಂಪನಿಗಳ ವಿಮೆ ನಿಯಮಗಳನ್ನು ತಿಳಿದುಕೊಂಡು, ಅದರ ಕುರಿತು ಅದನ್ನು ಬಳಸುತ್ತಿರುವ ನಾಲ್ಕು ಜನರಲ್ಲಿ ಅಭಿಪ್ರಾಯ ಪಡೆದು ಆರೋಗ್ಯ ವಿಮೆ ಕೊಂಡುಕೊಳ್ಳಿ.

ಸುಲಭ ಕಂತುಗಳಲ್ಲಿ ಪಾಲಿಸಬಹುದಾದ ಹಲವಾರು ಉತ್ತಮ ಆರೋಗ್ಯ ವಿಮೆಗಳಿವೆ. ಇವುಗಳನ್ನು ಆಪತ್ತು ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ನಿಮ್ಮನ್ನು ಕಾಪಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ